ಪುಟ:ಗಿಳಿವಿಂಡು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ನಿನ್ನ ಹಸೆಯನಕ ಸಾಗುವೆನು, ಇಳಿಯುತ ಚುಂಬಿಸಿ ತಂಗುವೆನು ನಿನ್ನ ಹನಿವ ನನೆಗಂಗಳನು ನಿನ್ನೆವೆಗದವಿನಿಸರಳಿರಲು ಹೊಂಚುತ ಹಣಕುವೆನೆಳಬರಲು, ಸಸಿನೆ ನುಸುಳಿ ಕನಸಲಿ ನಿನ್ನ ಮುದ್ದಿ ಸುವೆನು ನಿದ್ದಿ ಸುವನ್ನ ಬೆಪ್ಪನೆದ್ದು ನೀ ದಿಗಿಲೆಂದು ಹಸೆಯೊಳೆನ್ನ ತಡವರಿದಂದು, ಯಾರಿಗವರಿಯದಿಹಲ್ಲಿ ತಟ್ಟನೆ ಮೆಯ್ದ ರೆಯುವೆನಲ್ಲಿ ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯ ಪೋಗಗೊಡು ಮಾನವಮಿಯ ಹಬ್ಬದ ದಿನದಿ ಬಾಲಕರೆಮ್ಮಯ ಪೂಬನದಿ ಆಡಲು ಬಂದು ನುಡಿವರಂದು ಈ ಮನೆಯಲ್ಲಿ ಮಗುವಿಲ್ಲೆಂದು; ಅಂದಾದರು ಕೊಳಲಿಂಚರದಿ ತೇಲುತ ರವಿಗದಿರಂಬರದಿ, ಮನೆಗೆಲಸವ ಗೆಯ್ಯುವ ನಿನ್ನ ಸೆರಗನೆ ಹಿಡಿದಾಂ ಬಿಡೆ ಬೆನ್ನ, ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋರಗೊಡು. ಹಬ್ಬದಡುಗೆರೆಗಳನ್ನು ತಂದು ನಮ್ಮಯ ಮನೆಗತ್ತಿಗೆ ಬಂದು,