ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಭಾಗ. ဂဝစု ಆದರೆ ಇತರ ಜಾನದಾರರ ಕಳ್ಳತನಕ್ಕೂ ಪ್ರತಾಪನು ಮಾಡುತಲಿದ್ದ ಕಳ್ಳ ತನಕ್ಕೂ ಸ್ವಲ್ಪ ಭೇದವಿತ್ತು. ಸ್ವಂತ ಆಸ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಲಿ ಅಥವಾ ದುರ್ದಾಂತರಾದ ಶತ್ರುಗಳನ್ನು ಇರಿಸುವುದಕ್ಕಾಗಲಿ ಪ್ರತಾಪನು ಕಳ್ಳರ ಸಹಾ ದವನ್ನು ಪಡೆಯುತಲಿದ್ದನು. ಅನರ್ಥವಾಗಿ ಪರಸಾಪಹರಣಕ್ಕಾಗಲಿ ಅಥವಾ ಪರ ಪೀಡನಕ್ಕಾಗಲಿ ಕಳ್ಳತನ ಮಾಡುತ್ತಿರಲಿಲ್ಲ. ದುರ್ಬಲರಾದ ಅಥವಾ ಪೀಡಿತರಾದವರ ರಕ್ಷಣ ಮಾಡುವುದಕ್ಕೋಸ್ಕರವೇ ದಸ್ಸು ವೃತ್ತಿಯನ್ನ ವಲಂಬಿಸುವನು. ಪ ತಾಪನು ಪ್ರಕೃತ ಆ ಮಾರ್ಗವನ್ನವಲಂಬಿಸಿದ್ದನು. ಯಾವರಾತ್ರಿಯಲ್ಲಿ ಶೈವಲಿನಿಯು ಹಡಗನ್ನು ಬಿಟ್ಟು ಓಡಿಹೋದಳೊ ಆ ರಾತ್ರಿ) ಪ್ರಭಾತದಲ್ಲಿ ಸತಾಪನ: ನಿದ್ರೆಯಿಂದ ಎಚ್ಚರವಾಗಿ ಎದ್ದು ರಾಮಚರಣನು ಬಂದಿರುವು ದನ್ನು ಕಂಡು ಆನಂದಿತನಾದನು, ಆದರೆ ಲೈವಲಿನಿಯನ್ನು ಕಾಣದೆ ಚಿಂತಿತನಾದನು. ಸ್ವಲ್ಪ ಹೊತ್ತು ಅವಳಿಗೋಸ್ಕರ ಇದಿರು ನೋಡುತಲಿದ್ದು, ಅನಂತರ ಅವಳನ್ನು ಹುಡು ಕುವುದಕ್ಕೆ ಪ್ರಾರಂಭಿಸಿದನು. ಗಂಗಾತೀರದಲ್ಲಿ ಹುಡುಕಿದನು.ಸಿಕ್ಕಲಿಲ್ಲ. ಬಹಳ ಹೊತ್ತಾಯಿತು -ಪ್ರತಾಪನು ನಿರಾಶನಾಗಿ, ಶೈವಲಿನಿಯು ನೀರಿನಲ್ಲಿ ಮುಣುಗಿ ಸತ್ತು ಹೋಗಿರಬೇಕೆಂದು ಸಿದ್ದಾಂತ ಮಾಡಿಕೊಂಡನು. ಅವಳು ಈಗ ಮುಣುಗಿ ಸಾವು ವುದು ಅಸಂಭವವಲ್ಲವೆಂದು ತಿಳಿದಿದ್ದನು. ಪ್ರತಾಪನು, ಕೈವಲಿನಿಯ ಮರಣಕ್ಕೆ ನಾನೇ ಕಾರಣನೆಂದು ಯೋಚಿಸಿಕೊಂಡನು. ಆದರೆ ಪುನಃ, ನನ್ನ ದೋಷವೇನು ? ನಾನು ಧರ್ಮವನ್ನು ಬಿಟ್ಟು ಅಧರ್ಮ ಮಾರ್ಗ ದಲ್ಲಿ ಹೋಗಲಿಲ್ಲ. ಕೈವಲಿನಿಯು ಯಾವದಕ್ಕೋಸ್ಕರ ಸತ್ತಳೊ ಅದು ತನ್ನಿಂದ ನಿವಾರ್ಯವಾಗತಕ್ಕೆ ಕಾರಣವಲ್ಲವೆಂದು ಯೋಚಿಸಿ, ಅದು ಕಾರಣ ಪ್ರತಾಪನಿಗೆ ತನ್ನ ಮೇಲೆ ಕೋಪಮಾಡಿಕೊಳ್ಳುವುದಕ್ಕೆ ಕಾರಣವು ಒದಗಲಿಲ್ಲ. ಚಂದ್ರಶೇಖರನಮೇಲೆ ಸ್ವಲ್ಪ ಕೋಪವನ್ನು ಮಾಡಿದನು. ಅವನೇತಕ್ಕೆ ಅವಳನ್ನು ಮದುವೆಮಾಡಿಕೊಂಡ ನೆಂದು ಸ್ವಲ್ಪ ಕೊಪಗೊಂಡನು. ತಾನು ರೈವಲಿನಿಯನ್ನು ಮದುವೆಯಾಗದೆ ರೂಪಸಿ ಯನ್ನು ಮದುವೆಯಾದೆನೇತಕ್ಕೆಂದು ರೂಪಸಿಯಮೇಲೂ ಸ್ವಲ್ಪ ಕೋಪಿಸಿಕೊಂಡನು. ಸುಂದರಿಯಮೇಲೂ ಸ್ವಲ್ಪ ಕೋಪವುಳ್ಳವನಾದನು. ಸುಂದರಿಯು ಶೈವಲಿನಿಯನ್ನು ಕಳುಹಿಸದಿದ್ದರೆ ಅವಳು ಅವನೊಂದಿಗೆ ಗಂಗೆಯಲ್ಲಿ ಈಜುತ್ತಿರಲಿಲ್ಲ. ಶೈವಲಿನಿದ ಸಾಯುತ್ತಿರಲಿಲ್ಲವೆಂದು ಕೋಪಮಾಡಿದನು. ಲಾರ್ರೆನೆ ಫಾಸ್ಟರನಮೇಲೆ ಕೋಪವುಂ ಟಾಯಿತು. ಅವನು ಕೈವಲಿನಿಯನ್ನು ಗೃಹತ್ಯಾಗಿಯನ್ನಾಗಿ ಮಾಡದಿದ್ದರೆ ಇದಾವುದೂ ಸಂಭವಿಸುತ್ತಿರಲಿಲ್ಲ. ಇಂಗ್ಲಿಷ್' ಜಾತಿಯವರು ಬಂಗಾಳೆಗೆ ಬಾರದಿದ್ದರೆ ಶೈವಲಿನಿಯು ಫಾಸ್ಟರನ ಕೈಗೆ ಬೀಳುತ್ತಿರಲಿಲ್ಲ. ಅತಏವ ಪ್ರತಾಪನಿಗೆ ಇಂಗ್ಲಿಷ್ ಜಾತಿಯವರಮೇಲೆ ನಿವಾರ್ಯವಾಗದ ಕೋಪವು ಹುಟ್ಟಿತು, ಪ್ರತಾಪನು ಫಸ್ವರನನ್ನು ಪುನಃ ಹಿಡಿದು ವಧೆಮಾಡಿ, ಈತಡವೆ ಅವನನ್ನು ಅಗ್ನಿ ಸಂಸ್ಕಾರ ಮಾಡಬೇಕುಇಲ್ಲದಿದ್ದರೆ ಅವನು