ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಕ್ರಮಣಿಕೆ. ಯಾರು ? ಆ ಅರಣ್ಯದ ಮಧ್ಯದಲ್ಲಿ ಬಂದು ಹುಡುಕಿಕೊಂಡು ಆ ರೂಪರಾಶಿದು ಅಮ ಲ್ಯವಾದುದೆಂದು ತೆಗೆದುಕೊಳ್ಳುವವರು ಯಾರು ? ಕಡೆಗೆ ಶೈವಲಿನಿಗೆ ಬುದ್ದಿಯು ಬರುತ್ತ ಬಂದಿತು. ಬುದ್ದಿಯು ಬಂದು, ತನಗೆ ಪ್ರತಾಪನನ್ನು ಬಿಟ್ಟರೆ ಸೃಥಿವಿಯಲ್ಲಿ ಬೇರೆ ಸುಖವಿಲ್ಲವೆಂದಂದುಕೊಳ್ಳುವಳು, ಮತ್ತು ಈ ಜನ್ಮದಲ್ಲಿ ಪ್ರತಾಪನನ್ನು ಹೊಂದುವ ಸಂಭವವಿಲ್ಲವೆಂತಲೂ ತಿಳಿದುಕೊಳ್ಳುವಳು. ಈ ಇಬ್ಬರೂ ಆ ಯೋಚನೆಗೆ ಪ್ರಾರಂಭಿಸಿದರು. ಬಹಳದಿನ ಆಲೋಚಿಸಿದರು. ಯಾರಿ ಗೂ ತಿಳಿಯದಹಾಗೆ ಆಲೋಚನೆಯನ್ನು ಮಾಡಿಕೊಂಡರು. ಮಾವ ಇತ್ಯರ್ಥವನ್ನೂ ಗೊತ್ತು ಮಾಡಲಾರದೆಹೋದರು. ಆಲೋಚನೆಯಲ್ಲಿ ಕಡೆಗೆ ಇಬ್ಬರೂ ಗಂಗಾಸ್ನಾನಕ್ಕೆ ಹೋಗಬೇಕೆಂದು ಸ್ಥಿರವಾಗಿ, ಸ್ನಾನಕ್ಕೆ ಗಂಗೆಗೆ ಹೋದರು. ಗಂಗೆಯಲ್ಲಿ ಬಹಳ ಮಂದಿ ಈಜಾಡುತಲಿದ್ದರು. ಪ್ರತಾಪನು, ಶೈವಲಿನಿ ! ನಾವೂ ಈಜಬೇಕೆಂದು ಹೇಳಿ, ಇಬ್ಬರೂ ಈಜುವುದಕ್ಕೆ ಪ್ರಾರಂಭಿಸಿದರು. ಈಜುವುದರಲ್ಲಿ ಅವರಿಬ್ಬರೂ ಸಮರ್ಥರಾಗಿದ್ದರು. ಅವರಹಾಗೆ ಊರಲ್ಲಿ ಯಾವ ಹುಡುಗರೂ ಇರಲಾರರು. ಮಳೆಗಾಲ ಗಂಗೆಯು ಪೂರ್ಣಪ್ರವಾಹ, ಪ್ರವಾಹದ ನೀರು ಏರು ತಗ್ಗುಗಳಲ್ಲಿ ಎದ್ದು ಬಿದ್ದು ಕುಣಿದಾಡುತ್ತ ಹರಿದು ಹೋಗುತಲಿತ್ತು, ಅವರಿಬ್ಬರೂ ಆ ಜಲರಾತಿಯನ್ನು ಸೀಳಿಕೊಂಡು, ಮಥನ ಮಾಡಿಕೊಂಡು, ಎರಚಾಡಿಕೊಂಡು, ಈಜಿಕೊಂಡು ಹೋದರು, ನೊರೆಗಳ ಸುಳಿಗಳಲ್ಲಿ ಆ ಯವನ ಶರೀರವೆರಡೂ ಬೆಳ್ಳಿಯುಂಗುರದ ಮಧ್ಯದಲ್ಲಿ ರತ್ನ ಯುಗಳದಹಾಗೆ ಪ್ರಕಾಶಿ ಸುತಲಿದ್ದುವು. ಅವರು ಈಜಾಡಿಕೊಂಡು ಬಹಳ ದೂರ ಹೊರಟುಹೋದುದನ್ನು ದಡದಲ್ಲಿದ್ದವರು ನೋಡಿ, ಹಿಂದಿರುಗುವಂತೆ ಕೂಗಿದರು. ಅದು ಹುಡುಗರಿಬ್ಬರಿಗೂ ಕೇಳಿಸಲಿಲ್ಲ, ಅವರು ಹೊರಟೇಹೋದರು. ಪುನಃ ಎಲ್ಲರೂ ಕೂಗಿದರು ; ತಿರಸ್ಕಾರ ಮಾಡಿದರು ; ಬೈದರು. ಅದು ಯಾವದೂ ಹುಡುಗರಿಗೆ ಕೇಳಿಸಲಿಲ್ಲ. ಹೊರಟುಹೋದರು. ಬಹಳ ದೂರ ಹೋದ ಮೇಲೆ ಪ್ರತಾಪನು, ಶೈವೆಲಿನಿ! ಇದೇ ನನಗೆ ಮದುವೆ ! ಎಂದನು. ಶೈವಲಿನಿ-ಮತ್ತೇನು-ಇಲ್ಲಿಯೆ ? ಪ್ರತಾಪನು ಮುಣುಗಿಹೋದನು. ಕೈವಲಿನಿಯು ಮುಣುಗಲಿಲ್ಲ. ಆ ಸಮಯದಲ್ಲಿ ಅವಳಿಗೆ ಭಯವುಂಟಾಯಿತು. ಅವಳು ಮನಸ್ಸಿನಲ್ಲಿ, ಏತಕ್ಕೆ ಸಾಯಲಿ ? ಪ್ರತಾಪನು ನನಗೆ ಯಾರು ? ನಾನು ಅವ ನಿಗೆ ಯಾರು ? ನನಗೆ ಭಯವಾಗುತ್ತದೆ. ನಾನು ಸಾಯಲಾರೆ ಎಂದಂದುಕೊಂಡಳು. ಅವಳು ಮುಣುಗಲಿಲ್ಲ. ಹಿಂದಿರಿಗಿದಳು, ಈಜಿಕೊಂಡು ದಡಕ್ಕೆ ಬಂದಳು. ಪ