ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ. ಯುದ್ಧಕ್ಷೇತ್ರದಲ್ಲಿ. ವಲಿನಿಯನ್ನು ಕರೆದುಕೊಂಡು ಚಂದ್ರಶೇಖರನು ಹೊರಗೆ ಬಂದು ನೋಡಲಾಗಿ ರಮಾನಂದಸ್ವಾಮಿಯು ಹೊರಗೆ ನಿಂತಿದ್ದನು. ಸ್ವಾಮಿ ದು, ಚಂದ್ರಶೇಖರ ! ಇನ್ನು ಮೇಲೆ ಏನಾವಾಡುವೆ ? ಎಂದನು. ಚಂದ್ರಶೇಖರ.ಈಗ ಶೈವಲಿನಿಯು ಸಾಣರಕ್ಷಣೆಮಾಡುವ ಬಗೆ ಹೇಗೆ ? ನಾಲ್ಕು ಕಡೆಯಲ್ಲಿಯೂ ಗುಂಡುಗಳ ವೃತ್ಮಿಯಾ ಗುತಲಿದೆ. ನಾಲ್ಕು ದಿಕ್ಕುಗಳಲ್ಲಿಯೂ ಧೂಮಾವೃತವಾಗಿ ಅಂಧಕಾರವಾಗಿದೆ. ಎಲ್ಲಿಗೆ ಹೋಗಲಿ ? ಸಾವಿ-ಚಿಂತೆಯಿಲ್ಲ. ಯವನ ಸೇನೆಯು ಯಾವಕಡೆ ಪಲಾಯನವಾಗಿ ಓಡಿ ಹೋಗುವುದು, ಕಾಣುವುದಿಲ್ಲವೆ ? ಎಲ್ಲಿ ಯುದ್ಧಾರಂಭದಲ್ಲಿಯೇ ಪಲಾಯಣವೋ ಅಲ್ಲಿ ರಣಜಯದ ಸಂಭವವೆಲ್ಲಿ ? ಈ ಇಂಗ್ಲೀಷಜಾತಿಯವರು ಬಹಳ ಭಾಗ್ಯವಂತರು-ಬಲಿ ಏರು-ಮತ್ತು ಈ ಇಶಲಮಯರಾಗಿ ಕಾಣುತ್ತಾರೆ. ಇವರು ಒಂದುದಿನ ಸಮಸ್ಯ ಭಾರತವರ್ಷವನ್ನೆಲ್ಲಾ ಅಧಿಕೃತವಾಡುವರೆಂದು ತೋರುತ್ತದೆ, ನಡೆ, ನಾವು ಪಲಾಯನ ಪರಾಯಣ ಪರರಾಗಿ ಯವನರಹಿಂದೆ ಹೋಗೋಣ, ನಿನ್ನ ಮತ್ತು ನನ್ನ ವಿಚಾರದಲ್ಲಿ ಯೋಚನೆಯಿಲ್ಲ. ಆದರೆ ಈ ವಧೂವಿನ ವಿಚಾರದಲ್ಲಿ ಯೋಚನೆ. ಮೂರು ಮಂದಿಯ ಪಲಾದುನೋವೃತವಾದ ದುವನಸೇನೆಯ ಬೆನ್ನಟ್ಟಿದರು, ಹಟಾ ತಾಗಿ, ಇದಿರಿಗೆ ಬಂದು ದಳ ಸುಸಜ್ಜಿತವಾದ ಹಿಂದೂ ಸೇನೆಯು ರಣಮತ್ತವಾಗಿ ದರ್ಪಿತಭಾವದಿಂದ ಸರ್ವತ ರಂಧ್ರ ಮಾರ್ಗದಿಂದ ಹೊರಟು ಇಂಗ್ಲೀಷರ ರಣಕ್ಷೇತ್ರಾಭಿ ಮುಖವಾಗಿ ಹೋಗುತಲಿದ್ದುದನ್ನು ಕಂಡರು. ಮಧ್ಯೆ ಆ ಸೇನಾದಳದ ನಾಯಕ. ಕುದುರೆದು ಮೇಲೆ ಸವಾರಿ ನೋಡಲಾಗಿ ಪ್ರತಾಸನಾಗಿದ್ದನು. ಚಂದ್ರಶೇಖರನು ಪ್ರತಾಪನನ್ನು ಕಂಡು ವಿವನನಾದನು. ಸ್ವಲ್ಪ ಹೊತ್ತು ವಿವನನಾಗಿ, ಪ ತಾಪ ! ಈ ದುರ್ಜಯವಾದ ರಣಕ್ಕೆ ನೀನೇತಕ್ಕೆ ಬಂದೆ ? ತಿರುಗು, ಎಂದನು. ಪ್ರ-ನಾನು ನಿಮ್ಮನ್ನೇ ಹುಡುಕಿಕೊಂಡು ಬಂದೆನು, ನಡೆಯಿರಿ, ನಿಮ್ಮನ್ನು ಒಂದು ನಿರ್ವಿಘ್ನ ವಾದ ಸ್ಥಾನದಲ್ಲಿಟ್ಟು ಬರುವೆನು. ಹೀಗೆಂದು ಹೇಳಿ ಪ್ರತಾಪನು ಮೂರುಮಂದಿಯನ್ನೂ ತನ್ನ ಚಿಕ್ಕ ಸೇನಾ ದಳದ ಮಧ್ಯಸ್ಥಾನದಲ್ಲಿಟ್ಟುಕೊಂಡು ಹಿಂದಿರುಗಿದನು. ಅವನಿಗೆ ಪರ್ವತಮಾಲೆಯ ಮಧ್ಯೆ ಇರುವ ನಿರ್ಗಮ ಮಾರ್ಗಗಳೆಲ್ಲಾ ಚೆನ್ನಾಗಿ ಗೊತ್ತು, ಸ್ವಲ್ಪ ಹೊತ್ತಿನಲ್ಲಿಯೇ ಅವ