ಪುಟ:ಚಂದ್ರಮತಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ, ಇವೇ ಮೊದಲಾದ ಆಚಾರಗಳನ್ನು ಬಿಡಬೇಕು. ಇಲ್ಲದಪಕ್ಷದಲ್ಲಿ ಅಂಥವರು ರೋಗಾದಿಗಳಿಗೆ ನೆಲೆಯಾಗಿ ಶರೀರವನ್ನು ಹಾಳುಮಾಡಿಕೊಳ್ಳುವರು. ಚಂದ್ರ-ನಾವು ಧರಿಸಬೇಕಾದ ವಸ್ತ್ರಗಳನ್ನು ಕುರಿತು ಹೇಳತಕ್ಕು ದೇನಾದರೂ ಇರುವುದೇ ? ಗುರು - ನಾವು ಧರಿಸಿಕೊಳ್ಳುವ ವಸ್ತ್ರಗಳು ಬೆವರು ಮೊದಲಾದುವು ಗಳಿಂದ ಬಹು ಜಾಗ್ರತೆಯಾಗಿ ಮಾಸಿಹೋಗುವುವು. ಮಾಸಿದ ಬಟ್ಟೆ ಯನ್ನೇ ಮತ್ತೆ ಧರಿಸುವುದರಿಂದ ಕಜ್ಜಿ ಯೇ ಮೊದಲಾದ ಚರ್ಮರೋಗಗಳು ಹುಟ್ಟುವುವು. ಆದುದರಿಂದ ಬಟ್ಟೆಯು ಸ್ವಲ್ಪ ಮಾಸಿದೊಡನೆಯೇ ಅದನ್ನು ತೆಗೆದುಹಾಕಿ ಒಗೆದು ತಂದಿರುವ ಬೇರೆ ಬಟ್ಟೆಯನ್ನು ಉಡಬೇಕು. ದೇಹಾ ರೋಗ್ಯಕ್ಕೆ ಶುಭ್ರವಾದ ವಸ್ತ್ರಗಳು ಆವಶ್ಯಕಗಳಲ್ಲದೆ ಹೆಚ್ಚು ಬೆಲೆಯ ವಸ್ತ್ರಗಳಲ್ಲ. ಆದುದರಿಂದ ಬಡವರ ಹೆಂಗಸರು ಧನಿಕರ ಹೆಂಗಸರನ್ನು ನೋಡಿ, ತನಗೂ ಅವರಿಗಿರುವಂತೆ ಬೆಲೆ ಬಾಳುವ ವಸ್ತ್ರಗಳೇ ಬೇಕೆಂದು ಹಟಹಿಡಿಯದೆ ಬುದ್ದಿ ಹೀನತೆಯನ್ನು ಬಿಡಬೇಕು. ಚ೦ದ್ರ-ಪ್ರತಿದಿನವೂ ಸ್ನಾನಮಾಡುವುದರಿಂದ ಪ್ರಯೋಜನವೇನು? ಗುರು-ಕುಡಿಯುವ ನೀರಿನಂತೆಯೇ ಸ್ನಾನಮಾಡುವ ನೀರೂ ನಿರ್ಮಲವಾಗಿರಬೇಕು. ಪುಣ್ಯವು ಬರುವುದೆಂದು ನದಿಗಳಲ್ಲಿರುವ ಕೆಸರು ನೀರಿನಲ್ಲಿ ಮುಳುಗಿ ಆಚಾರವೆಂದು ಒದ್ದೆಯ ಬಟ್ಟೆಯನ್ನುಟ್ಟು ಕುಳಿತು ಕೊಂಡರೆ ರೋಗಾದಿಗಳು ಉಂಟಾಗುವುವು. ಮೈಮೇಲೆಲ್ಲ ಇರುವ ಸೂಕ್ಷ್ಮಗಳಾದ ರಂಧ್ರಗಳಿಂದ ಬೆವರು, ಮಣ್ಣು ಇವೇ ಮೊದಲಾದಕಲ್ಮಷ ಪದಾರ್ಥಗಳು ಯಾವಾಗಲೂ ಹೊರಕ್ಕೆ ಬರುತ್ತಿರುವುವು. ಮೈಯನ್ನು ಚೆನ್ನಾಗಿ ಉಜ್ಜಿಕೊಂಡು ಸ್ನಾನಮಾಡದಿರುವಪಕ್ಷದಲ್ಲಿ, ಆ ರಂಧ್ರಗಳು ಮುಚ್ಚಿ ಹೋಗಿ ಬೆವರು ಮೊದಲಾದವುಗಳು ಹೊರಕ್ಕೆ ಸರಿಯಾಗಿ ಬಾರದೆ ಕಜ್ಜಿ ಮುಂತಾದುವಕ್ಕೆ ಆಸ್ಪದವುಂಟಾಗುವುದು. ಆದುದರಿಂದ ಸ್ನಾನಮಾಡು ವಾಗ ಕೊಳೆ ಹೋಗುವಂತೆ ಚೆನ್ನಾಗಿ ಮೈಯನ್ನುಜ್ಜಿಕೊಂಡು, ದಿನ ಕ್ಕೊಂದು ಬಾರಿಯಾದರೂ ತಪ್ಪದೆ ಸ್ನಾನಮಾಡುತ್ತಿರಬೇಕು. ಮೈ ಮೇಲೆ ಸುಮ್ಮನೆ ನೀರನ್ನು ಸುರಿದುಕೊಳ್ಳುವುದರಿಂದ ಆವ ಪ್ರಯೋಜನವೂ ಉಂಟಾಗಲಾರದು. ಪ್ರತಿದಿನವೂ ಬಾಲಕರೂ, ದೇಹದಾರ್ಡ್ಯವುಳ್ಳವರೂ