ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

28 ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ ಪಡು ತೂಗುತಿ ತಿಮಿರಂ ಕಾವೆವು ನಾವಿನ್ನೆವರಂ ಜಗದಂಬಿಗ ಹಾವರಂ ನಿಲುನೇಸರ ತವರಂ 11 ೭ || ಬಡತನವೆ ಧನವೆಮಗೆ ಕೊಡಲಾಪವೇಂ ನಿನಗೆ ? ಕಂಬನಿಗಳಂದುಗೆ ಚಾಚುವೆವು ನಿನ್ನಡಿಗೆ ಸ್ವರಾಜ್ಯ ಪಿಪಾಸೆ ಜಗಕೆ ಹಾಲಿನ ಬಾಸೆ ಯಪ್ಪಂತೆ ಕರುಣಿಸೆ, ಸುರಿಗು ಶಾಂತಿಯ ಸೇಸೆ ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು ತಾಯೆ ಎಂದರಚಲುಂ ಮಿಸುಕದಿರೆ ರಸನೆ, ನೀನೆನ್ನನರಸುತಝಂದು ತೊಡೆಯಲಿ ತಳೆದು ಮೊಲೆಯಿನಿಂತೆನ್ನ ಬಾಯ್ತುಂಬಿಸಲು ಸಸಿನೆ, ಧನ್ಯರಾದೆವು! ಬಾಯಿಯಡಿಸಿದ ಮಗು ಮುಂದು ತನ್ನ ತಾನರಿತದ್ದು ನಿಡುನಿಲ್ಲಲಹುದೇ ? ರವಿ ಚಿತ್ರಿಪಂತೆ ಚಿತ್ರಿಪನೆ ಪುಷ್ಪಮನಿಂದು ? ನೀನೀವ ಜೀವ ದಾಯಿಯಿನೆಮಗೆ ಬಹುದೇ ? ತಾಯೆ ನಿನ್ನಯ ಪುಣ್ಯಪೀಯೂಷಸ್ತನ್ಯಂ ಸೂಸುತಿದೆ, ರಾಷ್ಟ್ರೀಯ ಶಿಕ್ಷಣಮನನ್ಯಂ ? ನವಜೀವನದ ಬುಗ್ಗೆ ಯಿದನೊಂದನೆಮ್ಮ ಹೃದಯದ ನಿದಾಘದಿಂ ಬತ್ತಿಸದಿರಮ್ಮ!