ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಾರ್ಥನೆ

ಪಾಠಕಮಹಾಶಯರೆ,

ರಾಜಮಹೇಂದ್ರದಲ್ಲಿರುವ ರಾವ್ ಬಹದ್ದೂರ್ ಶ್ರೀರ್ಮಾ ಕಂದು ಕೂರಿ ವೀರೇಶಲಿಂಗಂ ವಂತುಲುರವರು ಪ್ರಸಿದ್ಧಲೇಖಕರೆಂಬುದು ತಮಗೆ ಲ್ಲರಿಗೂ ತಿಳಿದೇ ಇರುವುದಷ್ಟೆ? ಈ ಲೋಕೋಪಕಾರಕರು ನನ್ನಲ್ಲಿ ಅನು ಗ್ರಹವಿಟ್ಟು ತಾವು ಆಂಧ್ರ ಭಾಷೆಯಲ್ಲಿ ವಿರಚಿಸಿರುವ ಗ್ರಂಥಗಳನ್ನೆಲ್ಲ ಕನ್ನ ಡಿಸಲು ಅನುಜ್ಞೆಯಿತ್ತರು. ಶ್ರೀಮನ್ಮಹಾರಾಜಾ ಕರ್ನಲ್ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬಹದ್ದೂರ್, ಜಿ. ಸಿ. ಎಸ್. ಐ., ಅವರ ಪ್ರೋತ್ಸಾಹಬಲದಿಂದ ಕರ್ಣಾಟಕ ಗ್ರಂಥರಚನೆಯಲ್ಲಿ ತತ್ಪರನಾಗಿ ರುವ ನಾನು ಇದನ್ನು ಕನ್ನಡಿಸಿ ನನ್ನಿಂದ ರಚಿಸಲ್ಪಟ್ಟಿರುವ ಇಪ್ಪತ್ತು ಮೂವತ್ತು ಪುಸ್ತಕಗಳೊಂದಿಗೆ ತಮ್ಮ ಸನ್ನಿಧಿಯಲ್ಲಿ ಸಮರ್ಪಿಸಿರುವೆನು. ಇದರಲ್ಲಿ ಉಕ್ತವಾಗಿರುವ ಗುಣಾತಿಶಯಗಳನ್ನು ನಾಠಕಮಹಾಶಯರು ಪರಿಗ್ರಹಿಸಬೇಕೆಂದು ಬೇಡುವೆನು.

ಪ್ರತಿಮಾನದಲ್ಲಿಯೂ ಪ್ರಕಟವಾಗುತ್ತಿರುವ " ಕರ್ಣಾಟಕ ಗ್ರಂಧ ಮಾಲೆಯಲ್ಲಿ ಇದನ್ನು ಮುದ್ರಿಸಿಕೊಟ್ಟುದಕ್ಕೋಸುಗ ಆ ಪತ್ರಿಕಾಸಂಸಾ ದಕರಾದ ಶ್ರೀಯುತ ಬಿ. ಸುಬ್ಬರಾವ್, ಬಿ. ಎ.. ಅವರ ಉಪಕಾರವು ಚಿರಸ್ಮ ರಣೀಯವಾಗಿರುವುದೆಂಬುದನ್ನು ಅತ್ಯಾನಂದದಿಂದ ತಿಳಿಸಲು ಕುತೂಹಲ ವಡುತ್ತಿರುವ,

ಮೈಸೂರು,
ನಂಜನಗೂಡು ಶ್ರೀಕಂಠ ಶಾಸ್ತ್ರಿ.
1910
"ಕರ್ಣಾಟಕ ಚಂದ್ರಿಕೆ"ಯ ಸಂವಾದಕ.

ಬಿಕರಿಗೆ ಸಿದ್ಧವಾಗಿದೆ.

ಸಂತಾಸಕ-[ಪರಿಹೃ ತವಾದ ದ್ವಿತೀಯಮುದ್ರಣ.]
ಬೆಲೆ 6 ಆಣೆ.


ವಿಳಾಸ:- ಎಂ. ಎಸ್. ರಾನ್ ಕಂಪೆನಿ,
ಪುಸ್ತಕ ವ್ಯಾಪಾರಿಗಳು,
ಅವೆನ್ಯೂ ರೋಡಕ್, ಬೆಂಗಳೂರು ಸಿಟ.