೧೧ ಲಾ ನಾಲ್ಕನೇಯಭಾಗ. ಕೂಗಿಕೊಂಡು ರ್ಮೂತಳಾಗಿ ನೆಲದಮೇಲೆ ಬಿದ್ದಳು. ಚಂದ್ರಶೇಖರನು ಹತ್ತಿರದಲ್ಲಿದ್ದ ನದಿಯಿಂದ ನೀರನ್ನು ತಂದು ಶೈವಲಿನಿಯ ಮುಖಕ್ಕೆ ಚಿಮಿಕಿಸಿದನು. ಉತ್ತರೀಯದಿಂದ ಗಾಳಿಯನ್ನು ಬೀಸಿದನು. ಸ್ವಲ್ಪ ಹೊತ್ತಿನೊಳಗೆ ಅವಳಿಗೆ ಚೇತನವುಂಟಾಯಿತು: ಎದ್ದು ಕೂತಳು-ಮತ್ತೇನೂ ಹೇಳದೆ, ರಕ್ಷಿಸು ಎಂದಳು ಚಂದ್ರಶೇಖರ - ಏನು ನೋಡುತಲಿದ್ದೆ ? ಕಣ್ಣಿಗೆ ಏನು ಕಂಡಿತು ? ಸೈನಲಿನೀ-ಆ ನರಕ ! ಚಂದ್ರಶೇಖರನು, ಅವಳು ಜೀವದಿಂದಿರುವಾಗಲೇ ನರಕಯಾತನೆಯನ್ನನುಭೋಗಿ ಸುತ್ತಾಳೆಂದು ತಿಳಿದುಕೊಂಡನು. ಕೈವಲಿನಿಂರು ಸ್ವಲ್ಪಹೊತ್ತಿನಮೇಲೆ ನಾನು ಸಾಯಲಾರೆನು, ಸತ್ತರೆ ಕೂಡಲೇ ನರಕಕ್ಕೆ ಹೋಗುವೆನು, ನನ್ನನ್ನು ಹೇಗಾದರೂ ಮಾಡಿ ಬದುಕಿಸಬೇಕು, ಆದರೆ ಹನ್ನೆರಡುವರುಷ ನಾನೊಬ್ಬಳೇ ಜಾವಪ್ರಕಾರವಾಗಿ ಬದುಕಿರುವೆನು ? ನಾನು ಚೇತನ ವಿದ್ದಾಗಲೂ ಇಲ್ಲದಾಗಲೂ ನರಕವನ್ನೇ ಕಾಣುತಲಿದೆ ನೆಂದಳು. ಚಂದ್ರ ಶೇಖರ- ಚಿಂತೆಯಿಲ್ಲ - ಉಪವಾಸದಿಂದಲೂ ಮನಸ್ಸಿನ ಕ್ಷೇಶದಿಂದಲೂ ಇವೆ ಲ್ಯಾ ಉಂಟಾಗಿದ್ದವು, ವೈದ್ಯರು ಇದಕ್ಕೆ ವಾದುರೋಗವೆನ್ನು ವರು. ನೀನು ವೇದ ಗ್ರಾಮಕ್ಕೆ ಬಂದು ಊರಿನಹೊರಗೆ ಬಂದು ಕುಟೀರವನ್ನು ಮಾಡಿಕೊಂಡು ಅಲ್ಲಿರು, ಅಲ್ಲಿಗೆ ಸುಂದರಿಯು ಬಂದು ನಿನಗೆ ಉಪಚರಿಸುವಳು - ಚಿಕಿತ್ಸೆಯನ್ನು ಮಾಡುವಳು. ಇದ್ದಕ್ಕಿದ್ದಹಾಗೆ ಕೈವಲಿನಿಯು ಕಣ್ಣುಮುಚ್ಚಿದಳು-ಗುಹಾಪ್ರಾಂತದಲ್ಲಿ ಸುಂದ ರಿಯ ಹಾಗೆ ಕಲ್ಲಿನಲ್ಲಿ ಕೆತ್ತಿದ್ದವರ್ತಿಯು ಕೈಬರಳಿನಿಂದ ತೋರಿಸುತ್ತ ನಿಂತಿದ್ದಂತೆ ಕಂಡಳು. ಅವಳು ಅತ್ಯಂತ ದೀರ್ಘಾಕೃತಿಯುಳ್ಳಂತೆ ಕಂಡು ಕಮಕ್ರಮವಾಗಿ ತಾಳೇವರದುದ್ದ ೬ಳೆದಹಾಗೆ ಕಡ ಬಂದಿತು. ಅತಿ ಭಯಂಕರವಾಗಿ ಕಂಡುಬಂದಳು. ಗಹಾಸಾಂತದಲ್ಲಿ ಇದ್ದಕ್ಕಿದ್ದಹಾಗೆ ಆ ನರಕವು ಸೃಷ್ಟಿಯಾಯಿತು. ಆ ದುರ್ಗಂಧ, ಆ ಭಯಂಕರವಾದ ಅಗ್ನಿ ದು ಗರ್ಜನೆ, ಆ ಉತ್ತಾಪ, ಆ ಶೀತ, ಆ ಸರ್ಕಾರ, ಆ ಅಸಹ್ಯವಾದ ಕೀಟನಾತಿಯಿಂದ ಗಗನಾಂಧಕಾರ, ಇವುಗಳನ್ನೆಲ್ಲಾ ನೋಡಿದಳು. ಆ ನರ ಕದಲ್ಲಿ ಪಿಶಾಚಿಗಳು ಕಂಟಕಮುದುವಾದ ರಜಗಳನ್ನೂ ವೃಕದ ಬೆತ್ತವನ್ನೂ ಕೈ ಯಲ್ಲಿ ಹಿಡಿದುಕೊಂಡು ಬಂದು ರೈವಲಿನಿಯನ್ನು ಕಟ್ಟಿ ವೃಕಚಿತ್ತದಿಂದ ಅವಳನ್ನು ಹೊಡೆದು ತೆಗೆದುಕೊಂಡು ಹೋದವು. ಆಗ ಆ ಪ್ರಸ್ತರ ಮಯಿಯಾದ ತಾಳವೃ ಕೃಪರಿಮಿತೆಯಾದ ಸುಂದರಿಯು ಕೈಗೆತ್ತಿಕೊಂಡು, ಹೊಡಿ ! ಹೊಡಿ ! ನಾನು ಬೇಡ ವೆಂದು ಹೇಳಿದೆ : ಅವಳನ್ನು ಹಡಗಿನಿಂದ ಹಿಂದಿರುಗಿ ಕರೆದುಕೊಂಡು ಬರಲು ಹೋಗಿದ್ದೆ; ನನ್ನ ಮಾತನ್ನು ಕೇಳಲಿಲ್ಲ: ಹೊಡಿ ಹೊಡಿ! ಕೈಲಾದಷ್ಟೂ ಹೊಡೀರಿ! ನಾನವಳ ಪಾಪಕ್ಕೆ ಸಾಕ್ಷಿಯೆಂದು ಕೂಗುತ್ತಿದ್ದ ಹಾಗೆ ಕಂಡುಬಂದು, ಅದಕ್ಕೆ ಶೈವಲಿನಿಯು ಕೈಮುಗಿದು ಕೊಂಡು ಮುಖವನ್ನು ಮೇಲಕ್ಕೆತ್ತಿ ಕಣ್ಣೀರು ಸುರಿಸುತ್ತ ಸುಂದರಿಯನ್ನು ಕುರಿತು,
ಪುಟ:ಚಂದ್ರಶೇಖರ.djvu/೧೨೫
ಗೋಚರ