ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹತ್ತನೆಯ ಪ್ರಕರಣ.
೫೫

ಮೂಲವಾಯಿತು. ಆ ದಂಪತಿಗಳ ಸೌಂದರ್ಯವನ್ನು ಕಣ್ಣಾರೆ ನೋಡಿದವರೆಲ್ಲರೂ ಕಥೆಗಳಲ್ಲಿ ಕೇಳುತ್ತಿರುವ ರತಿ ಮನ್ಮಥರು ಇವರಷ್ಟು ಸೌ೦ದರ್ಯಶಾಲಿಗಳಾಗಿದ್ದರೇ ಎಂದು ಸಂಶಯವಡುತ್ತಿದ್ದರು. ಲೋಕದಲ್ಲಿ ಆರಿಗಾದರೂ ಸುಗುಣಾಲಂಕಾರವೇ ನಿಶ್ಚಯವಾದ ಅಲಂಕಾರವಲ್ಲದೆ ಅದನ್ನುಳಿದು ಕೇವಲ ವಿದ್ಯೆಯ ರೂಪವೂ ಭೂಷಣವೂ ಅಲಂಕಾರಗಳು ಮದುವೆಯಲ್ಲಿ ನಡೆದಬಳಿಕ ಚಂದ್ರಮತಿಯ ತಾಯ್ತಂದೆಗಳು ಅವಳಿಗೆ ಹೇಳಬೇಕಾದ ಬುದ್ಧಿವಾದಗಳನ್ನು ಹೇಳಿ, ಹುಟ್ಟಿದಮನೆಗೂ ಸೇರಿದಮನೆಗೂ ಕೀರ್ತಿಯನ್ನು ತರಬೇಕೆಂದು ಬೋಧಿಸಿ, ಆಕೆ ಯಾವುದಾದರೊಂದು ತಪ್ಪನ್ನು ತಿಳಿಯದೇ ಮಾಡಿದರೂ ಅದನ್ನು ತಿದ್ದಿ ಅವಳನ್ನು ಆದರಿಸಬೇಕೆಂದು ಅಳಿಯನಿಗೆ ಹೇಳಿ ಮಗಳನ್ನು ಅತ್ತೆಯಮನೆಗೆ ಕಳುಹಿಸಿಕೊಟ್ಟರು. ಅವರಿಬ್ಬರೂ ಓದಿದವರಾದುದರಿಂದಲೂ ಸುಗುಣಸ೦ವತ್ತುಗಳುಳ್ಳವರಾದುದರಿಂದಲೂ ಆ ದಂಪತಿಗಳ ಇಂತಹ ಐಕ್ಯಮತ್ಯವೂ ಪರಸ್ಪರಾನುರಾಗವೂ ಎಲ್ಲಿಯೂ ಆರಿಗೂ ಉಂಟಾಗುವುದೆಂದು ಹೇಳುವುದಕ್ಕಾಗುವುದಿಲ್ಲ. ಹೀಗೆ ಕೆಲದಿನಗಳು ಕಳೆದಬಳಿಕ ತ್ರಿಶಂಕುಮಹಾರಾಜನು ರಾಜ್ಯಭಾರವನ್ನೆಲ್ಲ ಸಮರ್ಥನಾದ ಮಗನಿಗೆ ವಹಿಸಿ ತಾನು ತಪಸ್ಸು ಮಾಡುವುದಕ್ಕೋಸುಗ ಸತಿಯೊಡನೆ ಋಷ್ಯಾಶ್ರಮಕ್ಕೆ ಹೊರಟುಹೋದನು. ಹರಿಶ್ಚಂದ್ರನಾದರೋ ಪ್ರಜೆಗಳನ್ನೆಲ್ಲ ತನ್ನ ಕುಟುಂಬವೆಂದು ಭಾವಿಸಿ ನೋಡಿಕೊಳ್ಳುತ್ತೆ, ಅವರ ಕ್ಷೇಮಕ್ಕೋಸುಗವೇ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸುತ್ತೆ ತಪ್ಪ ಮಾಡಿದವರಲ್ಲಿ ದ್ವೇಷವನ್ನಿಡದೆ ಅವರಮೇಲ್ಮೆಗೋಸುಗವೇ ಮಕ್ಕಳನ್ನು ಶಿಕ್ಷಿಸುವ ತಂದೆಯಂತೆ ದಂಡಿಸುತ್ತೆ, ಪ್ರಜೆಗಳನ್ನು ನೋಯಿಸದೆ, ನೀತಿವಂತನಾಗಿ ರಾಜ್ಯದಲ್ಲಿ ಚೋರಭಯವಿಲ್ಲದಂತೆ ಕಾಪಾಡಿಕೊಳ್ಳುತ್ತೆ ಬಹು ಪ್ರಜಾರಂಜಕನೆನಿಸಿದನು. ಚಂದ್ರಮತಿಯೂ ವಿದ್ಯಾವತಿಯಾದುದರಿಂದ ತಿಳಿವುಳ್ಳವಳಾಗಿ ಗೃಹಕೃತ್ಯನಿರ್ವಹಣಭಾರವನ್ನು ತನ್ನ ಪತಿಗೆ ವಹಿಸದೆ ಸಮರ್ಥೆಯಾಗಿ ತಾನೇ ನಿರ್ವಹಿಸಿಕೊಳ್ಳುತ್ತೆ, ನಿಷ್ಕಾರಣವಾಗಿ ಯಾರಿಗೂ ಯಾವವಿಧವಾದ ಬಾಧೆಯನ್ನೂ ಉಂಟುಮಾಡದೆ ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತೆ ಸದ್ಗುಣವತಿಯಾಗಿದ್ದಳು. ದಾಸದಾಸೀಜನರಲ್ಲಿ ಅವಳು ಬಹುದಯೆಯುಳ್ಳವಳಾಗಿ ಅನ್ನಪಾನಾದಿಗಳಲ್ಲಿ ಲೋಪವಿಲ್ಲದೆ ಅವರ