ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹನ್ನೊಂದನೆಯ ಪ್ರಕರಣ.
೫೭

ಲೆಲ್ಲ ಆಡಿದಮಾತಿಗೆ ತಪ್ಪದವನು ಹರಿಶ್ಚಂದ್ರನೊಬ್ಬನೇ ಎಂದು ಆತನ ಯೋಗ್ಯತೆಯನ್ನು ಶ್ಲಾಘಿಸಿದನು. ಆತನ ಪ್ರತಿ ಕಕ್ಷಿಯಾದ ವಿಶ್ವಾಮಿತ್ರನು ಈ ಮಾತುಗಳನ್ನು ಕೇಳಿ ಸೈರಿಸಲಾರದೆ, “ಆಃ! ವಿವಿಧ ಮಾಯೋವಾಯಗಳಿಂದ ಶತ್ರುಗಳನ್ನು ವಂಚಿಸಿ ರಾಜ್ಯ ತಂತ್ರವನ್ನು ನಿರ್ವಹಿಸಿಕೊಳ್ಳಬೇಕಾಗಿರುವ ರಾಜರಲ್ಲಿ ಸತ್ಯಸಂಧರೂ ಇರುವರಂತೆ! ಸೂರ್ಯವಂಶಜರಾದ ಅರಸರಮನೆಗೆ ಪುರೋಹಿತನಾದ ನೀನು ಅಕ್ಕಿಬೇಳೆಯ ಆಸೆಗೋಸುಗ ಹೀಗೆ ಹೇಳುತ್ತಿರಬಹುದು! ಹರಿಶ್ಚಂದ್ರನಿಂದ ಸುಳ್ಳಾಡಿಸುವುದೆಷ್ಟರ ಕಾರ್ಯ? ಸಾಕುಸಾಕು, ಸುಮ್ಮನಿರು” ಎಂದು ವಸಿಷ್ಠನನ್ನು ನಿಂದಿಸಿದನು. ಆಗ ವಸಿಷನು ಕೋಪಾಕ್ರಾಂತನಾಗಿ “ಎಲೈ, ವಿಶ್ವಾಮಿತ್ರನೇ! ನೀನು ಸಾವಿರವರ್ಷ ತಲೆಕೆಳಗಾಗಿ ನಿಂತು ತಪಸ್ಸು ಮಾಡಿದರೂ ಹರಿಶ್ಚಂದ್ರನಿಂದ ಅಸತ್ಯವನ್ನಾಡಿಸಲಾರೆ. ಸುಮ್ಮನೇಕೆ ಕೂಗುವೆ?” ಎಂದನು. ವಿಶ್ವಾಮಿತ್ರನು “ನಿಮಿಷಮಾತ್ರದಲ್ಲಿ ನಾನು ಅಸತ್ಯವನ್ನಾಡಿಸದೆ ಬಿಡುವೆನೇ?" ಎಂದನು. ಹೀಗೆ ಈರ್ವರೂ ಪಂತಗಟ್ಟಿ ತಮ್ಮಲ್ಲಿ ಗೆದ್ದವರಿಗೆ ಸೋತವರು ತಾವು ಅದುವರೆಗೂ ಮಾಡಿದ ತಪಸ್ಸನ್ನೆಲ್ಲ ಧಾರಾಪೂರ್ವಕವಾಗಿ ಕೊಟ್ಟು ಹೊರಟುಹೋಗುವುದೆಂದು ನಿಷ್ಕರ್ಷಿಸಿ, ತಂತಮ್ಮ ಆಶ್ರಮಗಳಿಗೆ ಹೊರಟುಹೋದರು.

ಕೆಲದಿನಗಳು ಕಳೆದಬಳಿಕ ಹರಿಶ್ಚಂದ್ರನು ಒಂದು ಯಾಗವನ್ನು ಮಾಡಿ ಭೂರಿದಕ್ಷಿಣೆಗಳನ್ನು ಕೊಡುವನೆಂದು ಕೇಳಿ ವಿಶ್ವಾಮಿತ್ರನು ಅಯೋಧ್ಯೆಗೆ ಬಂದು, ಸಭಾಮಂಟಪದಲ್ಲಿ ಸುಖಾಸೀನನಾಗಿದ್ದ ಹರಿಶ್ಚಂದ್ರನನ್ನು ಕಂಡನು. ಆಗ ಹರಿಶ್ಚಂದ್ರನು ಈ ಮಹರ್ಷಿಯನ್ನು ದೂರದಿಂದಲೇ ಕಂಡು ಮಹಾತ್ಮನು ಬರುತ್ತಿರುವನೆಂದು ಸಿಂಹಾಸನವನ್ನು ಬಿಟ್ಟು ಕೆಳಗೆ ಬಂದು ಆತನಿಗೆ ಅರ್ಘ್ಯವಾದ್ಯಾದಿಗಳನ್ನು ಕೊಟ್ಟು ಕರೆತಂದು ಯೋಗ್ಯವಾದ ಪೀಠದಲ್ಲಿ ಕುಳ್ಳಿರಿಸಿ ಕುಶಲಪ್ರಶ್ನೆಯನ್ನು ಮಾಡಿದನು. ವಿಶ್ವಾಮಿತ್ರನೂ ಆತನೊಡನೆ ಸ್ವಲ್ಪ ಕಾಲ ಸಂಭಾಷಿಸಿ, ತಾನೊಂದು ಯಜ್ಞವನ್ನು ಮಾಡಬೇಕಾಗಿರುವುದೆಂದೂ, ಅದಕ್ಕೆ ಬೇಕಾಗುವಷ್ಟು ಧನವನ್ನು ಕೊಟ್ಟು ಯಜ್ಞಫಲವನ್ನು ಹೊಂದಬೇಕೆಂದೂ ಹರಿಶ್ಚಂದ್ರನೊಡನೆ ಹೇಳಿದನು. ರಾಜನು ಅದಕ್ಕೆ ಮರುಮಾತಾಡದೆ ಯಜ್ಞಕ್ಕೆ ಬೇಕಾಗುವಷ್ಟು ಧನವನ್ನೆಲ್ಲ