ಪುಟ:ಗಿಳಿವಿಂಡು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 86 ಧಕ್ಕಡದ ಕನ್ನಡದ ರವಣೆಯ ? ಸೊಕ್ಕು ಭಟರುರವಣೆಯ ಢವಣೆಯೆ ? ಮಿಕ್ಕ ಕವಿಗಳ ಕುಣಿಸಿ ನಗುವೀ ಹೊಸ ಬಜಾವಣೆಯೊ? || ೧೨ || ಕನ್ನಡದ ನುಡಿದೇಗುಲದಿ ಸಂ ಪನ್ನ ಮಿಹ ಶ್ರೀಕೃಷ್ಣ ಮೂರುತಿ ಯನ್ನಿರೀಕ್ಷಿಸುವೊಡನೆ ಲಕ್ಷ್ಮೀಶನದು ನಿನ್ನದೆವು ! ನನ್ನ ಕಣ್ಮನದಿಂದ ಭಕ್ತಿಯ ಜಾನ್ನವಿಯ ಸರಿವರಿಸಲಿವರೊಳ ಗಿನ್ನರಿಯೆ ಮಿಗಿಲಾತನರಕವೊ ನಿನ್ನ ಕೆತ್ತಿಗೆಯೊ ? | ೧೩ || ಕುರುಪತಿಯ ಮರಣಾಂತ ಛಲದಲಿ ಮರುಳನಹ ಕವಿ ರನ್ನನವನಲಿ ಮರಸಿದೊಲು ತನ್ನಯ ಕಥಾನಾಯಕನನನಿಲಜನ | ಇರದೆ ಕರ್ಣನ ಜೋಳವಾಳಿಯೊ ನಿರತಿಶಯ ಚಾಗಿ ಮನಂಬುಗೆ, ಮರತಡೇಂ ನೀ ನರನನಂದಂದಿನನ ತನಯನಲಿ ? || ೧೪ || ಕಾಳುಗೆಡೆವರೆ ನಿನ್ನ ಕಣ್ಣೆಯ ನೇಳಿಸದ ಗಂಡುಡುಗಿದಾ ಗಂ ಡಾಳುಗಳ ತರವುಂಟೆ ಧರುಮದ ಬಾಳೆ ? ಕುರುಕುಲದ | ಕಾಳರಾತ್ರಿಯೇ ? ಇರುಳಿನಲ್ಲದೆ ನಾಳೆ ಮೂಡಿತೆ ? ಶಿಖಿಜೆ ಗಡ ಪಾಂ ಚಾಳಿ ಗಿರಿಜೆಯೋಲರ್ಧನಾರಿ ರಣಾದ್ರ ಸಹಕಾರಿ! || ೧೫ || ಸಹಜವೇನುಡಿದಡೆ ತುರಾರಿಸಿ ಯಹಿತರಾ ಕೌರವರು ನಿನಗೆಂ ದಹಹ ಧರ್ಮದ ಪಕ್ಷಪಾತವನಾವ ಗುಣಿಯೊಲ್ಲ ? | ಕುಹಕಿಗಳ ಕೌಳಿಕವ ಹಳಿದೂರ, ಸಹಸದಲಿ ಪಗೆಯುಂಟೆ ? ಬೇವಿನ ಕಹಿಂಯ ಕಯ್ಸನೆ ಗುಣಕೆ ಕಯ್ಯ ? ಗುಣಕೆ ಮಚ್ಚರವೆ? | ೬ ||