ಆರನೆಯ ಭಾಗ. ೧೭ • ಅಂಗಕಸುವುಗಳೆಲ್ಲಾ ಅರಳುತ್ತಲಿವೆ. ವಸಂತವೂ ವರ್ಷವೂ ಏಕತ) ಸೇರಿವೆ. ಯಾರನ್ನು ನೋಡುತ್ತೇನೋ ಅವಳು ದುಃಖದಿಂದ ಉಬ್ಬತ್ತಾಳೆ, ಆದರೆ ನನಗೆ ನೋಡುವುದಕ್ಕೆ ಎಷ್ಟೋ ಸುಖಕರವಾಗಿದೆ. ಜಗದೀಶ್ಚರ ! ದುಃಖವನ್ನು ಇಷ್ಟು ಸುಂದರವಾಗಿ ಮಾಡಿದೇತಕ್ಕೆ? ಈ ಕಾತರೆಯಾಗಿರುವ ಬಾಲೆಯು ವಾತ್ಯಾತಾಡಿತವಾದ ಪ್ರಸ್ತುತವಾದ ಕುಸುವ, ತರಂಗೊತ್ರೀಡಿತವಾದ ಪ್ರಮೋದ ನೌಕಾ, ಇವಳನ್ನು ತೆಗೆದುಕೊಂಡು ಹೋಗಿ ಎಲ್ಲಿಟ್ಟುಕೊಳ್ಳಲಿ ? ಎಂದು ತಕಿಯು ಹೇಳಿಕೊಂಡನು. ದುರ್ಬು ದ್ವಿದು ಎಂದು ತಕಿಯು ಕಿವಿಯಲ್ಲಿ ಹೃದಯದಲ್ಲಿಟ್ಟುಕೊ ಎಂದು ಹೇಳಿತು. ತಕಿದು, ಕೇಳು ಸುಂದರಿ ! ನನ್ನನ್ನು ಹೊಂದು. ಹಾಗಾದರೆ ವಿಷವನ್ನು ತಿನ್ನ ಬೇಕಾಗುವುದಿಲ್ಲವೆಂದನು. ದಳನಿಯು ಕೇ?~-( ಬರೆಯುವುದಕ್ಕೆ ಲಟ್ಟೆಯಲಾಗುತ್ತದೆ) ಮಹಮದತಕಿಯನ್ನು ಕಾಲಿನಿಂದ ಒದ್ದಳು. ಮಹಮದತಕಿಯು ವಿಷವನ್ನು ಕೊಡಲಾರದೆಹೋದನು. ಅವನು ದಳನಿಯನ್ನು ಅರ್ಧ ದೃಷ್ಟಿಯಿಂದ ನೋಡುತ್ತ ಮೆಲ್ಲಮೆಲ್ಲಗೆ ಹಿಂದಿರುಗಿ ಹೊರಟುಹೋದನು. ಅನಂತರ ದಳನಿಯು ನೆಲದಮೇಲೆ ಬಿದ್ದು ಅಳುವುದಕ್ಕಾರಂಭಿಸಿ, ಓ, ರಾಜರಾಜೇ ಶ್ಚರ ! ಪಾಹನಪ್ರಹಾ ! ಬಾದಷಹರಿಗೆ ಬಾದಷಹನೆ ! ಈ ಬಡ ದಾಸಿಯಮೇಲೆ ಎಂತಹ ಅಪ್ಪಣೆಯನ್ನು ಮಾಡಿದೆ ? ವಿಷಪಾನ ಮಾಡಬೇಕೆ ? ನೀನು ಅಪ್ಪಣೆಯನ್ನು ಕೊಟ್ಟರೆ ಏತಕ್ಕೆ ಪಾನಮಾಡಬಾರದು ? ನಿನ್ನ ಆದರವೇ ನನಗೆ ಅಮೃತ ! ನಿನ್ನ ಕೊಧವೇ ನನಗೆ ವಿಪ ! ನೀನು ಕೋಪವನ್ನು ಮಾಡಿರುವಾಗ ನಾನು ಆಗಲೇ ಏಪ್ರದಾನ ಮಾಡಿದಹಾಗಾ ಯಿತು. ಇದಕ್ಕಿಂತಲೂ ವಿಸ್ಮಶಾನವು ಕತರವಾದುದೆ ? ಹೆ ರಾಜಾಧಿರಾಜ... ಜಗ ತಿಗೇ ಬೆಳಕು ಸ್ವರೂಪನೆ ! ಅನಾಥರಿಗೆ ಭರವಸೆಯಾದವನೆ ! ಸೃಢೀಪತಿಯ ! ಈಶ್ವರನ ಪ್ರತಿನಿಧಿಯೆ ! ದಯಾಸಾಗರ : ಎಲ್ಲಿದ್ದೀಯ ? ನಾನು ನಿನ್ನ ಅಪ್ಪಣೆಯು ಪ್ರಕಾರ ನಗುತನಗುತ ವಿಷನಾನ ಮಾಡುವೆನು. ಆದರೆ ನೀನು ನಿಂತು ನೋಡುವುದ ಕಿಲ್ಲ. ಇದೇ ನನಗೆ ದುಃಖವೆಂದು ಹೇಳಿಕೊಂಡಳು.
- ಕರೀವಳೆಂಬ ಒಬ್ಬ ಪರಿಚಾರಿಕೆಯು ದಳನಿಯು ಶುರೂಷೆಯನ್ನು ಮಾಡುವುದಕ್ಕೆ ನಿಯಮಿಸಲ್ಪಟ್ಟಿದ್ದಳು.” ದಳನಿಯು ಅವಳನ್ನು ಕರೆದು ತನ್ನಲ್ಲಿ ಉಳದಿದ್ದ ಆಭರಣಗೆ ಳನ್ನು ಅವಳ ಕೈಯಲ್ಲಿ ಕೊಟ್ಟಳು. ಕೊಟ್ಟು, ಯಾರಿಗೂ ತಿಳಿಯದಹಾಗೆ ಹಕೀಮನ ಹತ್ತಿರ ಹೋಗಿ ಪುನಃ ಎಚ್ಚರವಾಗದಹಾಗೆ ನಿದೆ) ಬರುವ ಔಷಧವನ್ನು ತೆಗೆದುಕೊಂಡು ಬಾ ; ಅದಕ್ಕೋಸ್ಕರ ಈ ಆಭರಣಗಳನ್ನು ಮಾರಿ ಅವನಿಗೆ ಕ್ರಮವನ್ನು ಕೊಟ್ಟು ಉಳಿದುದನ್ನು ನೀನು ಇಟ್ಟುಕೊ, ಎಂದಳು.
' ಕರೀವಳು ದಳನಿಯ ಆಶ್ರುಪೂರ್ಣವಾದ ಕಣ್ಣುಗಳನ್ನು ನೋಡಿ ತಿಳಿದುಕೊಂಡು, ಮೊದಲು ಅದಕ್ಕೆ ಸಮ್ಮತಪಡಲಿಲ್ಲ. ದಳನಿಯು ಪುನಃ ಪುನಃ ಉತ್ತೇಜನ ಮಾಡಿದಳು. ಕಡೆಗೆ ಮುರ್ಖಿಯಾದ ಆಶಾಪರವಣೆಯಾದ ಹೆಂಗಸು, ಹೆಚ್ಚು ಅರ್ಥಲೋಭದಿಂದ ಒಪ್ಪಿ ಕೊಂಡಳು.