ಪುಟ:ಚಂದ್ರಮತಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩ - ಚಂದ್ರಮತಿ, ಹೇಳಿದರು. ಆಗ ಅರಸನು ಕೋಪವನ್ನು ಸೈರಿಸಲಾರದವನಾಗಿ ಕುಚ್ಚ ರಾದ ಆ ಯುವತಿಯರನ್ನು ಹೊಡೆದು ನೂಕುವಂತೆ ಭಟರಿಗಾಜ್ಞಾಪಿಸಿ ದನು. ನೇವಕರು ತತ್‌ಕ್ಷಣವೇ ಸ್ವಾಮಿಯಾಜ್ಞೆಯನ್ನು ಶಿರಸಾವಹಿಸಿ ಆ ಸ್ತ್ರೀಯರನ್ನು ಚಮ್ಮಟಗೆಗಳಿಂದ ಹೊಡೆಯಲು, ಕರುಣಾಶೀಲೆಯಾದ ಚಂದ್ರಮತಿಯು ಒಳ್ಳೆಯ ಮಾತುಗಳಿಂದ ಹರಿಶ್ಚಂದ್ರನ ಕೋನವನ್ನು ಶಾಂತಗೊಳಿಸಿ ಆ ಸ್ತ್ರೀಯರನ್ನು ಬಿಡಿಸಿ ಕಳುಹಿಸಿದಳು. ಆ ಮಾತಂಗ ಕನೈಯರು ಕಣ್ಣೀರುಸುರಿಸುತ್ತೆ ತಲೆಯನ್ನು ಕೆದರಿಕೊಂಡು ಸೆರಗನ್ನು ಜಾರಿಸಿ ಗಟ್ಟಿಯಾಗಿ ಅಳುತ್ತೆ ವಿಶ್ವಾಮಿತ್ರನ ಆಶ್ರಮಕ್ಕೆ ಹೋದರು. ಹರಿಶ್ಚಂದ್ರನು ದುಡುಕಿ ಅವರನ್ನು ಹೊಡೆಯಿಸಿದುದಕ್ಕೋಸುಗ ಪಶ್ಚಾತ್ತಾಪ ವಡುತ್ತೆ, ವತ್ನಿಯ ಹಿತವಚನಗಳಿಂದ ಸಂತುಷ್ಟನಾಗಿ ಪುತ್ರಾದಿಗಳೊ ಡನೆ ವಿನೋದವಾಗಿದ್ದನು. ಹನ್ನೆರಡನೆಯ ಪ್ರಕರಣ.


- ಅನಂತರ ಮಾತಂಗಯುವತಿಯರು ವಿಶ್ವಾಮಿತ್ರನ ಆಶ್ರಮವನ್ನು ಪ್ರವೇಶಿಸಿ ಶೀತಲವಾದ ಮಂದಮಾರುತಕ್ಕೆ ಮೈಯೊಡ್ಡಿ ಕುಳಿತಿದ್ದ ವಿಶ್ವಾ ಮಿತ್ರನಿಗೆ ನಮಸ್ಕರಿಸಿ, ತಮಗೆ ಹರಿಶ್ಚಂದ್ರನು ಮಾಡಿದ ಅಪಮಾನವನ್ನು ಅತಿ ದೈನ್ಯದಿಂದ ವಿಜ್ಞಾಪಿಸಿ ನೊರಸೂರನೆ ಅಳತೊಡಗಿದರು. ಆತನಾ ಸ್ತ್ರೀಯರ ಪ್ರಲಾಪವನ್ನು ಕೇಳಿ ಸಿರಿದ ಹಾವಿನಂತೆ ಎದ್ದು ನಿಂತು, ತತ್ಕ್ಷಣವೇ ತನ್ನ ಶಿಷ್ಯರನ್ನೆಲ್ಲ ಕರೆದುಕೊಂಡು ದಾರಿಯುದ್ದಕ್ಕೂ ಪರು ನೋಕ್ತಿಗಳನ್ನೇ ಆಡುತ್ತೆ ಹರಿಶ್ಚಂದ್ರನ ಬಳಿಗೆ ಹೋದನು. ಹರಿಶ್ಚಂದ್ರನು ಈ ಮಹರ್ಷಿಯನ್ನು ದೂರದಿಂದಲೇ ನೋಡಿ ತನ್ನ ಹೆಂಡತಿಯೊಡನೆ ಸಮಾಸಕ್ಕೆ ಬಂದು ನಮಸ್ಕರಿಸಲು, ವಿಶ್ವಾಮಿತ್ರನು ಆತನ ನಮಸ್ಕಾರ ವನ್ನು ಪರಿಗ್ರಹಿಸದೆ ಕೆಂಡವನ್ನು ಗುಳುತ್ತಿರುವ ದೃಷ್ಟಿಯಿಂದ ನೋಡಿ ಇಂತೆಂದನು :