ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹನ್ನೊಂದನೆಯ ಪ್ರಕರಣ.
೫೯

ಬೇಕೆಂಬ ಅಭಿಪ್ರಾಯದಿಂದ ಬಿಲ್ಲನ್ನೂ ಬಾಣಗಳನ್ನೂ ಧರಿಸಿ ಅದನ್ನು ಬೆನ್ನಟ್ಟಿದನು. ಅದು ಬೆದರಿ ಮಹಾವೇಗದಿಂದ ಓಡುತ್ತೆ ಆತನನ್ನು ಬಹುದೂರಕ್ಕೆ ಕರೆದುಕೊಂಡು ಹೋಗಿ ಕಡೆಗೆ ವಿಶ್ವಾಮಿತ್ರನ ಆಶ್ರಮಕ್ಕೆ ನುಗ್ಗಲು ಹರಿಶ್ಚಂದ್ರನು ಬೇಸರಗೊಂಡು ಬಿಲ್ಲಿಗೆ ಬಾಣವನ್ನು ಹೂಡಿ ಅದನ್ನು ಪ್ರಯೋಗಿಸಿದನು. ಆದರೆ ಹುಲ್ಲೆಯಮರಿಯು ಅದನ್ನು ತಪ್ಪಿಸಿಕೊಂಡು ಅದೃಶ್ಯವಾಯಿತು. ಹರಿಶ್ಚಂದ್ರನು ಬಿಸಿಲಿನಲ್ಲಿ ಓಡಿ ಬಲುಬಳಲಿದ್ದುದರಿಂದ ದಾಹಗೊಂಡು ಸಮೀಪದಲ್ಲಿದ್ದ ಒಂದು ಸರೋವರದಲ್ಲಿ ಜಲವಾನಮಾಡಿ ತೀರದಲ್ಲಿದ್ದ ಒಂದು ವಟವೃಕ್ಷದ ನೆಳಲಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿದನು. ಇಷ್ಟರಲ್ಲಿ ಮಂತ್ರಿಯಾದ ಸತ್ಯಕೀರ್ತಿಯೂ ಚಂದ್ರಮತಿಯ ಸಪರಿವಾರರಾಗಿ ಲೋಹಿತಾಸ್ಯನನ್ನು ಕರೆದುಕೊಂಡು ಅಲ್ಲಿಗೆ ಬಂದರು.

ಹರಿಶ್ಚಂದ್ರನು ವಿಶ್ರಮಿಸಿಕೊಳ್ಳುತ್ತಿರುವುದನ್ನು ವಿಶ್ವಾಮಿತ್ರನ ವನ ಬಾಲಕಿಯರಾದ ಇಬ್ಬರು ಮಾತಂಗತರುಣಿಯರು ಕಂಡು ಆತನಿಂದ ಏನಾದರೂ ವಸ್ತ್ರಾಭರಣಗಳನ್ನು ಉಚಿತವಾಗಿ ತೆಗೆದುಕೊಂಡು ಬರಬೇಕೆಂದು ಹರಿಶ್ಚಂದ್ರನ ಬಳಿಗೆ ಬಂದು ತಮ್ಮ ಸಾಮರ್ಥ್ಯವನ್ನೆಲ್ಲ ತೋರಿಸಿ ಇಂಪಾಗಿ ಹಾಡತೊಡಗಿದರು. ಅವರ ಗಾನವು ಆಹ್ಲಾದಕರವಾಗಿದುದರಿಂದ ಅರಸನು ಸ್ವಲ್ಪ ಕಾಲ ಅದನ್ನು ಕೇಳುತ್ತಿದ್ದು ಅವರಿಗೆ ತಕ್ಕ ಬಹು ಮಾನವನ್ನು ಕೊಟ್ಟು ಹೋಗಿರೆಂದು ಹೇಳಿದನು. ಆ ತರುಣಿಯರಾದರೋ ಅರಸನ ದಿವ್ಯಸುಂದರವಾದ ರೂಪವನ್ನು ಕಂಡು ಕಾಮ ಪರವಶೆಯರಾಗಿ ಮೈ ಮರೆತು ಉಚಿತಾನುಚಿತವಿವೇಕವಿಲ್ಲದೆ ಆ ಹಣವನ್ನು ತೆಗೆದುಕೊಳ್ಳದೆ ಆತನ ಸಂಗವನ್ನು ಹೊಂದುವ ಇಚ್ಛೆಯಲ್ಲದೆ ಮತ್ತೆ ಬೇರೆ ಯಾವ ಇಚ್ಛೆಯೂ ಇಲ್ಲವೆಂದೂ, ತಮ್ಮ ಮನೋರಥವನ್ನು ಪೂರ್ತಿಗೊಳಿಸಿ ತಮ್ಮನ್ನು ಕಾಪಾಡಬೇಕೆಂದೂ ಲಜ್ಜೆಯಿಲ್ಲದೆ ಕೇಳಿಕೊಂಡರು. ಇಂತಹ ಅನುಚಿತವಾದ ಪ್ರಾರ್ಥನೆಯನ್ನು ಕೇಳಿ ಅರಸನಿಗೆ ಅವರಮೇಲೆ ಆಗ್ರಹವುಂಟಾಗಲು ಆತನು ಅವರನ್ನು ಕೋಪದೃಷ್ಟಿಯಿಂದ ನೋಡುತ್ತೆ ತತ್‌ಕ್ಷಣವೇ ಅಲ್ಲಿಂದ ಹೊರಟುಹೋಗಿರೆಂದು ಗರ್ಜಿಸಿದನು. ಆ ಸ್ತ್ರೀಯರು ಆಗಲೂ ತಮ್ಮ ಚಲವನ್ನು ಬಿಡದೆ ತಮ್ಮ ಮನೋರಥವನ್ನು ಪೂರ್ತಿಮಾಡಿದಲ್ಲದೆ ಅಲ್ಲಿಂದ ಹೊರಡುವುದಿಲ್ಲವೆಂದು