ಪುಟ:ಚಂದ್ರಶೇಖರ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಚಂದ್ರಶೇಖರ. ಮಹತಾಪಚಂದ-ಒಳ್ಳೆಯದು, ನಾನು ರಾಜಿ. ನನ್ನ ಅಸಲಿಗೆ ಬಡ್ಡಿ ಬಂದರೆ ಸಾಕು, ಆದರೆ ಯಾವ ಹೊಣೆಗೂ ನಾನು ಒಳಗಾಗಕೂಡದು. ಈ ಪ್ರಕಾರ ಕಚೇರಿಯು ನಡೆಯುತಲಿತ್ತು, ಒಂದು ಕಡೆಯಲ್ಲಿ ಗುರಗಣರ್ಖಾ ಮತ್ತು ಜಗತೆ ಕೇಟರಿಬ್ಬರೂ ಬಂಡವಾಳ, ಆದಾಯ, ನಪ್ಪ ಮುಂತಾದ ಸಮಾಚಾರ ವನ್ನು ಕುರಿತು, ಮಾತನಾಡುತ್ತ ಕರ್ತವ್ಯವನ್ನು ಸ್ಥಿರಮಾಡಿಕೊಂಡರು. ಗುರಗಣರ್ಖಾ .. ಒ ಹೊಸ ವರ್ತಕನು ಬಂದು ಒಂದು ಕೋಣೆಯನ್ನು ಇಟ್ಟಿ ದ್ದಾನೆಂದು ಕೇಳಿದೆ. ಮಹತಾಪಚಂದ - ದೇಶ್ರವರ್ತಕನೋ ಅಥವಾ ವಿಲಾಯಿತಿಯ ವರ್ತಕನೋ ? ಗುರಗಣರ್ಖಾ-ದೇಶ್ಯವರ್ತಕ. ಮಹತಾಪಚಂದ-ಎಲ್ಲಿ ? ಗುರಗಣರ್ಖಾ - ವಾಂಗೀರನಿಂದ ವರದಾಬಾದವರೆಗೆ ಎಲ್ಲಾ ಸ್ಥಳಗಳಲ್ಲಿಯ ಇಟ್ಟಿದ್ದಾನೆ. ಎಲ್ಲೆಲ್ಲಿ ಪರ್ವತವೋ, ಎಲ್ಲೆಲ್ಲಿ ಅರಣ್ಯವೋ, ಎಲ್ಲೆಲ್ಲಿ ಮೈದಾನೋ, ಅಂತಹ ಸ್ಥಳಗಳಲ್ಲಿ ಅವನು ತನ್ನ ಕೋಣಗಳನ್ನು ಇಟ್ಟಿದ್ದಾನೆ. ಮಹತಾಪಚಂದ - ಅವನು ಐಶ್ರವಂತನೋ ? ಗುರಗಣರ್ಖಾ-ಇನ್ನೂ ಇಷ್ಟು ಭಾರಿ ಹಣಸ್ತನಲ್ಲ. ಆದರೆ ಮುಂದೆ ಏನಾಗು ಹನೋ ಹೇಳುವುದಕ್ಕಾಗುವುದಿಲ್ಲ. ಮಹತಾಸಚ ದ_ಅವನ ಲೇವಾದೇವಿಯ ಆಡಳಿತಗಳೆಲ್ಲಾ ಯಾರಸಂಗಡ ? ಗುರಗಣರ್ಖಾ-ಮಾಂಗೀರನಲ್ಲಿರುವ ದೊಡ್ಡ ಕೋಠಿಯವರ ಸಂಗಡ. ಮಹತಾಪಚಂದ - ಹಿಂದುವೋ ಅಥವಾ ಮುಸಲ್ಮಾನನೋ ? ಗುರಗಣರ್ಖಾ,_ಹಿಂದೂ. ಮಹತಾಪಚಂದ - ಹೆಸರೇನು ? ಗುರಗಣರ್ಖಾ-ಪ್ರತಾಪರಾಯು. ಮಹತಾಪಚಂದ ಅವನ ಊರು ಮನೆಯೆಲ್ಲಿ ? ಗುರಗಣರ್ಖಾ ಮುರದಾಬಾದಿನ ಹತ್ತಿರ. ಮಹತಾಪಚಂದ - ಹೆಸರು ಕೇ ದೈನೆ. ಅವನು ಅತಿ ಸಾಮಾನ್ಯನಾದ ಮನುಷ್ಯ ಗುರಗಣರ್ಖಾ- ಅತಿ ಭಯಂಕರವಾದ ಮನುಷ್ಯನೂ ಹೌದು. ಮಹತಾಪಚಂದ - ಅವನು ಹಠಾತ್ತಾಗಿ ಈ ಪ್ರಕಾರ ಮಾಡಿದನೇತಕ್ಕೆ ? ಗುರಗಣರ್ಖಾ-ಕಲಿಕತ್ತೆಯು ದೊಡ್ಡ ಕೋಠಿದಮೇಲಿನ ಕೋಪಕ್ಕೆ. ಮಹತಾಪಚಂದ-ಅವನನ್ನು ಕೈಗೆ ಹಾಕಿಕೊಳ್ಳಬಹುದು, ಆವನು ದಾರಕ್ಕೆ ಯಲ್ಲಿದ್ದಾನೆ ? C೧,