ಪುಟ:ಚಂದ್ರಶೇಖರ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನುಭಾಗೆ. ೧೦೫ ಅಮಿಯಟ-ಎಂದು ಇಂಗ್ಲೀಷರು ದೇಶಜನರಿಗೆ ಹೆದರಿ ಓಡಿಹೋಗುವರೋ ಅಂದು ಭಾರತವರ್ಷದಲ್ಲಿ ಇಂಗ್ಲೀಷ ರಾಜ್ಯಸ್ತಾಪನ ಮಾಡುವ ಆಸೆಯು ವಿಲುಪ್ತವಾಗಿ ಹೋಗುವುದು, ಅಲ್ಲಿಂದ ಹಡಗನ್ನು ಬಿಟ್ಟಿ ಮುಂದೆ ಸಾಗಿದಕೂಡಲೆ ಮುಸಲ್ಮಾನರು, ನಾವು ಹೆದರಿ ಓಡಿಹೋದೆವೆಂದು ತಿಳಿಯುವರು. ಇದಿರಿಗೆ ನಿಂತು ಸತ್ತರೂ ಚಿಂತೆ ಯಿಲ್ಲ, ಭಯಪಟ್ಟು ಓಡಿಹೋಗುವುದು ಸರಿಯಲ್ಲ. ಆದರೆ ಫಾಸ್ಟರನು ಕಾಯಿಲೆ ಯಾಗಿದ್ದಾನೆ. ಶಸ್ತ್ರ ಹಸ್ತ್ರನಾಗಿ ಸಾಯಲು ಸಮರ್ಥನಾಗಿಲ್ಲ. ಅದು ಕಾರಣ ಅವನು ರೆಸಿರ್ಡೆನಿಗೆ ಹೋಗಲಿ, ಹಡಗಿನಲ್ಲಿರುವ ಬೇಗಂ ಮತ್ತು ಮತ್ತೊಬ್ಬ ಹೆಂಗಸು ಅವರಿ ಬ್ಬರನ್ನೂ ಇಳಿಸಿಬಿಡಿ, ಅವರೊಂದಿಗೆ ಇಬ್ಬರು ಸಿಪಾಯಿಗಳನ್ನು ಕೊಟ್ಟು ಬೇರೆ ಕಡೆಗೆ ಕಳುಹಿಸಿಬಿಡಬೇಕು, ಅವರು ವಿವಾದದ ಸ್ಥಳದಲ್ಲಿರಬೇಕಾದ ಅವಶ್ಯಕವಿಲ್ಲ. - ಸಿಪಾಯಿಗಳೆಲ್ಲರೂ ಸಿದ್ಧರಾಗಿ ಅಮಿದುಳಿನ ಅಪ್ಪಣೆಯಪಕಾರ ಎಲ್ಲರೂ ಹಡಗಿನಲ್ಲಿ ಅವಿತುಕೊಂಡು ಕುಳಿತುಕೊಂಡರು. ಹಡಗಿನ ಸುತ್ತಲೂ ಸಿಪಾಯಿಗಳು ಗೋಡೆಗಳ ಲ್ಲಿದ್ದ ರಂಧ್ರಗಳಲ್ಲಿ ಬಂದೂಕಗಳನ್ನು ಇಟ್ಟುಕೊಂಡು ಸಿದ್ಧವಾಗಿದ್ದರು. ಅಮಿದುಳನ ಅಪ್ಪಣೆದುಪಕಾರ ದಳ ನೀ ಮತ್ತು ಕುಲಸಂ ಇವರಿಬ್ಬರನ್ನೂ ಫಾಸ್ಟರನ ಹಡಗಿಗೆ ಹತ್ತಿಸಿದರು, ಇಬ್ಬರು ಸಿಪಾಯಿಗಳ ಸಮೇತ ಫಾಸ್ಟರನ ಹಡಗನ್ನು ಬಿಚ್ಚಿ ಕಳುಹಿಸಿ ಬಿಟ್ಟರು. ಇದನ್ನೆಲ್ಲಾ ನೋಡಿಕೊಂಡಿದ್ದ ಮಹಮ್ಮದ ತಕಿಯ ಪಹರೆಯವರು ಅವನಿಗೆ ಸಮಾಚಾರವನ್ನು ಹೇಳಲು ಹೊರಟುಹೋದರು. ಈ ಸಮಾಚಾರವೆಲ್ಲಾ ತಿಳಿದು ಇಂಗ್ಲೀಷರು ಬರುವುದಕ್ಕೆ ಹೊತ್ತು ಮಾರಿ ಹೋದು ದನ್ನು ಕಂಡು ಮಹಮ್ಮದ ತಕಿಯು ಇಂಗ್ಲೀಷರನ್ನು ಸಂಗಡ ಕರೆದುಕೊಂಡು ಬರುವು ದಕ್ಕೋಸ್ಕರ ಒಬ್ಬ ದೂತನನ್ನು ಕಳುಹಿಸಿದನು, ಆವಿಯಟನು ಏನೋ ಕಾರಣಾಂತ ರದಿಂದ ಹಡಗನ್ನು ಬಿಟ್ಟು ಬರಲು ಇಷ್ಯವಿಲ್ಲವೆಂದು ಉತ್ತರವನ್ನು ಹೇಳಿ ಕಳುಹಿಸಿ ದನು. ದೂತನು ಹಡಗನ್ನು ಇಳಿದು ಸ್ವಲ್ಪ ದೂರ ಹೋಗಿ ಒಂದು ಹುಸಿಮುದ್ದು ಹಾಕಿದ್ದ ತೋಟೆಯನ್ನು ಹಾಕಿ ಬಂದೂಕನ್ನು ಹಾರಿಸಿದನು. ಆ ಶಬ್ದದೊಂದಿಗೆ ತೀರದಿಂದ ಹತ್ತು ಹನ್ನೆರಡು ಬಂದೂಕುಗಳ ಶಬ್ದ ವಾದವು. ಅನಿಲುಟನು ನೋಡುತ್ತಿದ್ದ ಹಾಗೆ ಹಡಗಿನಮೇಲೆ ಗುಂಡುಗಳ ವಳೆ ಕರೆಯಿತು, ಹಡಗಿನೊಳಕ್ಕೂ ಗುಂಡುಗಳು ಬಂದು ಬೀಳುತ್ತಿದ್ದವು. - ಆಗ ಇಂಗ್ಲೀಷರ ಸಿಪಾಯಿಗಳ ಪ್ರತಿಯಾಗಿ ಬಂದೂಕುಗಳನ್ನು ಹಾರಿಸಿದರು. ಉಭಯಪಕ್ಷದವರೂ ಪರಸ್ಪರ ಬಂದೂಕಗಳನ್ನು ಹಾರಿಸುತ್ತಿದ್ದ ರಾಗಿ ಶಬ್ದದ ಗದ್ದಲವು ಹೆಚ್ಚಾಯಿತು, ಆದರೆ ಉಭಯಪಕ್ಷದವರೂ ಅವಿತುಕೊಂಡು ಬಂದೂಕು ಹಾರಿಸುತ್ತಿ ದ್ದರು, ಮುಸಲ್ಮಾನ ಸಿಪಾಯಿಗಳು ತೀರದಲ್ಲಿದ್ದ ಮನೆಗಳ ಮರೆಯಲ್ಲಿ ಅವಿತುಕೊಂಡು ಹೊಡೆಯುತಲಿದ್ದರು. ಇಂಗ್ಲಿಷರ ಸಿಪಾಯಿಗಳು ಹಡಗಿನೊಳಗೆ ಅವಿತುಕೊಂಡಿದ್ದರು.