ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧y ಚಂದಶೇಖರ. ವಾಗಲಿ, ಇಬ್ಬರೂ ಬದುಕಿದ್ದರೆ ಸುರಕ್ಷಿತವಾದಮೇಲೆ ಪುನಃ ನೋಡಬಹುದು. ಈಗ ಇಸ್ಮರಮಟ್ಟಿಗೆ ಸಾಕೆಂದನು. - ಶೈವಲಿನಿಯು ಕೈಮುಗಿದುಕೊಂಡು, ಇನ್ನೊಂದು ತಡವೆ ಸ್ವಲ್ಪ ಕುಳಿತಿರಬೇಕು. ನನ್ನ ಹಣೆಯಲ್ಲಿ ಪ್ರಾಯಶ್ಚಿತ್ತವು ಬರೆದಿಲ್ಲವೆಂದು ತೋರುತ್ತದೆಂದಳು. ಪುನಃ ಆ ಸ್ಯ ಹ್ನವು ಜ್ಞಾಪಕಕ್ಕೆ ಬಂದಿತು. ಅವಳು ಪುನಃ, ಕುಳಿತಿರಬೇಕು. ಒಂದು ನಿಮಿಷವಾ ದರೂ ತಮ್ಮನ್ನು ನೋಡುವೆನೆಂದಳು. ಚಂದ್ರಶೇಖರನು ಕುಳಿತುಕೊಂಡನು. - ಶೈವಲಿನಿದು, ಆತ್ಮಹತ್ಯೆ ಮಾಡಿಕೊಂಡರೆ ಪಾಪವೇನು ? ಎಂದಳು. ಅವಳು ಸ್ಥಿರವಾದ ದೃಷ್ಟಿಯಿಂದ ಚಂದ್ರಶೇಖರನನ್ನು ನೋಡುತಲಿದ್ದಳು. ನಗುನ ಪದ್ಯಗಳು ನೀರಿನಲ್ಲಿ ತೇಲುತಲಿದ್ದವು. ಚಂದ್ರಶೇಖರ ಪಾಪವುಂಟು, ಏತಕ್ಕೆ ಸಾಯಬೇಕೆಂದು ಆಸೆಪಡುತ್ತಿ? ಶೈವಲಿನಿಯು ನಡುಗಿ, ಸಾಯುವುದಕ್ಕೆ ಆಗುವುದಿಲ್ಲ, ಸತ್ತರೆ ಆ ನರಕದಲ್ಲಿ ಬೀಳುವೆನೆಂದಳು. ಚಂದ್ರಶೇಖರ - ಪ್ರಾಯಶ್ಚಿತ್ತ ಮಾಡಿಕೊಂಡರ ನರಕದಿಂದುದ್ಧಾರವಾಗುವೆ. ಶೈವಲಿನೀ-ಈ ಮನಸ್ಸಿನಲ್ಲಿರುವ ನರಕದಿಂದುದ್ಧಾರವಾಗುವುದುಂಟೆ? ಚಂದ್ರಶೇಖರ-ಅದು ಯಾವುದು ? ಶೈವಲಿನೀ - ಈ ಪರ್ವತಕ್ಕೆ ದೇವತೆಗಳು ಎಂದಿದ್ದಾರೆ. ಅವರು ನನಗೇನು ಮಾಡಿ ದ್ದಾರೋ ಹೇಳಲಾರೆನು. ರಾತ್ರಿ ಹಗಲು ನರಕದ ಕನಸು ಬೀಳುತಲಿದೆ. ಚಂದ್ರಶೇಖರನು ನೋಡುತಲಿದ್ದಹಾಗೆ ನೈವಲಿನಿಯ ದೃಷ್ಟಿಯು ಗುಹೆಯ ಬಾಗಿ ಲಿನ ಕಡೆಗೆ ಬಿದ್ದಿತು. ಯಾವುದನ್ನೂ ದೂರದಲ್ಲಿ ನೋಡುವಹಾಗೆ ನೋಡುತಲಿದ್ದಳು. ಅವಳ ಶೀರ್ಣವಾದ ಮುಖಮಂಡಲವು ಶುಷ್ಕವಾಗಿ ಹೋಯಿತು, ಕಣ್ಣುಗಳು ನಿಸ್ಸು ರಿತವಾದುವು. ರೆಪ್ಪೆಯು ಮುಚ್ಚುತ್ತಿರಲಿಲ್ಲ. ಸಂಕುಚಿತವಾಗಿದ್ದ ಮೂಗಿನ ಹೊಳ್ಳೆ ಗಳು ಅರಳಿದವು. ಶರೀರವು ಕಂಟಕಿತವಾಯಿತು. ನಡಕುಹತ್ತಿತು. ಚಂದ್ರಶೇಖ ರನು, ನೋಡುವುದೇನೆಂದು ಕೇಳಿದನು. ಶೈವಲಿನಿಯು ಮಾತನಾಡಲಿಲ್ಲ. ಮೊದಲಿನ ಹಾಗೆ ಬಿರುಗಣ್ಣು ಬಿಟ್ಟು ನೋಡುತ ಲಿದ್ದಳು. ಚಂದ್ರಶೇಖರ-ಭಯವಾಗುವುದೇನು ? ಶೈವಲಿನಿಯು ಕಲ್ಲುಗುಂಡಿನಹಾಗೆ ಚಂದಶೇಖರನು ವಿಸ್ಮಿತನಾಗಿ, ಮಾತನಾಡದೆ ಅವಳ ಮುಖವನ್ನೇ ನೋಡುತಲಿದ್ದ ನು, ಏನೂ ಗೊತ್ತಾಗಲಿಲ್ಲ-ಇದ್ದಕ್ಕಿದ್ದಹಾಗೆ ಶೈವಲಿನಿಯು ಚೀತ್ಕಾರಮಾಡಿ, ಪ್ರಭು ! ರ ಸು!ರಕ್ಷಿಸು ! ನೀನು ನನ್ನ ಸ್ವಾಮಿ? ನೀನು ಕೈಬಿಟ್ಟರೆ ನನಿಗೆ ಮತ್ತಾರು ದಿಕ್ಕು ! ಎಂದು ಕೂರಿದಳು.