ಪುಟ:ಚಂದ್ರಶೇಖರ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ಂ ಚಂದ್ರಶೇಖರ, ದಲನಿಗೆ ಭಯವು ದೂರವಾಯಿತು, ಹಾಗಾಗುವುದಕ್ಕೆ ಬಂದು ಕಾರಣವುಂಟಾ ಯಿತು, ಏನೆಂದರೆ, ಅವಳು ಅತ್ತಳು, ಪ್ರಶ್ನೆ ಕರ್ತನು ಪ ಶ್ನೆ ಯನ್ನು ಪುನಃ ಕೇಳಿ ದನು. ದನಿಯು, ಹೋಗುವುದೆಲ್ಲಿಗೆ ? ನನಗೆ ಹೋಗುವುದಕ್ಕೆ ಸ್ಥಳವಿಲ್ಲ, ಹೋಗು ವುದಕ್ಕೆ ಬಂದು ಸ್ಥಳಮಾತ್ರವುಂಟು. ಆದರೆ ಅದು ಬಹಳ ದೂರ, ಯಾರುತಾನೇ ನನ್ನನ್ನು ಸಂಗಡ ಅಲ್ಲಿಗೆ ಕರೆದುಕೊಂಡು ಹೋಗುವರೆಂದು ಹೇಳಿದಳು. ಆಗಂತುಕ --ನೀನು ನಬಾಬನ ಬಳಿಗೆ ಹೋಗುವ ಆಶೆಯನ್ನು ಬಿಟ್ಟುಬಿಡು. ದಲನಿಯು ಉತ್ಕಂಠತೆಯಾಗಿ ಆಶ್ಚರದಿಂದ, ಏತಕ್ಕೆ ? ಎಂದಳು. ಆಗಂತುಕ-ಅಮಂಗಳವುಂಟಾಗುವುದು. ದಲನಿಯು ನಡುಗಿ, ಆಗಲಿ. ನನಗೆ ಅದು ಬಿಟ್ಟು ಬೇರೆ ಸ್ಥಾನವಿಲ್ಲ. ಅನೃತ್ಯ ಮಂಗಳವುಂಟಾಗುವುದಕ್ಕಿಂತಲೂ ಸ್ವಾಮಿಯ ಬಳಿಯಲ್ಲಿ ಅಮಂಗಳವುಂಟಾಗುವುದು ಒಳ್ಳೆಯದೆಂದಳು. ಆಗಂತುಕ-ಹಾಗಾದರೆ ಏನು ? ನಾನು ನಿನ್ನನ್ನು ಸಂಗಡ ಕರೆದುಕೊಂಡು ಹೋಗಿ ವರದಾಬಾದಿನಲ್ಲಿ ಮಹವನ ತಕಿಯ ಬಳಿ ಬಿಟ್ಟು ಹೋಗುವೆನು. ಅವನು ನಿನ್ನನ್ನು ಮಾಂಗೀರಿಗೆ ಕಳುಹಿಸುವನು. ಆದರೆ ನನ್ನ ಮಾತನ್ನು ಲಾಲಿಸು. ಈಗ ಯುದ್ಧವು ಆರಂಭವಾಗಿದೆ. ನವಾಬನು ಸ ಇರಜನರನ್ನು ರುಹಿದಾಸಗಡಕ್ಕೆ ಕಳುಹಿ ಸುವ ಪ್ರಯತ್ನದಲ್ಲಿದ್ದಾನೆ. ನೀನು ಅಲ್ಲಿಗೆ ಹೋಗಲಾರೆ. ಹೋಗಲೂಬೇಡ. ದಲನೀ- ನನ್ನ ದೃಷ್ಟದಲ್ಲಿದ್ದುದು ಆಗಿಹೋಗಲಿ, ನಾನು ಹೋಗುವೆನು. ಆಗಂತುಕ -ನಿನ್ನ ಅದೃಷ್ಟದಲ್ಲಿ ಮಾಂಗೀರನ್ನು ನೋಡುವಹಾಗಿಲ್ಲ. ದಲನಿಯು ಚಿಂತೆಯುಳ್ಳವಳಾಗಿ, ಮುಂದಾಗುವುದು ಯಾರಿಗೆ ಗೊತ್ತು? ನಡೆಯಿರಿ, ತಮ್ಮ ಸಂಗಡ ಮುರಮ್ಮೆದಾಬಾದಿಗೆ ಬರುವೆನು. ಈ ಶರೀರದಲ್ಲಿ ಪ್ರಾಣವಿರುವವರೆಗೂ ನಬಾಬರನ್ನು ನೋಡುವ ಆಸೆಯನ್ನು ಬಿಡಲಾರೆನೆಂದಳು. ಆಗಂತುಕ-ಅದನ್ನು ಬಲ್ಲೆನು, ನಡೆ. ಇಬ್ಬರೂ ಅಂಧಕಾರವಾದ ರಾತ್ರಿ ಮುರದಾಬಾದಿಗೆ ಹೊರಟರು. ದಲನೀಪತಂ ಗವು ವಸ್ನಿ ಮುಖವಿವಿಕ್ತವಾಯಿತು.