ದಲಿತ ಲೋಕದ ಅನುಭವಗಳು ಈ ಶತಮಾನದ ಕೊನೆಯ ಮುಖ್ಯ ಬರಹಗಳಾಗುತ್ತವೆಂಬ
ದಿಕ್ಕನ್ನು ಗೌರ್ಮೆಂಟ್ ಬ್ರಾಹ್ಮಣ ಸಂಕೇತಿಸುತ್ತದೆ...
◼ ಮಾಲಗತ್ತಿ.... ಬರಹದ ದೊಡ್ಡ ಶಕ್ತಿ:
ನಮ್ಮ ನೆಲದಲ್ಲಿ ದಲಿತ ಮಾತ್ರನಿಗೇ ಸಾಧ್ಯವಾಗುವ ವಿಶಿಷ್ಟ ಹೀನಾಯವಾದ ಬಿಡಿ ಬಿಡಿ ಪ್ರಸಂಗಗಳ ಮಾಲಿಕೆಯಿದು.... ಓದುಗರನ್ನು ಬೆಚ್ಚಿ ಬೀಳಿಸುವ, ಆಘಾತ ನೀಡುವ ಅನುಭವಗಳಿಗೆ ಒತ್ತು ಕೊಟ್ಟು ಒಂದೆಡೆ ತಂದಿರುವ ಮಾಲಗತ್ತಿ ಬಹುತೇಕ ಎಲ್ಲೂ ತಾಳ್ಮೆಗೆಡದೆ ಭಾವಾವಿಷ್ಟರಾಗದೆ ನಿರರ್ಥಕ ಸಿಟ್ಟು ಹೊರಹಾಕದೆ ಎದೆ ಬಗೆದು ತೋರುತ್ತ ಚಿಂತನೆಗೆ ಹಚ್ಚುತ್ತಾರೆ.
ಅವರ ಅನುಭವಗಳ ಸಾಚಾತನ ಎಂಥದೆಂದರೆ, ಅವರು ನಿರ್ವಿಕಾರವಾಗಿ ಎತ್ತುವ ಪ್ರಶ್ನೆಗಳೂ ತಲ್ಲಣಕಾರಿಯಾಗೇ ಕಾಣಲು ಸಾಧ್ಯ.
ಮಾಲಗತ್ತಿ ಇತರರ ಮನಸ್ಸನ್ನು ಸಹಾನುಭೂತಿಯಿಂದ ನಿರೀಕ್ಷಿಸುತ್ತಾರೆ ಎಂಬುದೇ ಅವರ ಬರಹದ ದೊಡ್ಡ ಶಕ್ತಿ.
◼ ಗೌರ್ಮೆಂಟ್ ಬ್ರಾಹ್ಮಣ:
ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ, ಸಮಾಜವೊಂದರ ಚರಿತ್ರೆ:
ಮಾಲಗತ್ತಿ ಅವರು ಕವಿಯಾಗಿ ಕಾದಂಬರಿಕಾರರಾಗಿ ಚರ್ಚೆಗೊಳಗಾಗಿರುವ ಶಕ್ತ ಲೇಖಕರು. ತಮ್ಮ ಕವಿತೆ ಕಾದಂಬರಿಗಳಲ್ಲಿ ಬಳಸಿಕೊಳ್ಳಲಾಗದ ವಿಭಿನ್ನ ಅನುಭವ ಜಗತ್ತನ್ನು ಈ ಆತ್ಮಕಥೆಯ ಬರಹದಲ್ಲಿ ಸಹಜವಾಗಿ, ಪ್ರಖರವಾಗಿ ತೆರೆದು ಇಟ್ಟಿದ್ದಾರೆ. ಹಾಗೆ ನೋಡಿದರೆ ಈ ಕೃತಿ ಒಂದೇ ಸಲಕ್ಕೆ ಬರೆದದ್ದಲ್ಲ. ಆತ್ಮಕತೆಯ ತುಣುಕುಗಳಂತಿರುವ ಇಲ್ಲಿನ ಬಹುತೇಕ ಲೇಖನಗಳನ್ನು ಕಳೆದ ಹತ್ತು ವರ್ಷಗಳಿಂದ ಲೇಖಕರು ಬಿಡಿ ಬಿಡಿಯಾಗಿ ಪ್ರಕಟಿಸಿಕೊಂಡೇ ಬಂದಿರುವರು. ಬಿಡಿಬಿಡಿ ಬರಹಗಳಾಗಿ ಪ್ರಕಟವಾಗಿದ್ದಾಗಲೇ ಇವು ಕನ್ನಡದ ಓದುಗರನ್ನು ತಾಕಿದ್ದವು. ಈಗ ಈ ಲೇಖನಗಳೆಲ್ಲ ಕೃತಿಯಾಗಿ ಬಂದು ಕನ್ನಡದ ಓದುಗರ ಸಂವೇದನೆಯನ್ನು ಅಲ್ಲಾಡಿಸಲು ಅಣಿಯಾಗಿವೆ. ಕನ್ನಡದೊಳಗೆ ನಡೆಯುತ್ತಿರುವ