ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಭಾಗ. ೧೦೧ ನ್ನು ಬೆನ್ನಿನಮೇಲೆ ಇಟ್ಟಹಾಗಾಯಿತು, ಮತ್ತೊಂದು ಕೈಯಿಂದ ಶೈವಲಿನಿಯ ಎರಡು ಕಾಲುಗಳನ್ನೂ ಒಟ್ಟಿಗೆ ಕೂಡಿಸಿ ಹಿಡಿದುಕೊಂಡಹಾಗಾಯಿತು. ಅನಂತರ ತನ್ನನ್ನು ಎತ್ತಿಕೊಂಡಹಾಗಾಯಿತು. ಅವಳು ಒಂದು ತಡವೆ ಚೀತ್ಕಾರ ಮಾಡಿದಳು. ಮನು ಏನೊ, ದೇವತೆಯೊ, ಯಾರೊ ತನ್ನನ್ನು ಎತ್ತಿಕೊಂಡು ಎಲ್ಲಿಗೆ ಹೋಗುವಹಾಗೆ ತಿಳಿದಳು. ಸ್ವಲ್ಪ ಹೊತ್ತಿನಮೇಲೆ ಆತನು ತನ್ನನ್ನು ಎತ್ತಿಕೊಂಡು ಸಾವಧಾನವಾಗಿ ಪರ್ವತದಮೇಲೆ ಹೋಗುವಹಾಗೆ ಅನುಭವ ಮಾಡಿದಳು. ಆಗವಳು ಇವನು ಯಾರೇ ಆಗಲಿ, ಲಾರ್ರೆಸ ಫಾಸ್ಟರನಾಗಿರಲಾರನೆಂದು ಯೋಚಿಸಿದಳು. 96