ಮೂರನೆಯ ಪ್ರಕರಣ
ಮತ್ತೊಂದುದಿನ ಚಂದ್ರಮತಿಯು ಗುರುವಿನ ಬಳಿಯಲ್ಲಿ ಓದಿಕೊಳ್ಳುತ್ತಿರುವಾಗ, ಅಲ್ಲಿಗೆ ಒಬ್ಬ ಇಂದ್ರಜಾಲಿಕನು ಬಂದು ತನ್ನ ಚೀಲವನ್ನು ತೆರೆದು ತನ್ನ ವಿದ್ಯಾತಿಶಯವನ್ನು ನೋಡಬೇಕೆಂದು ಪ್ರಾರ್ಥಿಸಿದನು. ಅವನನ್ನು ಕಂಡು ಅಲ್ಲಿ ಓದಿಕೊಳ್ಳುತ್ತಿದ್ದ ಬಾಲೆಯರೆಲ್ಲರೂ ಓದಿನ ಮೇಲಣ ಆಸೆಯನ್ನುಳಿದು ಅವನ ಕಡೆಯೇ ನೋಡತೊಡಗಿದರು. ವಿದ್ಯಾಸಮುದ್ರನು ಅವರ ಅಭಿಪ್ರಾಯವನ್ನು ಗ್ರಹಿಸಿ, ಬುದ್ಧಿಯು ಮತ್ತೊಂದು ವಿಷಯದಲ್ಲಿ ಪ್ರವರ್ತಿಸಿರುವಾಗ ಓದಿಸುವುದರಿಂದ ಪ್ರಯೋ ಜನವಿಲ್ಲವೆಂಬುದನ್ನು ತಿಳಿದವನಾದುದರಿಂದ, ತತ್‌ಕ್ಷಣವೇ ಓದುಗಲಿಸುವುದನ್ನು ನಿಲ್ಲಿಸಿ, ಮಕ್ಕಳನ್ನೆಲ್ಲ ತನ್ನ ಮುಂದೆ ಒಟ್ಟುಗೂಡಿಸಿಕೊಂಡು, ಕೆಲವು ವಿನೋದಗಳನ್ನು ತೋರಿಸುವಂತೆ ಐಂದ್ರಜಾಲಿಕನಿಗಾಜ್ಞಾಪಿಸಿ, ಆ ಇಂದ್ರಜಾಲಿಕನು ತಾನು ಕಲಿತಿದ್ದ ವಿಷಯಗಳಲ್ಲಿ ಕೆಲವನ್ನು ತೋರಿಸಿದ ತರುವಾಯ ಅವನಿಗೆ ತಕ್ಕ ಬಹುಮಾನವನ್ನು ಮಾಡಿ ಸಂತೋಷಗೋಳಿಸಿ ಕಳುಹಿಸಿದನು. ಆಗಳಾಬಾಲೆಯರೆಲ್ಲರೂ ಅವನು ಮಾಡಿದ ಅದ್ಭುತಕಾರ್ಯಗಳನ್ನು ಪರಸ್ಪರವಾಗಿ ಹೇಳಿಕೊಂಡು ಆಶ್ಚರ್ಯಪಡತೊಡಗಿದರು. ಐಂದ್ರಜಾಲಿಕನು ಎಲ್ಲರಿದಿರಾಗಿ ಮಾವಿನ ಓಟೆಯನ್ನು ನೆಲದಲ್ಲಿ ಹೂತು ನಿಮಿಷಮಾತ್ರದಲ್ಲಿ ಅದು ಮೊಳೆತು ಹೂಗಚ್ಚಿ ಫಲಿಸುವಂತೆ ಮಾಡಿದುದನ್ನೂ, ಒಂದು ಕಾಸನ್ನು ಚೀಲದೊಳಕ್ಕೆ ಹಾಕಿ ಅದೇ ಚೀಲದಿಂದ ಹೊರಕ್ಕೆ ಹಲವು ಕಾಸುಗಳನ್ನು ತೆಗೆದು ತೋರಿಸಿದುದನ್ನೂ, ಅವನು ಮಾಡಿದ ಕಾರ್ಯಗಳೊಳಗೆಲ್ಲ ಬಹು ಶ್ಲಾಘ್ಯವಾದುವುಗಳೆಂದು ಚಂದ್ರಮತಿಯು ಮೆಚ್ಚಿ ಗುರುವಿನೊಡನೆ ಪ್ರಸ್ತಾಪಿಸಿದಳು. ಆತನಾದರೋ ಅದನ್ನೇ ನೆವವನ್ನಾಗಿಟ್ಟುಕೊಂಡು ಚಂದ್ರಮತಿಗೆ ತನ್ಮೂಲವಾಗಿ ಕೆಲವುಪಯುಕ್ತ ವಿಷಯಗಳನ್ನು ಬೋಧಿಸಲೆಳಸಿ ಇಂತೆಂದನು:
ಗುರು-ಎಲೌ ವತ್ಸೇ! ಹಿಂದೆ ನಾನು ನಿನ್ನೊಡನೆ ಹೇಳಿರುವ ಆ