ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ. ರ್ಜಾ ಸ್ಟಾಲ್ಮಾರ್ಟ. ರ್ವ ಪರಿಚ್ಛೇದದಲ್ಲಿ ಕುಲಸಂ ಬೀಬಿಯು ವಾರ್ರಹೇಸ್ಟಿಂಗ್ನನ್ನು ನೋಡಿ ದೃಳೆಂದು ಹೇಳಲ್ಪಟ್ಟಿದೆ. ಕುಲಸವಳು ಆತನಲ್ಲಿ ತನ್ನ ವಿಚಾ 1 ರವನ್ನು ಹೇಳುವುದರಲ್ಲಿ ಫಾಸ್ಟ್ರನ ದುಷ್ಕೃತ್ಯವನ್ನೆಲ್ಲಾ ಸವಿ ಸ್ತಾರವಾಗಿ ತಿಳಿಸಿದ್ದಳು. - ಇತೃವಸರದಲ್ಲಿ ವಾರ್ರಹೇಸ್ಟಿಂಗ್ನನು ಪರಪೀಡಕನೆಂದು ಪರಿ ಚಿತನಾಗಿದ್ದನು. ಕರ್ವರಾದವರು ಕರ್ತವ್ಯವಾದ ಕಾರೈಕ್ರೋಸ್ಕರ ಅನೇಕರಿಗೆ ಪರ ವೀಡಕರಾಗುವರು. ಯಾರಮೇಲೆ ರಾಜ್ಯ ರಕ್ಷಣೆಯ ಭಾರವಿರುವುದೋ ಅಂತಹವರು ಸ್ವಂತವಾಗಿ ದಯಾಳುಗಳಾಗಿ ನ್ಯಾಯಪರರಾಗಿದ್ದರೂ ರಾಜ್ಯರಕ್ಷಾರ್ಥವಾಗಿ ಅವರಿಗೆ ತಿ೪ ಯದೆ ಒಬ್ಬಿಬ್ಬರಿಗೆ ತೊಂದರೆಯಾದರೂ ಆಗಬಹುದು ಒಬ್ಬಿಬ್ಬರಿಗೆ ತೊಂದರೆಯಾಗ ಬಹುದೆಂದು ಹೇಳಿದಮಾತ್ರಕ್ಕೆ ಅಂತಹ ಕಾರ್ಯದಿಂದ ಅನೇಕರಿಗೆ ಹಾಗೆ ಸರಪೀಡ ನವಾದರೆ ಅದು ಸತ್ತಾರವೆಂದಾಗಲಿ ರಜಕಾರ್ಯವೆಂದಾಗಲಿ ಗಣನೆಗೆ ಬರುವುದಿಲ್ಲ. ಹಾಗೆ ಒಬ್ಬೊಬ್ಬರಮೇಲೆ ಅತ್ಯಾಚಾರವು ನಡೆದರೂ ಸಮುದಾಯರಾಜ್ಯಕ್ಕೆ ಉಪ ಕಾರವಾಗುವುದಾದರೆ ಅದು ತಪ್ಪಲ್ಲ. ವಸ್ತತಃ, ವಾರ್ರಹೇಸ್ಟಿಂಗ್ಟನಹಾಗೆ ಸನಾ “ಸಂಸಪನೆಯಲ್ಲಿ ಸಕ್ಷವುರಾದವರು ದಯಾಳು ವುತ್ತ ನ್ಯಾಯನಿಷರಲ್ಲವೆ? ಬುದು ಸಂಭವವಲ್ಲ. ಯಾರ ಪ್ರಕೃತಿಯಲ್ಲಿ ದಯೆ ಮತ್ತು ನ್ಯಾಯಪರತೆ ಇಲ್ಲವೋ ಅಂತಹವರಿಂದ ರಾಜ್ಯಸ್ಥಾ ಸನಾದಿ ದೊಡ್ಡದೊಡ್ಡ ಕಾರಗಳು ನಡೆಯಲಾರವು, ಏತಕ್ಕೆಂ ದರೆ, ಅಂತಹವರ ಪ್ರಕೃತಿಯು ಉನ್ನತವಾದುದಲ್ಲ ಅಲ್ಪವಾದುದು, ರಾಜ್ಯವನ್ನು ಉದ್ದಾರವಾಡುವುದು ಅಂತಹ ಅಲ್ಪಚೇತನರಿಗೆ ಸಾಧ್ಯವಲ್ಲ. ವಾರ್ರಹೇಸ್ಟಿಂಗ್ಟನು ದಯಾಳುವಾಗಿಯೂ ನ್ಯಾಯನಿಷ್ಠನಾಗಿಯೂ ಇದ್ದನು. ಆಗವನು ಗವರ್ನರು ಆಗಿರಲಿಲ್ಲ, ಕುಲಸಂವಿಯನ್ನು ಕಳುಹಿಸಿಕೊಟ್ಟು ಅವನು ಫಾಸ್ಟ ರನ ವಿಚಾರವಾಗಿ ಅನುಸಂಧಾನಮಾಡತೊಡಗಿದನು. ನೋಡಲಾಗಿ ಫಾಸ್ಟರನು ನೀಡಿತನಾಗಿ ದನು. ಪ್ರಥಮದಲ್ಲಿ ಅವನಿಗೆ ಚಿಕಿತ್ಸೆ ಮಾಡಿಸಿದನು. ಫಾಸ್ಟರನು ಚಿಕಿತ್ಸಕರ ಚಿಕಿತ್ಸೆ ಯಿಂದ ಆರೋಗ್ಯಲಾಭವನ್ನು ಹೊಂದಿದನು. ಅನಂತರ ವಾರ್ರಹೇಸ್ಟಿಂಗ್ಟನು ಫಾಸ್ಟರನ ಅಪರಾಧದ ವಿಚಾರಣೆಯಲ್ಲಿ ಪ್ರವೃತ್ತ ನಾದನು, ಫಾಸ್ಟರನು ಭಯಪಟ್ಟ ಅಪರಾಧವನ್ನೊಪ್ಪಿಕೊಂಡನು. ವಾರ್ರಹೇಸ್ಟಿಂಗ್ಧನು ರ್ಹೌಸಿಲಿನಲ್ಲಿ ಪ್ರಸ್ತಾವಿಸಿ ಫಾಸ್ಟ್ರನನ್ನು ಕೆಲಸದಿಂದ ತಪ್ಪಿಸಿದನು.