ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
19 ಹೊಲೆಯನು ಯಾರು ? 65 ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದುಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು 70 ಹೊಲೆಯನು ಯಾರು ? || ಪಲ್ಲ|| ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೂಲೆಯ ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ