ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧H೬ ಚಂದ್ರಶೇಖರ. ಪ್ರಾರ್ಥಿಸಿ ಅವನನ್ನು ಅಲ್ಲಿಯೇ ಕುಳ್ಳಿರಿಸಿದನು. ಅಮಾರಹಸನಿನ ಮನಸ್ಸಿನಲ್ಲಿ, ಇವನು ಫಾಸ್ಟರನ ಸಮಾಚಾರವನ್ನು ಬಲ್ಲವನಾದರೂ ಹೇಳುವುದಕ್ಕೆ ಹಿಂಜರಿಯುತ್ತಾನೆಂದು ತಿಳಿದುಕೊಂಡನು. - ಅನಂತರ ಸ್ವಲ್ಪ ಹೊತ್ತಿನಮೇಲೆ ಫಾಸ್ಟರನು ತನ್ನ ಟೋಪಿಯನ್ನು ತೆಗೆದು ತಲೆಗೆ ಹಾಕಿಕೊಂಡು ಕುಳಿತುಕೊಂಡನು. ಅವಿಾರಹಸನನು, ಹೀಗೆ ಮಾಡುವುದು ಇಂಗ್ಲೀ ಪರ ನಿಯಮಕ್ಕೆ ವಿರೋಧವಾದುದೆಂದು ತಿಳಿದಿದ್ದನು, ಮತ್ತು ಭಾಸ್ಟರನು ಟೋಪಿ ಯನ್ನು ಹಾಕಿಕೊಳ್ಳುವಾಗ ಅಮಾರಹಸನನ ದೃಷ್ಟಿಯು ಅವನ ತಲೆಯಮೇಲಿದ್ದ ಘಾಯದ ಗುರ್ತಿನಮೇಲೆ ಬಿದ್ದಿತು, ಸ್ಟಾಲ್ಮಾರ್ಟನು ಘಾಯದ ಗುರ್ತನ್ನು ಮರೆಮಾಡಿ ಕೊಳ್ಳುವುದಕ್ಕೆ ಟೋಪಿಯನ್ನು ತಲೆಗೆ ಹಾಕಿಕೊಂಡನೆ ? ಅವಿಾರಹಸನನು ಹೊರಟುಹೋದನು. ತನ್ನ ಶಿಬಿರಕ್ಕೆ ಹೋಗಿ, ಕುಲಸಂಬಿ ಯನ್ನು ಕರೆದು, ನನ್ನ ಜತೆಯಲ್ಲಿ ಬಾ ಎಂದನು. ಕುಲಸಂ ಹೋದಳು. ಕುಲಸಂಬಿಯನ್ನು ಜತೆಯುಲ್ಲಿ ಕರೆದುಕೊಂಡು ಅಖಾರಹಸನನು ಪುನಃ ಸವರು ವಿನ ಶಿಬಿರಕ್ಕೆ ಬಂದನು. ಕುಲಸಹೊರಗೆ ನಿಂತಿದ್ದಳು. ಮಾಸ್ಟರನು ಆಗಲೂ ಅಲ್ಲಿಯೇ ಕುಳಿತಿದ್ದನು ಅಮಾರಹಸನನು ಸವರುವನ್ನು ಕುರಿತು, ತಮ್ಮ ಅಪ್ಪಣೆ ಯಾದರೆ ನಮ್ಮ ಕಡೆ ಒಬ್ಬ ಬಾಂದಿಯು ಬಂದು ತನಗೆ ಸಲಾ ಮಾಡಬೇಕೆಂದಿದ್ದಾಳೆ. ಅವಳಿಗೆ ಏನೋ ವಿಶೇಷ ಕೆಲಸವಿದೆ, ಎಂದು ಹೇಳಿದನು. ಸಮರು ಅಪ್ಪಣೆಮಾಡಿದನು ಫಾಸ್ಟರನಿಗೆ ಹೃತ್ವಂಸವಾಯಿತು-ಅವನು ಎದ್ದನು. ಅಮಿಾರಹಸನನು ನಕ್ಕು, ಅವನ ಕೈಹಿಡಿದುಕೊಂಡು ಕುಳ್ಳಿರಿಸಿದನು. ಕುಲಸಂಬಿ ದುನ್ನ ಕರದನು, ಅವಳು ಬಂದಳು. ನಾ ಈರನನ್ನು ಕಂಡು ನಿಪ್ಪಂದವಾಗಿ ನಿಂತಳು. ಅವಿಾರಹಸನನು ಕುಲಸಂಬಿಯನ್ನು ಕುರಿತು, ಇವನು ಯಾರೆಂದು ಕೇಳಿದನು. ಕುಲಸಂ -ಲಾರ್ರಸುಫಾಸ್ಟರ. ಅಮೀರಹಸನನ) ಫಾಸ್ಟರನ ಕೈಹಿಡಿದುಕೊಂಡನು. ಫಾಸ್ಟರನು, ನಾನು ಏನು ಮಾಡಿದೆ ? ಎಂದು ಕೇಳಿದನು. ಅವಿರಹಸನನು ಅವನಿಗೆ ಪ್ರತ್ಯುತ್ತರವನ್ನು ಹೇಳದೆ, ಸವರುವನ್ನು ಕುರಿತು, ಸಾಹಬ ! ಇವನ ದಸ್ತಗಿರಿ ಮಾಡುವುದಕ್ಕೋಸ್ಕರ ನಬಾಬ ನಾಜಿನುರ ಅಪ್ಪಣೆಯಾಗಿದೆ. ತಾವು ನನಗೆ ಸಿಪಾಯಿಗಳನ್ನು ಕೊಡಬೇಕು, ಅವರು ಬಂದು ಇವನನ್ನು ಕರೆದು ಕೊಂಡು ಹೋಗಲೆಂದು ಹೇಳಿದನು. ಸಮರು ವಿಸ್ಮಿತನಾದನು. ಅನಂತರ ವೃತ್ತಾಂತವೇನೆಂದು ಕೇಳಿದನು. ಅವಿಾರಹಸನನು, ಹಿಂದಳಿಂದ ಹೇಳುವೆನೆಂದನು, ಸವರುವು ಪಹರಿಗಳನ್ನು ಕೊಟ್ಟನು, ಅಮಾರಹಸನನು ಫಾಸ್ಟರನನ್ನು ಕಟ್ಟಿಸಿ ತೆಗೆದುಕೊಂಡು ಹೋದನು.

  • *