ಪುಟ:ಚಂದ್ರಶೇಖರ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ. ಈ ಪ್ರಕಾರ ಪರಸ್ಪರ ಪ್ರೀತಿಯು ಹುಟ್ಟಿ ಬೆಳೆಯಿತು, ಅದಕ್ಕೆ ಪ್ರಣಯ ವೆಂದು ಹೇಳಿದರೆ ಹೇಳಿರಿ, ಹೇಳದಿದ್ದರೆ ಬಿಡಿರಿ, ಹದಿನಾರು ವರು ಪ್ರದ ನಾಯಕ, ಎಂಟು ವರುಷದ ನಾಯಕಿ ! ಹುಡುಗರಹಾಗ್ # ಪ್ರೀತಿಸುವುದಕ್ಕೆ ಯಾರಿಗೂ ಗೊತ್ತಿರದು. ಬಾಲ್ಯದ ಸ್ನೇಹದಲ್ಲಿ ಏನೋ ಒಂದು ಸಂಪ್ರೀತಿಯು ಇದೆ ಯೆಂದು ತೋರುತ್ತದೆ. ಬಾಲ್ಯದ ಸ್ನೇಹಿತರು ಎಷ್ಟು ಮಂದಿ ಯಾವನದಲ್ಲಿ ಪರ ಸ್ಪರ ನೋಡಿರುವರು ? ಎಷ್ಟು ಮಂದಿ ಬದುಕಿರುವರು ? ಎಷ್ಟು ಮಂದಿ ಸ್ನೇಹಕ್ಕೆ ಯೋ ಗ್ಯರಾಗಿರುವರು ? ವಾರ್ಧಕ್ಯದಲ್ಲಿ ಬಾಲ್ಯಸ್ನೇಹದ ಸ್ಮತಿಮಾತು ಉಳಿದಿರುವುದು. ಮಿಕ್ಕದುದೆಲ್ಲ ಮರೆತುಹೋಗಿರುವುದು, ಆದರೆ ಆ ಸ್ಮೃತಿಮಾತ್ರವೂ ಎಷ್ಟು ಆನಂದ ವಾಗಿರುತ್ತದೆ ! - ಹುಡುಗನು ಬಂದೊಂದು ತಡವೆ ಆ ಹುಡುಗಿಯ ಮುಖಮಂಡಲವು ಅತಿ ಮಧುರ ವಾದುದೆಂದೂ, ಅವಳ ಕಣ್ಣುಗಳಲ್ಲಿ ಯಾವದೋ ತಿಳಿದುಲಸಾಧ್ಯವಾದ ಒಂದು ಗುಣ ವಿದೆಯೆಂದೂ ಮನಸ್ಸಿನಲ್ಲಿ ಅನುಭವ ಮಾಡುತ್ತ, ಎಷ್ಟೊ ತಡವೆ ಅವಳು ಹೋಗು ತಿದ್ದ ಮಾರ್ಗದಲ್ಲಿ ಮರೆಯಾಗಿ ನಿಂತುಕೊಂಡು ಅವಳನ್ನು ನೋಡುತಲಿರುವನು. ಆದರೆ ತಾನು ಅವಳನ್ನು ಪ್ರೀತಿಸುತ್ತೇನೆಂದು ಯಾವಾಗಲೂ ತಿಳಿಯಲಾರದವನಾಗಿದ್ದನು, ಅನಂ ತರ, ಆಹ್ಲಾದಕರವಾದ ಮುದ್ದು ಮುಖ, ಆ ಸರಳವಾದ ಕಟಾಕ್ಷ, ಇವೆಲ್ಲಾ ಕಾಲದ ಪ್ರವಾಹದಲ್ಲಿ ಎಲ್ಲಿಯೋ ತೇಲಿಹೋಗಿಬಿಟ್ಟುವು, ಅದು ಕಾರಣ ಪೃಥಿವಿಯಲ್ಲಿ ಅದನ್ನು ಹುಡುಕಿ ನೋಡುವವು. ಕೇವಲ ಅದರ ಸ್ಮತಿ ಮಾತ್ರ ಉಳಿದಿದೆ. ಬಾಲ್ಯ ಪ್ರಣಯ ದಲ್ಲಿ ಏನೋ ಒಂದು ಸಂಪ್ರೀತಿಯು ಇರುವುದು. - ಶೈವಲಿನಿಯು ಮನಸ್ಸಿನಲ್ಲಿ ತನ್ನನ್ನು ಪ್ರತಾಪನಿಗೆ ಕೊಟ್ಟು ಮದುವೆಯಾಗುವು ದೆಂದು ತಿಳಿದುಕೊಳ್ಳುವಳು. ಪ್ರತಾಪನು ಮದುವೆಯಾಗುವುದಿಲ್ಲವೆಂದು ತಿಳಿದುಕೊಳ್ಳು ವನು, ಶೈವಲಿನಿಯು ಪ್ರತಾಪನ ಜ್ಞಾತಿಯ ಮಗಳು, ಸಂಬಂಧ ದೂರವಾದರೂ ಇಬ್ಬರೂ ಜ್ಞಾತಿಗಳು, ಶೈವಲಿನಿಯ ಯೋಚನೆಗೆ ಬುಡವೇ ಇರಲಿಲ್ಲ. - ಶೈವಲಿನಿಯು ಬಡವರ ಕನ್ಯ, ಅವಳಿಗೆ ಯಾರೂ ಇಲ್ಲ, ಕೇವಲ ತಾಯಿಯೊ ಬೃಳು ಮಾತ್ರ ಇದ್ದಳು, ಅವಳಿಗೆ ಏನೂ ಇರಲಿಲ್ಲ. ಒಂದು ಗುಡಿಸಲು ಇತ್ತು; ಮತ್ತು ಶೈವಲಿನಿಯ ರೂಪರಾಶಿ, ಪ್ರತಾಪನು ದರಿದ್ರನು. ಶೈವಲಿನಿಯು ದೊಡ್ಡವಳಾಗುತ್ತ ಬಂದಳು, ಅವಳಿಗೆ ಪೋಡಶ ಕಳೆಯ ತುಂಬು ತಬಂದಿತು, ಆದರೆ ಮದುವೆಯಾಗಲಿಲ್ಲ. ಮದುವೆಗೆ ಹಣಬೇಕು, ಕೊಡುವವರು