ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಭಾಗ ೧ಳಿತಿ ಶೇಟರು ಸಹಾಯವನ್ನು ಮಾಡದಿದ್ದರೆ ಹಣವೊದಗುವುದಿಲ್ಲ. ಅದು ಕಾರಣ ಶೇಟರ ಸಂಗಡ ಆಲೋಚನೆ ಮಾಡುವುದು ಗುರಗಣಖಾನನಿಗೆ ಅವಶ್ಯಕವಾಗಿತ್ತು. - ಇತ್ತಲಾಗಿ ಕಾಸೀವು ಅಲ್ಲಿಖಾನನೂ, ಈ ಕುಬೇರರಿಬ್ಬರೂ ಯಾವ ಪಕ್ಷದವರಿಗೆ ಅನುಗ್ರಹ ಮಾಡುವರೋ ಆ ಪಕ್ಷಕ್ಕೆ ಜಯವಾಗುವುದೆಂದೂ ಜಗತೆ ಶೇಟರಿಬ್ಬರೂ ಆಂತರದಲ್ಲಿ ತನಗೆ ಹಿತಮಾಡುವವರಲ್ಲವೆಂದೂ ತಿಳದಿದ್ದನು. ಏತಕ್ಕೆಂದರೆ, ಅವನು ಅವರೊಂದಿಗೆ ಸದ್ಯವಹಾರ ಮಾಡುತ್ತಿರಲಿಲ್ಲ. ಅವರಿಬ್ಬರಮೇಲೂ ಅನುಮಾನವುಳ್ಳವ ನಾಗಿ ಅವರಿಬ್ಬರನ್ನೂ ಮಾಂಗೀರನಲ್ಲಿ ಬಂದಿಗಳ ಹಾಗೆ ಇಟ್ಟಿದ್ದನು. ಅವರಿಬ್ಬರೂ ಸಮ ಮುಸಿಕ್ಕಿದರೆ ವಿಪಕ್ಷದವರೊಂದಿಗೆ ಸೇರಿಕೊಳ್ಳುವುದೆಂದು ಖಂಡಿತವಾಗಿ ತಿಳಿದವನಾಗಿ, ಅವ ರನ್ನು ದುರ್ಗದಲ್ಲಿ ಹಿಡಿಸಿ ಇಡಲು ಪ್ರಯತ್ನ ಮಾಡುತಲಿದ್ದನು, ಶೇಟರಗಳಿಗೆ ಇದು ಗೊತ್ತು. ಇದುವರೆಗೂ ಅವರು ಭಯದಿಂದ ವಿಾರಕಾಸೀಮನಿಗೆ ಯಾವ ಪ್ರತಿಕೂಲ ವಾದ ಆಚರಣೆಯನ್ನೂ ನಡೆಸಿರಲಿಲ್ಲ. ಆದರೆ ಈಗ ಅನ್ಯಥಾ ರಕ್ಷಣೆಗೆ ಉಪಾಯ ತೋರದೆ ಗುರಗಖಾನನ ಸಂಗಡ ಸೇರಿಕೊಂಡರು. ಅವರೆಲ್ಲರೂ ಮಾರಕಾಸೀಮನನ್ನು ನಿಸಾತ ಮಾಡುವುದೇ ಉದ್ದೇಶ ವುಳ್ಳವರಾಗಿದ್ದರು. - ಆದರೆ ಕಾರಣವಿಲ್ಲದೆ ಗುರಗಣಖಾನನು ಜಗ ಶೇಟರನ್ನು ಹೋಗಿ ನೋಡಿದರೆ ನಬಾ ಬನಿಗೆ ಸಂದೇಹವುಂಟಾಗುವುದೆಂದು, ಯೋಚಿಸಿದ್ದನಾಗಿ, ಶೇಟರಿಬ್ಬರೂ ಈ ಉತ್ಸವ ವನ್ನು ಏರ್ಪಡುಮಾಡಿ ಗುರಗಣಖಾನನನ್ನೂ, ಇತರ ರಾಜಮಂತ್ರಿಗಳನ್ನೂ ಉತ್ಸವಕ್ಕೆ ಕರೆದಿದ್ದರು. ಗುರಗಣಖಾನನು ನಬಾಬನ ಅಪ್ಪಣೆಯನ್ನು ಪಡೆಯದೆ ಉತ್ಸವಕ್ಕೆ ಬಂದಿದ್ದನು. ಅವನು ಇತರ ಮಂತ್ರಿಗಳೊಂದಿಗೆ ಸೇರದೆ ಪ್ರತ್ಯೇಕವಾಗಿ ಕುಳಿತಿದ್ದನು. ಶೇಟರಿಬ್ಬರೂ ಇತರ ಮಂತ್ರಿಗಳ ಹತ್ತಿರ ಹೋಗಿ ಹೇಗೆ ಸ್ವಲ್ಪ ಹೊತ್ತು ಕೂತು ಉಪಚಾರದ ಮಾತ ನಾಡುತಲಿದ್ದರೋ ಹಾಗೆಯೇ ಗುರಗಾಖಾನನ ಹತ್ತಿರ ಬಂದು ಕೂತು ಮಾತನಾಡು ವರು, ಅವನ ಬಳಿ ಹೆಚ್ಚು ಹೊತ್ತು ಕೊಡುತ್ತಿರಲಿಲ್ಲ. ಆದರೆ ಇತರರಿಗೆ ಕೇಳಿಸದ ಹಾಗೆ ಮಾತುಕಥೆಗಳನ್ನಾಡುವರು, ಅವರ ಸಂಭಾಷಣೆಯು ಏನೆಂದರೆ :- ಗುರಗಣರ್ಖಾ-ನಿಮ್ಮ ಸಂಗಡ ಸೇರಿ ಒಂದು ಕೋಠಿಯ ವ್ಯಾಪಾರ ಮಾಡಬೇಕೆಂ ದಿದ್ದೇನೆ, ನೀವೂ ಪಾಲ್ದಾರರಾಗಲು ಇಷ್ಟ್ಯವುಂಟೆ ? ಮಹತಾಪಚಂದ ಏನು ಉದ್ದೇಶ ? ಗುರಗಣರ್ಖಾ-ಮಾಂಗೀರನಲ್ಲಿರುವ ದೊಡ್ಡ ಕೋಠಿಯನ್ನು ಬಂದುಮಾಡುವ ಉದ್ದೇಶದಿಂದ. ಮಹತಾಸಕಂದ- ಸಾಲ್ದಾರನಾಗಿರಲು ಒಪ್ಪುವನು. ಇಂತಹದುದೇನಾದರೂ ಒಂದು ಹೊಸಕಾರಬಾರು ಮಾಡದಿದ್ದರೆ ನನಗೆ ಮತ್ತಾವ ಉಪಾಯವ ತೋರುವುದಿಲ್ಲ. ಗುರಗಣರ್ಖಾ-ಹಾಗೆ ನೀವು ಒಪ್ಪುವುದಾದರೆ ಹಣಕಾಸಿನ ಆಡಳತಗಳನ್ನೆಲ್ಲಾ ನೀವೇ ನೋಡಿಕೊಳ್ಳಬೇಕು. ನಾನು ಶಾರೀರಕವಾದ ಕಪ್ಪವನ್ನು ಮಾಡುವೆನು.