ಪುಟ:ಚಂದ್ರಶೇಖರ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾನರಿಯೆ, ನಿನ್ನ ಇಂಗ್ಲಿಷರ ತಂತ್ರ ಕೃತಿಗಳೆಲ್ಲಾ ನನಗೆ ಬೇಕಿಲ್ಲ, ನಿನ್ನನ್ನು ಬಿಡಿ ಗಡೆಮಾಡಿದರೂ ನೀನು ಇಲ್ಲಿಂದ ಬಿಟ್ಟು ಹೋಗುವಹಾಗೆ ಕಾಣಿಸುವುದಿಲ್ಲವೆಂದಳು. ಕುಲಸಂ ಕೋಪಿಸಿಕೊಳ್ಳದೆ ನಕ್ಕು, ನಾನು ಬಿಟ್ಟು ಹೋಗದಿದ್ದರೆ ನೀನು ನನ್ನನ್ನು ಬಿಟ್ಟು ಹೊರಟು ಹೋಗಲಾರೆಯಲ್ಲವೆ ? ಎಂದು ಕೇಳಿದಳು. ದಳನೀ-ಇಲ್ಲಿರುವುದೇ ನಿನಗೆ ಆಶೆಯೇನೊ ? ಕುಲನಂಬಿಯು ಗಂಭೀರ ಭಾವದಿಂದ ಹಣೆಯಬರಹವನ್ನು ಯಾರುತಾನೇ ಹೇಳಬ ಲ್ಲರು ? ಎಂದಳು. ದಳನಿಯು ಭೂಕುಂಚನವಾಡಿ ಬಹಳ ಶಕ್ತಿಯಿಂದ ಕೈಮುಮ್ಮಿಹಿಡಿದು ಎತ್ತಿ ದಳು. ಆದರೆ ಅದರ ಪೆಟ್ಟು ಬೀಳಲಿಲ್ಲ. ಅವಳು ಮುಮ್ಮಿಯನ್ನು ತನ್ನ ಕಿವಿಯ ಹತ್ತಿರ ತೆಗೆದುಕೊಂಡು ಹೋದಳು, ಕೃಶಗುಚ್ಛದಿಂದ ಸಂಸ್ಪರ್ಶವಾಗಿ ಭ್ರಮರ ದಿಂದೊಡಗೂಡಿ ಸುಸ್ಪುಟವಾದ ಕುಸುಮದ ಹಾಗೆ ಪ್ರಕಾಶಮಾನವಾಗಿದ್ದ ಆ ಕರ್ಣದ ಹತ್ತಿರ ಆ ಕಮಲ ಕೋರಕಸದೃಶವಾದ ಬದ್ಧನುಸ್ಮಿಯನ್ನು ಇಟ್ಟುಕೊಂಡು, ನಿಜ ವಾಗಿ ನಡೆದುದನ್ನೆಲ್ಲಾ ಹೇಳೆಂದಳು. ಕುಲಸಂ-ನಿಜವಾಗಿ ಹೇಳುವೆನು. ಅವನು, ನಿನಗೇನಾದರೂ ಅನನುಕೂಲವಾ ಗಿದೆಯೋ ಎಂದು ವಿಚಾರಿಸಿ ತಿಳಿದು ಕೊಳ್ಳುವುದಕ್ಕೋಸ್ಕರ ನನ್ನನ್ನು ಕರೆಯಿಸಿದ್ದನು. ಸಾಹೆಬನು ನಾವು ಅವರ ಹಡಗಿನಲ್ಲಿರುವವರೆಗೂ ನಮಗೆ ಯಾವ ಅನನುಕೂಲವೂ ಇಲ್ಲ ದೆ ಸುಖವಾಗಿರುವುದಕ್ಕೆ ಎಲ್ಲಾ ಎರ್ಪಾಡುಗಳನ್ನೂ ಮಾಡಬೇಕೆಂದು ಆಕೆಯುಳ್ಳವನಾಗಿ ದ್ದಾನೆ, ದೇವರು ನಮಗೆ ಬಿಡುಗಡೆಯಾಗದ ಹಾಗೆ ಮಾಡಲೆಂದು ನನ್ನ ಪ್ರಾರ್ಥನೆ. - ಪಳನಿಯು ಕಿವಿಯ ಹತ್ತಿರ ಹಿಡಿದಿದ್ದ ಮುಮ್ಮಿಯನ್ನು ಮತ್ತಷ್ಟು ಮೇಲಕ್ಕೆತ್ತಿ. ಜಗದೀಶ್ವರನು ನಿನಗೆ ಬೇಗನೆ ಮುರಣವನ್ನುಂಟುಮಾಡಲೆಂದು ನನ್ನ ಪ್ರಾರ್ಥನೆಯಿಂದಳು, ಕುಲಸಂ-ಇಂಗ್ಲೀಷರು ನಮ್ಮನ್ನು ಈಗ ಬಿಡುಗಡೆ ಮಾಡಿದರೆ ನಾವು ಪುನಃ ಹೋಗಿ ನವಾಬನ ಕೈಗೆ ಬೀಳುವೆವು, ನಬಾಬನು ನಿನ್ನನ್ನು ಕ್ಷಮಿಸಿದರೂ ಕ್ಷಮಿಸ ಬಹುದು, ಆದರೆ ನನ್ನನ್ನು ಕ್ಷಮಿಸಲಾರನೆಂದು ನನಗೆ ಖಂಡಿತವಾಗಿ ಗೊತ್ತು, ಈಗ ಇವರು ಬಿಟ್ಟು ಬಿಟ್ಟರೆ ಮತ್ತೆಲ್ಲಾದರೂ ಹೋಗಿ, ಆಶ್ರಯವನ್ನು ಹೊಂದುವೆನೇ ಹೊರ ತು ಪುನಃ ನಬಾಬನ ಮುಂದೆ ಹೋಗಿ ನಿಲ್ಲಲಾರೆನು. ಇದನ್ನು ಸ್ಥಿರಮಾಡಿಕೊಂಡಿದ್ದೇನೆ. ದಳನಿಯು ಕೋಪವನ್ನು ಬಿಟ್ಟು, ಗದ್ದದ ಕಂಠದಿಂದ, ನಾನು ಅನನ್ಯಗತಿಹಳು. ನಾನು ಸಾಯಬೇಕಾಗಿ ಬಂದರೆ, ಹೋಗಿ ಆತನ ಚರಣದಲ್ಲಿ ಬಿದ್ದು ಸಾಯುವೆನೆಂದಳು. - ಇತ್ತಲಾಗಿ ಅಮಿದುಟನು ತನ್ನ ಜನರಿಗೆ, ಉಡುಪನ್ನು ಧರಿಸಿ ಸಿದ್ಧರಾಗಿರಬೇಕೆಂದು ಹೇಳಿದನು. ಅದಕ್ಕೆ ರ್ಪಸನ್ನನು, ನಾವು ಈಗ ಅಷ್ಟು ಜನರನ್ನು ಳವರಾಗಿಲ್ಲ. ಹಡ ಗುಗಳನ್ನು ರೆಸಿರ್ಡೆಸಿ ಹತ್ತಿರಕ್ಕೆ ತೆಗೆದುಕೊಂಡುಹೋದರೆ ಒಳ್ಳೆಯದಲ್ಲವೆ ? ಎಂದನು.