ಪುಟ:ಚಂದ್ರಮತಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೂರನೆಯ ಪ್ರಕರಣ. ೧೫ ಮಾಡಿದುದರಿಂದ ಅವನ ಸಾಮರ್ಥ್ಯಕ್ಕೆ ಮೆಚ್ಚಬೇಕಾದರೂ, ನಾವು ಪ್ರತಿ ದಿನವೂ ನೋಡುತ್ತಲೇ ಇರುವ ಈಶ್ವರನ ಪರಮಾದ್ಭುತ ಮಹಿಮೆಯ ಮುಂದೆ ಇದು ಪರಮಾಣುಪರ್ವತನ್ಯಾಯವಾಗಿರುವುದು. ನಮಗೆ ಕಣ್ಣು ಗಳಿದೂ ನಾವು ಪರಮೇಶ್ವರನ ವಿಚಿತ್ರಗಳನ್ನು ಕಂಡು ಆನಂದಿಸಲಾರದಿ ರುವೆವು. ಅತಿ ತುಚ್ಛಗಳಾದ ಇಂತಹ ಕೃತ್ಯಗಳನ್ನು ಕಂಡು ಮೆಚ್ಚು ತಿರುವೆನಲ್ಲದೆ, ಈಶ್ವರನೆಂಬ ಐಂದ್ರಜಾಲಿಕನು ಮಾಡುವ ನಿಶ್ಚಯವಾದ ಅದ್ಭುತ ಕಾರ್ಯಗಳನ್ನು ನೋಡಿ ಆಶ್ಚರ್ಯಪಡದಿರುವೆವು ಈಗ ನಾವು ಅದು ತಗಳೆಂದು ಭಾವಿಸಿದ ಈ ಕಾರ್ಯಗಳನ್ನೇ ಭಗವಂತನು ಪ್ರತಿದಿನವೂ ನಿನ್ನಿಂದಲೂ, ನನ್ನಿಂದಲೂ, ಪ್ರಪಂಚದಲ್ಲಿರುವ ಸಕಲರಿಂದಲೂ ಮಾಡಿಸು ತಿರುವನು. ಇಂದಿಗೆ ನಾಲ್ಕು ತಿಂಗಳಲ್ಲಿ ನಿನ್ನ ಕಿರುಮನೆಯ ಮುಂದೆ ನಿನ್ನ ಕೈಗಳಿಂದಲೇ ನೀನು ನಾಟಿದ ನೀರುಕಾಯಿಯ ಮರವು ಈಗಾ ಗಲೇ ಹೂಕಾಯಿಗಳಿಂದ ತುಂಬಿ ಕಣೋಳಿಸುತ್ತಿರುವುದಿಲ್ಲವೆ? ಭಗವಂ ತನು ಈ ಇಂದ್ರಜಾಲವನ್ನು ನಿನ್ನ ಕೈಯಿಂದಲೂ ಮಾಡಿಸಿರುವನಲ್ಲ! ನೀನು ಇದಕ್ಕೇಕೆ ಆಶ್ಚರ್ಯಪಡದಿರುವೆ? ನೆಲದಲ್ಲಿ ಬಿತ್ತಿದ ಹೆಸರಕಾಳಿನ ಗಾತ್ರದ ಕಪ್ಪಾದ ಬೀಜದಿಂದ ಹಸುರಾಗಿಯೂ, ಸುಂದರವಾಗಿಯೂ ಇರುವ ಎಲೆಗಳೂ, ಮೃದುವಾದ ಕೊನೆಗಳೂ, ಚಿತ್ರವರ್ಣವುಳ್ಳ ಪುಷ್ಪಗಳೂ ಮತೆ ಅನೇಕ ವೃಕ್ಷಗಳೂ ಹುಟ್ಟುವುದಕ್ಕೆ ಆಧಾರಗಳಾದ ಬೀಜಗಳನ್ನೊಳ ಗೊ೦ಡ ಕಾಯಿಗಳೂ ಉಂಟಾಗುವುದು ಆಶ್ಚರ್ಯವಲ್ಲವೆ ? ಇದಕ್ಕಿಂತ ಆಶ್ಚರ್ಯಕರವಾದುದು ಮತ್ತಾವುದಿರುವುದು? ಕೆಲವರ್ಷಗಳ ಹಿಂದೆ ನಮ್ಮ ತೋಟದಲ್ಲಿ ನನ್ನ ಕೈಯಿಂದ ನಾನೇ ಒಂದು ಮಾವಿನ ಬೀಜವನ್ನು ನೆಟ್ಟೆನು; ಈಗ ಅದು ದೊಡ್ಡ ಗಿಡವಾಗಿ ಪ್ರತಿ ಸಂವತ್ಸರವೂ ಮಿತಿಯಿಲ್ಲ ದಷ್ಟು ಫಲಗಳನ್ನು ಕೊಡುತ್ತಿರುವುದು. ಸರ್ವೆಶ್ವರನಾದ ಐಂದ್ರಜಾ ಲಿಕನು ತಾನು ಸ್ವಲ್ಪವಾದರೂ ಮುಟ್ಟದೆ ನಮ್ಮ ಕೈಯಿಂದಲೇ ಈ ಅದ್ಭುತ ವನ್ನು ಮಾಡಿಸಿರುವುದಕ್ಕೆ ಎಷ್ಟು ಆಶ್ಚರ್ಯಪಟ್ಟ ರೂ ಸಾಲದು. ಪ್ರಪಂಚ ದಲ್ಲಿ ಕೆಲವು ಭತ್ತದ ಕಾಳುಗಳನ್ನು ಗದ್ದೆಯಲ್ಲಿ ನಾಟಿ, ಕೆಲ ತಿಂಗಳೊಳಗಾಗಿ ಕೋಟ್ಯ೦ಶದಷ್ಟು ಹೆಚ್ಚಾದ ಫಲವನ್ನು ಹೊಂದುತ್ತಿರು ವರು. ಎತ್ತೆತ್ತ ನೋಡಿದರೂ ನಮಗೆ ನೇತ್ರೋತ್ಸವವನ್ನುಂಟುಮಾಡು