ಬರುವುದರಿಂದ ಆಗ ತಂದೆಯವರ ದರ್ಬಾರಿನಲ್ಲಿ ಅಂಗಡಿಯಿಂದ 2-3 ಕೆ.ಜಿ. ಹೊತ್ತು
ತರುತ್ತಿದ್ದರು. ಆಗ ನಾನೂ ಆ ಮಾವನ ಮನೆಗೆ ಇಣುಕಿ ಕೂಡ ನೋಡುತ್ತಿರಲಿಲ್ಲ! ಆದರೆ
ಈಗ ಮಾಂಸದ ಮೇಲಿನ ಹಂಬಲ ಇಳಿದು ಹೋಗಿದೆ ಯಾಕೆ ಎಂದು ಚಿಂತಿಸಲು ಅವಕಾಶ
ಸಿಕ್ಕಿಲ್ಲ.
ಈ ಮಾವನ ಅಂಗಡಿ ದಿನವೂ ತೆರೆಯುವಂತಹದ್ದಲ್ಲ. ವಾರಕ್ಕೆ ಒಮ್ಮೆ ಅಥವಾ
ತಿಂಗಳಿಗೆ ಒಮ್ಮೆ ಇಲ್ಲವೇ ಒಂದೇ ವಾರದಲ್ಲಿ ಒಮ್ಮೊಮ್ಮೆ ಎರಡು ಮೂರು ಬಾರಿ
ತೆರೆಯುವ ಭಾಗ್ಯ ಬರುತ್ತಿತ್ತು. ಈ ಭಾಗ್ಯ ಕುರುಬರೇ ಕಲ್ಪಿಸಿಕೊಡಬೇಕು. ಇಲ್ಲವೇ
ತಿಂಗಳಿಗೆ ಒಮ್ಮೆ ಅಲ್ಲವೇ ಒಂದೇ ವಾರದಲ್ಲಿ ಒಮ್ಮೊಮ್ಮೆ ಎರಡು ಮುರು ಬಾರಿ
ಊರಲ್ಲಿ ಇನ್ಯಾರಾದರೂ ಪ್ರಾಣಿ ಸತ್ತಿರಬೇಕು. ಅಂದಾಗ ಮಾತ್ರ ಈ ಚಾಪೆಯ ಅಂಗಡಿ
ತೆರೆಯುತ್ತಿತ್ತು.
ಅದೊಂದು ವಿಶೇಷವಾದ ದಿನವೇ ಎನ್ನಬೇಕು. ಅಂದು ಎಲ್ಲ
ಬೇಗನೆ ಮಾರಾಟವಾಗಿದ್ದವು. ಮಾವ ಎ ಬತಾ ಹೋಗಿದ್ದ. ಒಬ್ಬ ಠಾಕು
ಟೀಕಾಗಿರುವ ವ್ಯಕ್ತಿ ಮನೆಯ ಹತ್ತಿರಕ್ಕೆ ಜಡೆ.
"ಏ ಹುಡುಗಾ ಕುರಿ ಬಂದಿತ್ತೇನೋ? ಇವತ್ತ" ಎಂದ
"ಏ ಪಾಲಾ ಮುಗದಾವ್ರುರ‍್ರಿ" ಎಂದೆ ಅನುಮಾನದಿಂದ.
ಏಕೆಂದರೆ ಇಂಥವರು ಸತ್ತ ಕುರಿಯ ಪಾಲು ತಿನ್ನುತ್ತಾರೆಯೇ! ಎನ್ನುವ ಆಶ್ಚರ್ಯ
ನನಗೆ. ಈ ವೀರಶೈವದವರ ಮನೆಯ ಆಳು ಊರ ವಾಲಿಕಾರನೊಂದಿಗೆ ಬಂದಿದ್ದ.
ನಿಮ್ಮ ಮಾವ ಎಲ್ಲಿ? ಆತನ ಮುಂದಿನ ಪ್ರಶ್ನೆ
"ಹೊರಗೆ ಹೋಗ್ಯಾರ‍್ರಿ, ಬರ್‍ತಾರೆ" ಎಂದೆ.
ಸ್ವಲ್ಪ ಹೊತ್ತು ಕಳೆದಾದ ಮೇಲೆ ಕೈಯಲ್ಲಿ ಎರಡು ದುಡ್ಡು (ಮೂರು ಪೈಸೆ)
ಕೊಟ್ಟು "ಚಕಲಿ” (ಚಕ್ಕುಲಿ) ತಗೊಂಡ ಬಾ ಎಂದ. ಚಕ್ಕುಲಿ ಎಂದರೆ ಯಾರ ಬಾಯಿಯಲ್ಲಿ
ನೀರು ಬರುವುದಿಲ್ಲ? ಹಣ ಕೊಟ್ಟದ್ದೇ ತಡ, ನನ್ನ ಬಾಯಿಯ ಮೋಟಾರ್ ಸ್ಟಾರ್ಟ್
ಮಾಡಿ ಓಡಿದೆ. ಚಕ್ಕುಲಿ ತಂದು ಅವರ ಕೈಗೆ ಕೊಡ ಹೋದರೆ "ಅವೆಲ್ಲಾ ಚಕಲಿಯ
ಕಡಗಗಳು ನನಗೆ" ಎಂದು ಹೇಳಬೇಕೆ ಆತ! ತರುವಾಗ ನಾನಂದುಕೊಂಡದ್ದು ಅದರಲ್ಲಿ
ನನಗೊಂದು ಇಲ್ಲವೇ, ಕೊನೆ ಪಕ್ಷ ಅರ್ಧವಾದರೂ ಸಿಗಬಹುದು ಎಂದು ಊಹಿಸಿದ್ದೆ.
ಈಗ ನೋಡಿದರೆ ಇವರು ಎಲ್ಲ ನನಗೇ ಎನ್ನುತ್ತಿದ್ದಾರೆ! ಹಿಡಿಸಲಾಗದ ಆನಂದ -
ಮುಜುಗರ, ಎರಡೂ ಸೇರಿ ಹೋದವು. ಆತ ಮತ್ತೆ ಪ್ರಶ್ನಿಸಿದ.
"ತೊಗಲು ಯಾವ ಮಂಡ್ಯಾಗ ಕೊಟ್ಟಿದ್ದಿ?"
(ಆಡಿನ ತೊಗಲು, ಯಾವ ಅಂಗಡಿಯಲ್ಲಿ ಮಾರಾಟ ಮಾಡಿದೆ) ಎಂದ.
"ಮುಲ್ಲಾ ಸಾಬರ ಮಂಡ್ಕಾಗ"