ಪುಟ:ಗಿಳಿವಿಂಡು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಂದು ಪೋಪರು ಮೊತ್ತ ಮೊತ್ತದ ಯಾರಿಗೇಕೇನೆಂದು ಗೊತ್ತದೆ ? ಬಾಳದೊಡವೆಗೆ ಬೆಲೆಯ ತೆತ್ತುದೆ ನನ್ನ ಪಾಲಿನ ಕೌತುಕ, ಇಲ್ಲಿ ಇನ್ನಿಲಿಷ್ಟವಿಲ್ಲಕೆಲಸವಿಲ್ಲದಲಿರಲು ಸಲ್ಲ, ಇನ್ನು ನರಳುವೆನೆಂದು ಮೆಲ್ಲ ನಿಳಿದೆ ಕಡವಿನ ಕೇರಿಗೆ. ಸಂತೆಗೆನ್ನಯ ಬಳಿಕ ಬಂದು, ಸುತ್ತಿ ನನ್ನೊಡನೆನ್ನ ಮುಂದು ಮನಗೆ ಮಗುಳಿದ ಮಡದಿ ನೊಂದು ಬೇಸರಳೆ ನಾನಿಲ್ಲದೆ ? ಮಟ್ಟು ಮಿಸುಕದು ಕಡವಿನಲ್ಲಿ; ನನ್ನ ನಿಲ್ಲಿಗೆ ನಸುಕಿನಲ್ಲಿ ತಂದು ಮುಟ್ಟಿಸಿದಂಬಿ ಎಲ್ಲಿ ? ಎಲ್ಲಿಗಾದೆಯ ಅಂಬಿಗ ? ತೊಂಡು ತೊಳಸುವ ದೋಣಿಯನ್ನ ನಂಬಿ ಬಂದೆನೆ ? ಅಕಟ, ಮುನ್ನ ಹುಟ್ಟನರಿಯದನಳವೆ ನನ್ನ ಹುಟ್ಟ ನಿಕ್ಕಲು, ಚಪಾತಿಗೆ ? ಕುಳಿತೆ ನೀಂ ಗಡ ಬೆನ್ನನೆನ್ನಮಬ್ಬು ಮರಸಿತು ಮೊಗವ ನಿನ್ನ; ಸಂತೆಗಾಂ ಸಡಗರಿಸುವನ್ನ ನಿನ್ನ ಹೆಸರೇನೆಂದೆನೆ ? 1 ಪಾತಿ-ದೋಣ, ಪಾತಿಗ=ದೋಣಿಗಾರ