ಪುಟ:ಚಂದ್ರಶೇಖರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಕ್ರಮಣಿಕ. ಮಾಲೆಯನ್ನು ಅದರ ಕೊಂಬಿಗೆ ಹಾಕಿಬಿಟ್ಟಳು. ಆಗ ವಿವಾದವು ಹರಿಯಿತು. ಈ ಹುಡುಗರು ಸರ್ವದಾ ಈ ರೀತಿಯಾಗಿ ಮಾಡುತಲಿದ್ದರು. ಮಾಲೆದು ಇಲ್ಲದ ದಿನ ಹುಡುಗನು ಹಕ್ಕಿಯ ಗೂಡುಗಳಿಂದ ಮರಿಗಳನ್ನು ಬೀಳಿಸುವನು. ಮಾವಿನ ಕಾಯಿನ ದಿವಸದಲ್ಲಿ ಪಕ್ಷವಾದ ಹಣ್ಣುಗಳನ್ನು ಕೆಡುಹಿ ಬೀಳಿಸುವನು. ಸಾಯಂಕಾಲದ ನಿರ್ಮಲವಾದ ಆಕಾಶದಲ್ಲಿ ನಕ್ಷತ್ರಗಳು ಹುಟ್ಟಿದುವು. ಇಬ್ಬರೂ ನಕ್ಷತ್ರಗಳನ್ನು ಎಣಿಸುವರು, ಯಾರು ಮೊದಲು ಹುಟ್ಟಿದ ನಕ್ಷತ್ರವನ್ನು ನೋಡಿದರು ? ಮೊದಲು ಹುಟ್ಟಿದುದು ಯಾವದು ? ನೀನು ಎಷ್ಟು ನೋಡಿದೆ ? ನಾಲ್ಕು ನಕ್ಷತವೆ ? `ಇನು ಐದು ನೋಡಿದೆ. ಇದೊಂದು, ಇದೊಂದು, ಇದೊಂದು-ಅದು ತಪ್ಪು, ಶೈವ `! ನೀನು ಮೂರು ನಕ್ಷತ್ರಗಳನ್ನು ಕೂಡ ನೋಡಿಲ್ಲ-ಹೀಗೆ ಮಾತಾಡುತ್ತ 'ನ್ನು ಕಳೆಯುವರು. ನಂತರ, ಹಡಗು, ದೋಣಿಗಳ ಎಣಿಕೆ, ಎಷ್ಟು ಹಡಗುಗಳು ಹೋದವು, ಹೇಳು ೧ ? ಹದಿನಾರು, ಅದಲ್ಲ. ಎಂಟು ಹೋಯಿತು, ಕೈವಲನಿಗೆ ಎಣಿಸುವು ಒಂದು ತಡವೆ ಎಣಿಸಿದುದರಲ್ಲಿ ಒಂಭತ್ತಾಯಿತು, ಮತ್ತೊಂದು ಗಲ್ಲಿ ಹತ್ತೊಂಭತ್ತು ಆಯಿತು, ಅದರ ಮೇಲೆ ಲೆಕ್ಕ ಮಾಡುವು ಏಕಾಗ್ರ ಚಿತ್ರದಿಂದ ಬಂದು ಹಡಗನ್ನು ನೋಡುತ್ತಿದ್ದರು. ಗೆ ? ಎಲ್ಲಿಗೆ ಹೋಗುತ್ತಾರೆ ? ಎಲ್ಲಿಂದ ಬಂದರು ? ಹೂಟ ಗಲ್ಲಿ ಹೇಗೆ ಬಂಗಾರವು ಕಾಣಿಸುತ್ತದೆ! ಹೀಗೆಲ್ಲಾ ಯೋಚಿ