ಮೂರನೆಯ ಪರಿಚ್ಛೇದ. ಸಮಾಟ ಮತ್ತು ವರಾಟ. 13 ಮಿಾ ರಕಾಸಿವನ ಸೈನ್ಯವು ಕಾಟಾದ ರಣಕ್ಷೇತ್ರದಲ್ಲಿ ಪರಾಭೂತವಾಗಿ ಹಿಂದಿ ರುಗಿ ಬಂದಿತ್ತು. ಒಡೆದುಹೋದ ಕಪಾಲವು ಪುನಃ ಗಿರಿಜಾಕ್ಷೇತ್ರ ದಲ್ಲಿ ಒಡೆಯಿತು, ಪುನಃ ಯವನ ಸೇನೆಯು, ಇಂಗ್ಲೀಷರ ಬಾಹು ಬಲದಿಂದ, ಬಿರುಗಾಳಿ'ಯ ಮುಂದುಗಡೆ ಧರಾಶಿಯಹಾಗೆ, ತಾಡಿತ ವಾಗಿ ತಿನ್ನ ಭಿನ್ನ ವಾಗಿ ಹೋಯಿತು, ಧ್ವಂಸವತಿಮ್ಮರಾದ ಸೈನ್ಯ ದವರು ಬಂದು ಉದಯನಾಲೆಯಲ್ಲಿ ಆಶ್ರಯವನ್ನು ಹೊಂದಿದರು. ಅಲ್ಲಿ ನಾಲ್ಕು ಕಡೆ ಗಳಲ್ಲಿಯೂ ಕಂದಕವನ್ನು ಮಾಡಿಕೊಂಡು ಇಂಗ್ಲಿಷರ ಸೈನ್ಯದ ಗತಿ ರೋಧ ಮಾಡು ತಲಿದ್ದರು. ಮಾರಕಾಸಿವನು ತಾನೇ ಸ್ವಂತವಾಗಿ ಅಲ್ಲಿಗೆ ಬಂದನು. ಅವನು ಬಂದಮೇಲೆ ಸೈದಅವಿಾರಹಸನೆಂಬುವನು ಬಂದು, ಒಬ್ಬ ಬಾಂದಿಯು ಬಂದು ದರ್ಶನಾರ್ಥವಾಗಿ ಕಾದಿ ದ್ದಾಳೆ. ಅವಳೇನೋ ಅರಿಕೆ ಮಾಡಿಕೊಳ್ಳುವುದಿದೆ. ಸನ್ನಿಧಾನದಲ್ಲಿ ಹೊರತು ಅದನ್ನು ಮತ್ತಾರಿಗೂ ಹೇಳುವುದಿಲ್ಲವೆಂದು ತಿಳಿಸಿದನು. ಮೂರಕಾರಿವನು, ಅವಳು ಯಾರು ? ಎಂದು ಕೇಳಿದನು. ಅಮೀರಹಸನನು, ಅವಳೊಬ್ಬ ಹೆಂಗಸು, ಕಲಿಕತ್ತೆಯಿಂದ ಬಂದಿದ್ದಾಳೆ, ವಾರ್ರ ಹೇಸ್ಟಿಂಗ್ಸ್ ಸಾಹೆಬರು ಕಾಗದವನ್ನು ಬರೆದು ಕೊಟ್ಟು ಕಳುಹಿಸಿದ್ದಾರೆ. ಅವಳು ವಾಸ್ತವವಾಗಿ ಬಾಂದಿಯಲ್ಲ. ಯುದ್ಧಕ್ಕೆ ಮೊದಲು ಬರೆದ ಕಾಗದವೆಂದು ದಾಸನಾದ ನಾನು ಅದನ್ನು ತೆಗೆದುಕೊಂಡೆನು. ಅಪರಾಧವನ್ನು ಮನ್ನಿಸಬೇಕು, ಇದೇ ಆ ಕಾಗದ ವೆಂದು ಹೇ? ಅಖಾರಹಸನನು ನಬಾಬನಿಗೆ ಕಾಗದವನೋದಿ ತಿಳಿಸಿದನು, ಕಾಗದದ ಮರ್ಮವೇನೆಂದರೆ :- ಈ ಹೆಂಗಸು ಬಾರೋ ನಾನದನ್ನರಿಯೆನು, ಅವಳು ಬಹಳ ಕಾತರೆಯಾಗಿ ನನ್ನ ಬಳಿಗೆ ಬಂದು, ಕಲಿಕತ್ತಾದಲ್ಲಿ ತನಿಗೆ ಯಾರೂ ದಿಕ್ಕಿಲ್ಲವೆಂದೂ ನಾನು ದುಮಾಡಿ ಅವ ಳನ್ನು ನಬಾಬರ ಬಳಿಗೆ ಕಳುಹಿಸಿದರೆ ಬದುಕಿಕೊಳ್ಳುವೆನೆಂದೂ ಬಹಳ ವಿನಯದಿಂದ ಹೇಳಿಕೊಂಡುದುದರಿಂದ ತಮ್ಮ ಬಳಿಗೆ ಕಳುಹಿಸಿದ್ದೇನೆ. ಈಗ ತನಗೂ ನನಗೂ ಯುದ್ಧವು ಒದಗಿದೆ. ಆದರೆ ನಮ್ಮ ಜಾತಿಯಲ್ಲಿ ಹೆಂಗಸರ ಸಂಗಡ ಯುದ್ಧ ಮಾಡು ವುದಿಲ್ಲ, ಆದುದರಿಂದ ಇವಳನ್ನು ತಮ್ಮ ಬಳಿಗೆ ಕಳುಹಿಸಿದ್ದೇನೆ. ಒಳ್ಳೆಯದೋ ಅಥವಾ ಕೆಟ್ಟದ್ದೋ ಯಾವುದನ್ನೂ ಅರಿಯೆನು, ತಮ್ಮ ವಿಧೇಯ, "ವಾರ್ರಹೇಸ್ಟಿಂಗ್ಸ್: 0 #
ಪುಟ:ಚಂದ್ರಶೇಖರ.djvu/೧೫೩
ಗೋಚರ