ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಳಿವಿಂಡು 17 ಈ ಸಮರವನು ಮುಗಿಸು, ಸೊಕ್ಕಿದವರನು ತಗಿಸು, ಸ್ನೇಹಮಳೆಗರೆದು ಶಾಂತಿಯ ಬೆಳೆಯಿಸಿನಿಯಾ | ನಿರಪರಾಧಿಯ ರಕ್ತ ದಿಂದ ನೆಲ ಜಲ ಸಿಕ್ಕ ನಾಗದೋಲು ಕಾಪಾಡು ದೇವಕೀತನಯಾ ! 6 ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತ ಗಾನದ ಸುಗ್ಗಿ, ಸೊಬಗ ತೆನೆಗೂಡಿ, ಕವಿತೆ ನವರಸ ರ೦ಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯನೊಡಗೂಡಿ ಧ್ಯಾನ ಗನಿಗಳ ರನ್ನ, ಪುಣಯ ಭಿಕ್ಷುವಿನನ್ನ, ಕವಿತೆ ಜೀವನಸಮರ ಯೋಧರ ತುತೂರಿ, ಕರುಣೆಯ ನಯನ ಬಿಂದು ವೇಕಾಂತತೆಯ ಬಂಧುಬಹುರೂಪದಿಂ ಸುಖಿಸುವುದು ಮನಮನವ ಸೇರಿ, ಇಂದುವುರುಗುವುದೇಕೆ ? ತಾರೆ ಮಿರುಗುವುದೇಕೆ ? ಕುಕಿಲು ಕರಗುವುದೇಕೆ ವಿರಹ ವಿಸ್ಕೃತಿಗೆ ? ಅವರವರಿಗದೆ ಧರ್ಮ ವಿದು ವಿಧಾತನ ಮರ್ಮಕವಿಯ ಹೃದಯವೆ ನರ್ಮಕುಂಜ ಕವಿತಾಸತಿಗೆ, 12 18