ಆರನೆಯ ಗ. n ಉನ್ಮಾದಿನಿಯು ಮತ್ತಷ್ಟು ಭಯಪಟ್ಟು ಹಾಗೆಯೇ ಮಾಡಿದಳು, ಅನಂತರ ಚಂದ್ರಶೇಖರನು ಅವಳ ಲಲಾಟ, ಚಕ್ಷು ಮುಂತಾದ ಅಂಗಗಳ ಮೇಲೆ ನಾನಾಪ್ರಕಾರ ವಾಗಿ ವಕ್ರಗತಿಯಿಂದ ಕೈಯನ್ನು ತಡವಿದನು, ಹೀಗಮಾಡುತಿರುವಾಗ ಕೈವಲಿನಿಯು ಕಣ್ಣುಗಳು ಮುಚ್ಚುತ್ತ ಬಂದುವು-ಕ್ರಮವಾಗಿ ತೂಗಡಿಗೆ ಬಂದು ಗಾಢವಾದ ನಿದ್ರೆ ಯಿಂದ ಅಭಿಭೂತೆಯಾದಳು. ಆಗ ಚಂದ್ರಶೇಖರನು, ಶೈವಲಿನಿ ! ಎಂದು ಕೂಗಿದನು. ಶೈವಲಿನಿಯು ನಿದ್ರಾವಸ್ಥೆಯಲ್ಲಿ, ಅಪ್ಪಣೆ, ಎಂದಳು. ಚಂದ್ರಶೇಖರ ನಾನು ಯಾರು ? ಕೈವಲಿನಿಯು ಮೊದಲಿನಹಾಗೆ ನಿದ್ರಾವಸ್ಥೆಯಲ್ಲಿ, ನನ್ನ ಸ್ವಾಮಿ, ಎಂದಳು. ಚಂದ್ರಶೇಖರ-ನೀನು ಯಾರು ? ಶೈವಲಿನೀ-ಶೈವಲಿನೀ. ಚಂದ್ರಶೇಖರ -ಇದು ಯಾವ ಸ್ಥಳ ? ಕೈವಲಿನೀ -..ವೇದಗಾಮ-ತಮ್ಮ ಗೃಹ. ಚಂದ್ರಶೇಖರ - ಹೊರಗೆ ಯಾರು ಇದ್ದಾರೆ ? ಕೈವಲಿನೀ-ಪ್ರತಾಪ, ಸುಂದರಿ ಮೊದಲಾದವರು. ಚಂದ್ರಶೇಖರ-ನೀನು ಇಲ್ಲಿಂದ ಹೊರಟುಹೋಗಿದ್ದೆ, ಏತಕ್ಕೆ ? ಶೈವಲಿನೀ-ಫಾಸ್ಸರನು ಕರೆದುಕೊಂಡು ಹೋಗಿದ್ದನು. ಚಂದ್ರಶೇಖರ-ಇದೆಲ್ಲಾ ಇದುವರೆಗೂ ನಿನಗೆ ಜ್ಞಾಪಕವಿರಲಿಲ್ಲವೇತಕ್ಕೆ? ಶೈವಲಿನೀ-ಮನಸ್ಸಿನಲ್ಲಿತ್ತು, ಬಾಯಿಯಲ್ಲಿ ಹೇಳುವುದಕ್ಕೆ ಬಾರದು. ಚಂದಶೇಖರ -ಏತಕ್ಕೆ ? ಕೈವಲಿನೀ-ನಾನು ಹುಚ್ಚಿಯಾಗಿದ್ದೇನೆ. ಚಂದ್ರ ಶೇಖರ-ನಿಜವಾಗಿಯೋ, ಅಥವಾ ವೇಷವೋ ? ಕೈವಲಿನೀ--ನಿಜವಾಗಿಯೂ ಹುಚ್ಚಿಯಾಗಿದ್ದೇನೆ, ಕಪಟವಲ್ಲ. ಚಂದ್ರ ಶೇಖರ-ಈಗಲೋ ? ಕೈವಲಿನೀ-ಇದು ಸ್ಪಷ್ಟ, ತಮ್ಮ ಪ್ರಭಾವದಿಂದ ಜ್ಞಾನವು ಬಂದಿದೆ. ಚಂದಶೇಖರ--ಹಾಗಾದರೆ ಸತ್ಯವಾಗಿ ಹೇಳುವೆಯಾ ? ಶೈವಲಿನೀ-ಹೇಳುವೆ. ಚಂದಶೇಖರ-ನೀನು ಫಾಸ್ಟರನ ಸಂಗಡ ಏತಕ್ಕೆ ಹೋದೆ ? ಶೈವಲಿನೀ – ಪ್ರತಾಪನಿಗೋಸ್ಕರ. ಚಂದ್ರಶೇಖರನು ಕಮಕಿತನಾದನು, ಸಹಸ್ರ ಚಕ್ಷುಗಳಿಂದ ಕಳೆದುಹೋದ ಘಟ ನೆಗಳನ್ನೆಲ್ಲಾ ಪುನಃ ದೃಷ್ಟಿಸಿ ನೋಡಲಾರಂಭಿಸಿದನು. ಅನಂತರ ಕೇಳತೊಡಗಿದನು. 21
ಪುಟ:ಚಂದ್ರಶೇಖರ.djvu/೧೬೫
ಗೋಚರ