ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಚಿಟ್ಟೆಗೆ (Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು). ನಿಂದಿರು ಕುಲುಂಕದಿರರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೆರೆವೆನೊರೆನ ಕೆಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ | ಹೊನ್ನಿನಂಬಿಯ ಗಾಡಿಯಿಂದ ತೇಲಾಡು, ಇನ್ನು ಪಾರದಿರೆನ್ನ ಬಳಿಯ ಸೊಗಡು; ಚಿಟ್ಟೆ ನೀ ನೆನವೊಳೆನ್ನಳವೆಯನಳುಂಬಂ ತಿಟ್ಟ ವಿಡೆ ಕಲವುದೆನ್ನಯ ಕುಟುಂಬಂ! ಇನಿದು ಕಟ್ಟಿ ನಿದಮವ ಹಸುಳೆಯ ಹೊತ್ತು ಕನಸಂತೆ ಮುಗಿದುದೆಯಾಟದೊಲವೆತ್ತು, ತಂಗಿಯೊಡಗೂಡಿ- ಅಕಟವಳೆಲ್ಲಿಗಿಂದು ? ಬೆಂಗೊಳುತ ಬೇಟೆಯಾಡಿದೆ ನಿಮ್ಮನಂದು. 12 ಕಿರುಬೇಡವಂತೆ ಪೊದೆಪೊದೆ ಸೋವ, ನಿಮ್ಮ ನರೆಬರನು ಹೊರಡಿಸಿ ಹಿತ್ತಿಲೊಳಗಮ್ಮ, ಸೆರೆವಿಡಿದು ಮುದ್ದು ತಂಗಿಗ ನೀಡಲವಳು ಗರಿಯ ದೂಳನು ಮಲ್ಲನೋರಸಲಳುಕುವಳು ! 16 ಪರಮಾತ್ಮನೆಲ್ಲಿ ರುವನು ? ಪರಮಾತ್ಮನಾರೆಂದು ತಿಳಿಯಲೆಳಸುವೆಯಾ ? ಇರುವನೆತ್ತಲೆನುತ್ತ ಕೇಳಲಿಚ್ಛಿಪೆಯಾ ?