ಪುಟ:ಚಂದ್ರಮತಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹದಿಮೂರನೆಯ ಪ್ರಕರಣ. - -- -


ಸ್ವಲ್ಪ ಭಾಗಕ್ಕೂ ಸಮನಾಯಿತೆಂದೂ, ಉಳಿದ ಹಣವನ್ನೂ ಹೇಗಾದರೂ ಮಾಡಿ ಈಗಲೇ ಕೊಡಬೇಕೆಂದೂ, ನಿರ್ಬಂಧಗೊಳಿಸಿದನು. ಹರಿಶ್ಚಂ ದ್ರನು ತನಗೆ ಮತ್ತಾವ ಯುಕ್ತಿಯೂ ತೋರದಿರಲು ತನ್ನನ್ನು ಕರೆದು ಕೊಂಡು ಹೋಗಿ ಮಾರಿ ನಾಲವನ್ನು ತೀರಿಸಿಕೊಳ್ಳೆಂದು ಆ ಧೂರ್ತ ಬ್ರಹ್ಮ ಚಾರಿಗೆ ಹೇಳಿದನು. ನಕ್ಷತ್ರಕನು ಒಳ್ಳೆಯದೆಂದೊಪ್ಪಿಕೊಂಡು ಆ ರಾಜ ಶ್ರೇಷ್ಟನನ್ನು ತನ್ನ ಹಿಂದೆ ಕರೆದುಕೊಂಡು ಹೋಗಿ ಬೀದಿಬೀದಿಗಳಲ್ಲಿಯೂ ಅಲೆಯಿಸಿ ವಿಕ್ರಯಿಸುವೆನೆಂದು ಎಲ್ಲರಿಗೂ ತೋರಿಸಿ ಎಲ್ಲಿಯೂ ಬೆಲೆ ಯನ್ನು ಸರಿಗೊಳಿಸದೆ ಕಡೆಗೆ ವೀರಬಾಹುವೆಂಬ ಒಬ್ಬ ಚಂಡಾಲನ ಬಳಿ ಯಲ್ಲಿ ಬಹು ಧನವನ್ನು ತೆಗೆದುಕೊಂಡು ಅವನಿಗೆ ಸೇವಕನನ್ನಾಗಿ ಮಾರಿ ದನು. ವೀರಬಾಹುವು ಹಣವನ್ನು ಕೊಡುವುದಕ್ಕೆ ಮೊದಲು “ ನಾನಿಷ್ಟು ಹಣವನ್ನು ಕೊಟ್ಟು ಕೊಂಡಪಕ್ಷದಲ್ಲಿ ಈತನೊ೦ದುವೇಳೆ ರಾತ್ರಿ ಕಾಲ ದಲ್ಲಿ ಹೇಳದೆ ಕೇಳದೆ ನನ್ನನ್ನು ವಂಚಿಸಿ ಓಡಿಹೋಗುವನೇನೋ ? ನನ್ನ ಹಣಕ್ಕೆ ಯಾರು ಗುರಿಯಾಗುವರು ? ” ಎಂದು ಕೇಳಿದನು. ಹರಿಶ್ಚಂದ್ರನು ಸತ್ಯವನ್ನು ಪರಿಪಾಲಿಸುವುದಕ್ಕೋಸುಗವೇ ಇಂತಹ ಕಷ್ಟಗಳಿಗೆಲ್ಲ ನೆಲೆ ಯಾಗಿರುವನೆಂದೂ, ಆತನು ಪರರನ್ನು ಯಾವಾಗಲೂ ವಂಚಿಸತಕ್ಕವ ನಲ್ಲವೆಂದೂ, ನಕ್ಷತ್ರಕನು ಆತನ ಚರಿತ್ರೆಯನ್ನೆಲ್ಲ ವೀರಬಾಹುವಿಗೆ ನಂಬುಗೆಯುಂಟಾಗುವಂತೆ ಮೊದಲಿಂದ ತಿಳಿಸಿದನು. ಹರಿಶ್ಚಂದ್ರನೂ ತಾನಾಡಿದ ಮಾತಿಗೆ ತಪ್ಪದೆ ಎಂತಹ ಕಷ್ಟಗಳು ಸಂಭವಿಸಿದರೂ ಎಲ್ಲವನ್ನೂ ಸೈರಿಸಿ ಅವನನ್ನು ಸೇವಿಸುವನೆಂದು ಮಾತು ಕೊಟ್ಟನು. ಆಗಳಾ ಚಂಡಾಲ ನಿಗೂ ಹರಿಶ್ಚಂದ್ರನ ವಿಷಯದಲ್ಲಿ ಸ್ವಲ್ಪ ಮರುಕವುಂಟಾಗಿ, ಆ ಬ್ರಾಹ್ಮ ಣನು ಕೇಳಿದಷ್ಟು ಹಣವನ್ನು ಕೊಟ್ಟು ಆತನು ಯಾವಾಗ ಬೇಕಾದರೂ ತಾನು ಕೊಟ್ಟ ಹಣವನ್ನು ಹಿಂದಕ್ಕೆ ಕೊಡುವಪಕ್ಷದಲ್ಲಿ ತಕ್ಷಣವೇ ದಾಸ್ಯದಿಂದ ಬಿಡುತೆ ಮಾಡುವೆನೆಂದು ವಾಗ್ದಾನ ಮಾಡಿದನು. ನಕ್ಷತ್ರ ಕನು ಆ ಧನವನ್ನೆಲ್ಲ ತೆಗೆದುಕೊಂಡು, ಸಾಲವೂ ತನ್ನ ಕೂಲಿಯ ಎರಡೂ ಪೂರ್ತಿಯಾಗಿ ಸಂದಿತೆಂದು ಹೇಳಿ ಚಂದ್ರಮತೀ ಹರಿಶ್ಚಂದ್ರರನ್ನು ಆಶೀರ್ವ ದಿಸಿ ಹೊರಟುಹೋದನು.