ಪುಟ:ಗಿಳಿವಿಂಡು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಏಕೆ ಬಾರೆಯೊ ಮುನ್ನಿನಂತ ? ಕಳೆದ ಕುತ್ತವೆ ಮರಳಿ ಬಂತ ? ಒರೆಯ, ತಮಾ, ಕರೆವ ಮುಂತೆ ಬಂದು ಮೆಯ್ಯವೆನೆ ? ನಿನ್ನ ಮುನ್ನಣ ಬೇನೆಯಲ್ಲಿ ಕೆಲದಿನೆನ್ನಂ ಕದಲಲೊಲ್ಲಿ ! ಆರಿರುವರಾರಯ್ತಲಲ್ಲಿ ? ಅಕಟ, ಒಬ್ಬನೆ ನರಳುವೇಂ ? ಏವೆನಿಲ್ಲಿಂದಲ್ಲಿಗೆಲ್ಲಿ | ಗಾಳಿಪಟ ? ಮುಗಿಲಟ್ಟ ನೆಲ್ಲಿ ? ಗೊತ್ತು ಗೊತ್ತಿರದೊತ್ತಲೆಲ್ಲಿ ? ಯಾರ ಕೇಳಲಿ ದಾರಿಯ ? ಅಕಟ, ಸೇರುವೆನೆಂತು ನಿನ್ನ ನರಿಯೆ ! ಕೋರಿಕೆಯುದುರುವನ್ನ ಮಾಗಿಯಮಟೆಯ ಮರದೊಲೆನ್ನ ಮನಸು ತೊನೆವುದು ನಿಚ್ಚ ಟಂ ಕಾಣೆನೆಂಬುದರಿಂದ ನಿನ್ನ ನಾರಯಿಸಲಾರೆಂಬ ಬನ್ನ ಮೆದೆಯ ಸುಡುತಿದೆ- ಬಿಸಿಲಿನನ್ನ ಬಿಸಿಲ ಮಳಲ೦ ತಡೆವರೇಂ ? ಸಾಲೆ ಬಿಡುವೊಡನಂದಿನಿಂದ ಸುತ್ತು ಸುತ್ತಣ ಹಾದಿಯಿಂದ ಮನೆಗೆ ಬಂದೊಡಮೇಕೆ, ಕಂದ, ಸಂಜೆ ಮುನ್ನೊಲು ಮುಗಿಯದು ?