ಪುಟ:ಚಂದ್ರಮತಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ. ನ್ನೆಲ್ಲ ಸಂರಕ್ಷಿಸುತ್ತಿದ್ದುದರಿಂದ ನೃತ್ಯವರ್ಗವೆಲ್ಲವೂ ಆಕೆಯ ವಿಷಯದಲ್ಲಿ ತಮ್ಮ ಪ್ರಾಣವನ್ನಾದರೂ ಕೊಡುವುದಕ್ಕೆ ಸಿದ್ದರಾಗಿದ್ದರು. ಅಷ್ಟು ಕನಿ ಕರವುಳ್ಳವಳಾದರೂ ಆಕೆ ಯಾವಾಗಲೂ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಯನ್ನು ಮಾಡದೆ ಬಿಡುತ್ತಿರಲಿಲ್ಲ. ಅವಳಿಗೆ ವಿದ್ಯಾಗರ್ವವಾಗಲೀ ಧನಗರ್ವ ವಾಗಲೀ ಲೇಶಮಾತ್ರವಾದರೂ ಇರಲಿಲ್ಲ. ನಂಟರ ವಿಷಯದಲ್ಲಿಯೂ ಹಿರಿ ಯರ ವಿಷಯದಲ್ಲಿಯೂ ಗೌರವವುಳ್ಳವಳಾಗಿ ಅವರು ಮೆಚ್ಚುವಂತೆ ನಡೆದು ಕೊಳ್ಳುತ್ತಿದ್ದಳು. ಕನಿಸಿನಲ್ಲಾದರೂ ಸುಳ್ಳನ್ನಾಡಳು. ಪರಪುರುಷರನ್ನು ನೋದರರೆಂದೂ ಸ್ತ್ರೀಯರನ್ನು ಒಡಹುಟ್ಟಿದ ಅಕ್ಕತಂಗಿಯರೆಂದೂ ಭಾವಿಸುತ್ತಿದ್ದಳು. ನರರು ಎಷ್ಟು ಉತ್ತಮ ಸ್ಥಿತಿಯಲ್ಲಿದ್ದರೂ ಅವರನ್ನು ನೋಡಿ ಸಂತೋಷಪಡುತ್ತಿದ್ದಳಲ್ಲದೆ ಅಸೂಯೆಪಡುತ್ತಿರಲಿಲ್ಲ. ಸಮಸ್ತ ಜಂತುಗಳ ವಿಷಯದಲ್ಲಿಯೂ ಕೃನಾಶೀಲೆಯಾಗಿದ್ದಳು. ಬಡಬಗ್ಗರಿಗೆ ಯಾವಾಗಲೂ ಸಾಹಾಯ್ಯವನ್ನೇ ಮಾಡುತ್ತಿದ್ದಳು. ನಿರಂತರವೂ ತನ್ನನ್ನು ಸನ್ಮಾರ್ಗದಲ್ಲಿಯೇ ಪ್ರವರ್ತಿಸುವಂತೆ ಮಾಡಬೇಕೆಂದು ಭಗವಂತನನ್ನು ಧ್ಯಾನಿಸುತ್ತಿದ್ದಳು. ಅವಕಾಶವೊದವಿದಾಗ ವ್ಯರ್ಥವಾಗಿ ಕಾಲಹರಣೆ ಮಾಡದೆ ನಮ್ಮಂಥಗಳನ್ನು ಓದುವುದರಲ್ಲಿಯೇ ಕಾಲಕಳೆಯುತ್ತಿದ್ದಳು. ಹೀಗೆ ಕೆಲದಿನಗಳು ಕಳೆದ ಬಳಿಕ ಚಂದ್ರಮತಿಯು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆತ್ತಳು. ಸುಂದರವಾಗಿದ್ದಾ ಮಗುವಿಗೆ ತಾಯ್ತಂದೆಗಳು ಲೋಹಿತಾಸೆ ನೆಂದು ನಾಮಕರಣ ಮಾಡಿದರು. ಪುತ್ರ ಜನನದಿಂದ ಆ ದಂಪತಿಗಳಿಗುಂಟಾದ ಸಂತೋಷವು ಅಷ್ಟಿಷ್ಟೆಂದು ಹೇಳಲಳವಲ್ಲ. ಹೀಗೆ ಚ೦ದ್ರಮತಿಯ ಹರಿಶ್ಚಂದ್ರನೂ ನಕಲ ಸುಖಸಾಮ್ರಾಜ್ಯವನ್ನು ಹೊಂದಿ ಸ್ವಲ್ಪ ಕಾಲ ಸುಖವಾಗಿ ಸಂಸಾರಮಾಡಿಕೊಂಡಿದ್ದರು. ಹನ್ನೊಂದನೆಯ ಪ್ರಕರಣ ಮಹರ್ಷಿಗಳೆಲ್ಲರೂ ಒಂದುದಿನ ಸಭೆ ಸೇರಲು ಯಾವಾಗಲೂ ಸತ್ಯಕ್ಕೆ ತಪ್ಪದ ಮಹಾನುಭಾವನಾವನಾದರೂ ಇರುವನೇ ಎಂದು ಅವರವ ರಲ್ಲಿಯೇ ವಿವಾದವುಂಟಾಯಿತು. ಆಗ ವಸಿಷ್ಠ ನು ಮಾನವಕೋಟಿಯ