ಪುಟ:ಚಂದ್ರಮತಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಂದ್ರಮತಿ, ಅದುಕಾರಣ ನಾವು ಪ್ರತಿದಿನವೂ ತ್ರಿಕಾಲದಲ್ಲಿಯೂ ಭಕ್ತಿಯಿಂದ ಈಶ್ವರಾ ರಾಧನೆಯನ್ನು ಮಾಡುತ್ತಿರಬೇಕು. ಚಂದ್ರ-ನಿಮ್ಮ ಹಿತಬೋಧೆಗಳಿಂದ ನನ್ನ ಅಜ್ಞಾನಾಂಧಕಾರವು ಪರಿಕೃತವಾಗಿ ಮುಕ್ತಿ ಮಾರ್ಗದ ಲಕ್ಷಣವನ್ನು ಸ್ವಲ್ಪ ಮಾತ್ರ ತಿಳಿದು ಕೊಳ್ಳುವಂತಾಯಿತು. ಇನ್ನು ಮೇಲೆ ಪ್ರತಿದಿನವೂ ತಮ್ಮ ಉಪದೇಶಾನುಸಾರ ವಾಗಿ ತ್ರಿಕರಣಶುದ್ಧಿಯಾಗಿಯೂ ಈಶ್ವರನನ್ನು ಉಪಾಸಿಸುತ್ತಿರುವೆನು. ಐದನೆಯ ಪ್ರಕರಣ `ಮರುದಿನ ಚಂದ್ರಮತಿಯು ಪಾಠವನ್ನೊಪ್ಪಿಸುತ್ತಿದ್ದಾಗ ನಡುನಡುವೆ ಎಡಗೈಯನ್ನು ಕೆರೆದುಕೊಳ್ಳುತ್ತೆ ಬೆರಲನ್ನು ಮುರಿದುಕೊಳ್ಳುತ್ತಿದ್ದಳು. ವಿದ್ಯಾಸಮುದ್ರನು ಅದನ್ನು ಕಂಡು ಪಾಠವೆಲ್ಲ ಮುಗಿಯುವವರೆಗೂ ಸುಮ್ಮನಿದ್ದು ತರುವಾಯ ಈ ಪ್ರಕಾರವಾಗಿ ಸಂಭಾಷಿಸುವುದಕ್ಕೆ ಮೊದಲು ಮಾಡಿದನು. ಗುರು-ಮಗೂ! ಈದಿನ ನೀನೇಕೋ ಹಲವುಬಾರಿ ಕೈಬೆರಲುಗಳನ್ನು ಹಿಸುಕಿಕೊಳ್ಳುತ್ತಿದ್ದೆ. ಹೀಗೆಮಾಡಲು ಕಾರಣವೇನು? ಚಂದ್ರ-ನನ್ನ ಬೆರಲಸಂದಿಯಲ್ಲಿ ಸಣ್ಣ ಸಣ್ಣ ಕಜ್ಜಿ ಗುಳ್ಳೆಗಳು ಎದ್ದು ಕೈಯೆಲ್ಲ ಬಲುನವೆಯಾಗಿರುವುದಾದುದರಿಂದ ಕೆರೆದುಕೊಳ್ಳುತ್ತಿದ್ದೆನು. ಅದರಲ್ಲಿಯೂ ನಡುಬೆರಲಸಂದಿನಲ್ಲಿ ಎದ್ದಿರುವ ಈ ಸಣ್ಣ ಗುಳ್ಳೆಯು ನನ್ನನ್ನು ಅತಿಯಾಗಿ ಬಾಧಿಸುತ್ತಿರುವುದು. ಗುರು-ನಮಗೆ ವಿಧಾಯಕಗಳಾಗಿರುವ ಧರ್ಮಗಳನ್ನು ನೀನು ಮಾರಿರುವೆಯಾದುದರಿಂದ ನಿನಗೆ ಈ ಬಗೆಯ ಶಿಕ್ಷೆಯುಂಟಾಗಿರುವುದು,