ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಬಾಲಿ ನಿನ್ನಯ ತಮ್ಮನಲ್ಲಿ ? ನಿನ್ನ ಹೊತ್ತಗೆ ಹಳಿಗೆಯನ್ನ ಕೊಂಡು ಬೋರಯ ಬುಡದಿ ಮುನ್ನ ಕಲಿಸಿದುದನು ಕಲಿಯುವ ಬಿತ್ತೆ ಹಣ್ಣೆದೆ 1ಕತೆ ? ಹಲಿಗೆಯಲಿ ಚಿತ್ತರವ ನಿನ್ನ ಬಿಡಿಸಲಾಂ ಮನ ನೆರಸುವನ್ನ, ನೆನವೆ ಮೋಸವ ಕೊಳಿಸಲೆನ್ನ ಕಳ್ಳನಲಿ ಕಣಿ ಕೇಳಿ ? ಆ ಬಳಿಕ ಗುಡಿಗಯ್ದೆ - ತಾಯೆ, ನನ್ನ ತಮ್ಮನ ಕೂಟವೀಯೆ; ಈವೆನವನೀ ಕುತ್ತ ಮಾಯೆ - ನನ್ನ ಕೆಯ್ಸಳೆ ಕಾಣಿಕೆ' ಎಂದು ಬಲವಂದಡ್ಡಬಾಗಿ, ದೇವಿ ಸಲಿಸುವಳೆಂದು ಸಾಗಿ. ಮನೆಗೆ ಬರಲೇಂ ಹಗುರವಾಗಿ ಕಾಂಬುದೆ ಕೆಲ ಗಳಿಗೆಗೆ ? ಇಂತನುದಿನಂ ಸಂಜೆ ಸಂತು, ಸರಿದು ಸರಿಯದ ರಾತ್ರಿ ಬಂತು ! ಕಳೆನೆಸಿದ ಬೆಳಗಾನವೆಂತು ? ಕುಟ್ಟಿತೆದೆಯಲಿ ಕಳವಳಂ. ಬಾನ ಮೊರದಲಿ ಸುರಿವಿದರಳಂತೆ ನಿನ್ನೊಡನೆ ಮುನ್ನಂತೆ ಬೆರಳಂ ತೋರುತೆಣಿಸುವ ಕಣ್ಣ ಹುರುಳಂ ನೆನವು ತಟ್ಟನೆ ಕೆಡಿಪುದು. 1, ಕತ್ತು=ಅದುರು ೬ ಅರಳು=ಅರಳಕ್ಕೆ