ಪುಟ:ಗಿಳಿವಿಂಡು.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಕುರುಕುಲ ಮುಂಗವನಮದ್ದ ನಾಡು ನೋಡಿದಲ್ಲವೇ ? ನಂದನಂದನನಿಲ್ಲಿಂದ ಸಂದಿಗಯ್ದು ನಲ್ಲವೇ ? 28 ಶಕವಿಜೇತನಮರ ಶಾತವಾಹನಾಖ್ಯನೀ ಶಕಂ ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ ! ಚಳುಕ್ಯ ರಾಷ್ಟ್ರಕೂಟರೆಲ್ಲಿ, ಗಂಗರಾ ಕದಂಬರಲ್ಲಿ, ಹೊಯ್ಸಳ ಕಳಚುರ್ಯರೆಲ್ಲಿ, ವಿಜಯನಗರ ಭೂಪರು ಆದ್ದರಿಲ್ಲಿಯಲ್ಲದಲ್ಲಿ ತಾಯೆ ಮೇಣಲೂಪರು ? ಜೈನರಾದ ಪೂಜ್ಯಪಾದ ಕೊಂಡಕುಂದ ವರ್ಯರ, ಮಧ್ಯಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ, 4ಶರ್ವ ಪಂಪ ರನ್ನರ, ಲಕ್ಷ್ಮಿಪತಿ ಜನ್ನರ, ಷಡಕ್ಷರಿ ಮುದ್ದಣ್ಣರ, ಪುರಂದರ ವರೇಣ್ಯರ, ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ ! ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ ! 6ಬಿಳಿಯ ಕೊಳದ ಕಾರಕಳದ 7ನಿಡುಕರೆನಿತೊ ಬಂಧುರಂ ! ಇಲ್ಲಿಲ್ಲದ ಶಿಲ್ಪಮಿಲ್ಲ; ನಿನ್ನ ಕಲ್ಲೆ ನುಡಿವುದಲ್ಲ ! ಹಿಂಗತೆಯಿನಿವಾಲ ಸೊಲ್ಲ ನಮ್ಮ ತಷೆಗೆ ದಕ್ಕಿಸು-- ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು ! 35 35 42 2 ಗೋಗ್ರಹಣದ ಯುದ್ಧ 3 ಶಾಲಿವಾಹನ 4 ಶರ್ವನಂದು ನೃಪತುಂಗನ ಹೆಸರು, 6 ಆಲೂರು, 6 ಶ್ರವಣಬೆಳ್ಳಳ 7 ನಿಡುನಿಂದಿರುವ ಗೊಮ್ಮಟ ಮೂರ್ತಿಗಳು