ಪುಟ:ಚಂದ್ರಶೇಖರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಂದ್ರಶೇಖರ. ದಲ್ಲಿ ನಾನು ನಿಶ್ಚಿತವಾಗಿಯೂ ರಾಜ್ಯಭಷ್ಯನಾಗಿ ಹೋಗುವೆನು, ಬಂದುವೇಳೆ ಸಾyಣ ನಷ್ಮವಾದರೂ ಆಗಬಹುದು, ಹಾಗಿದ್ದರೆ ಯುದ್ಧ ಮಾಡಲು ಏತಕ್ಕೆ ಇಪ್ಪವುಳ್ಳವನಾ ಗಿರಬೇಕೆಂದು ಕೇಳುವೆ. ಇಂಗ್ಲೀಷರು ಈಗ ಆಚರಿಸುವ ಆಚರಣೆಯಿಂದ ಅವರೇ ರಾಜರಾಗಿದ್ದಾರೆ, ನಾನು ರಾಜನಲ್ಲ. ರಾಜ್ಯದಲ್ಲಿ ರಾಜನಲ್ಲದಿದ್ದರೆ ನನ್ನಿಂದ ಪ್ರಯೋಜನ ವೇನು ? ಅಷ್ಟೇಅಲ್ಲ, ಅವರು ಹೇಳುವುದರಲ್ಲಿ, ನಾವು ರಾಜರು, ಪ್ರಜೆಗಳಿಗೆ ತೊಂದರೆ ಕೊಡುವುದಕ್ಕೆ ನೀನು, ನೀನು ನಮ್ಮವನಾಗಿದ್ದು ಪ್ರಜಾ ಪೀಡನೆ ಮಾಡೆನ್ನು ವರು. ನಾನೇತಕ್ಕೆ ಹಾಗೆ ಮಾಡಲಿ ? ಪ್ರಜೆಗಳ ಹಿತಕ್ಕೋಸ್ಕರ ನಾನು ರಾಜ್ಯವನ್ನಾಳಲಸವ ರ್ಥನಾದರೆ, ಆ ರಾಜ್ಯವನ್ನು ಬಿಟ್ಟು ಹೊರಟುಹೋಗುವೆನು, ವೃಥಾ ಪಾಪಕ್ಕೂ ಕಳಂಕಕೂ ಏತಕ್ಕೆ ಭಾಗಿಯಾಗಲಿ ? ನಾನು ಸಿರಾಜಉದೌಲಾ ಅಲ್ಲ, ಮಾರಜಾಫೀ ರನೂ ಅಲ್ಲ, ಎಂದು ಹೇಳಿದನು. ದಲನಿಯು ಬಂಗಾಳಾಧೀಶ್ವರನನ್ನು ಮನಸ್ಸಿನಲ್ಲಿ ಬಹುವಿಧವಾಗಿ ಪ್ರಶಂಸ ಮಾಡಿ, ಪ್ರಾಣೇಶ್ವರ ! ತಾವು ಹೇಳಿದುದಕ್ಕೆ ನಾನೇನು ಹೇಳಲಿ ? ಆದರೆ ನನ್ನ ದೊಂದು ಭಿಕ್ಷೆ ಯುಂಟು, ಏನೆಂದರೆ, ತಾವು ಸ್ವಂತವಾಗಿ ಯುದ್ಧಕ್ಕೆ ಹೋಗಕೂಡದು, ಇದೇ ನನ್ನ ಪಾರ್ಥನೆಯೆಂದಳು. ಮಾರಕಾಸಿಂ-ಇಂತಹ ವಿಷಯದಲ್ಲಿ ಬಂಗಾಳಾ ನವಾಬನ ಕರ್ತವ್ಯವನ್ನು ಕುರಿ ತು, ಆತನು ಹೆಂಗಸಿನ ಪರಾಮರ್ಶದುನ್ನು ಕೇಳುವನೆ ? ಅಥವಾ ಬಾಲೆಯು ಇಂತಹ ವಿಷಯದಲ್ಲಿ ಪರಾಮರ್ಶೆಯನ್ನು ಕೊಡುವುದು ಅವಳಿಗೆ ಕರ್ತವ್ಯವೊ ? ದಲನಿಯ ಅಪ್ರತಿಭೆಯಿಂದ, ಕಣ್ಣೆಯಾಗಿ, ನನಗೆ ತಿ 'ಯದೆ ಹೇಳಿದೆ, ನನ್ನ ಅಪರಾಧವನ್ನು ಕ್ಷಮಿಸಬೇಕು, ಹೆಂಗಸರಿಗೆ ಇಂತಹ ಸಂಗತಿಗಳು ಗೊತ್ತಾಗದಿರುವುದ ರಿಂದಲೆ ಈ ಪ್ರಕಾರವಾಗಿ ಹೇನಿದೆನು. ಆದರೆ, ನನ್ನ ದು ಮತ್ತೊಂದು ಸಾರ್ಥನೆ ಯುಂಟು ಎಂದಳು. (• ಏನು ??? ( ತಾವು ಯುದ್ಧಕ್ಕೆ ಹೋಗುವಾಗ ನನ್ನನ್ನು ಸಂಗಡ ಕರೆದುಕೊಂಡು ಹೋಗ ಲಾದೀತೆ ? 17 « ಏತಕ್ಕೆ, ಯುದ್ಧ ಮಾಡುವಿಯೋ? ಗರಗವಾನನನ್ನು ಕೆಲಸದಿಂದ ತೆಗೆದುಹಾಕಿ ನಿನ್ನನ್ನು ಅವನ ಕೆಲಸಕ್ಕೆ ನಿಯಮಿಸಲೆ ! 1) ದಲನಿಯು ಪುನಃ ಪ ತಿಭೆಹೋದವಳಂತಾಗಿ ಮಾತನಾಡಲಾರದೆಹೋದಳು. ಮಾರಕಾಸಿಮನು ಸ್ನೇಹಭಾವದಿಂದ, ಏತಕ್ಕೆ ಹೋಗುವುದಕ್ಕೆ ಇತ್ರ್ಯವುಳ್ಳವಳಾಗಿರುವೆ? ಎಂದು ಕೇಳಿದನು. ದಲನೀ-ತಮ್ಮ ಸಂಗಡ ಇರಬೇಕೆಂದು. ವಿಾರಕಾಸಿಮನು ಒಪ್ಪಲಿಲ್ಲ. ಸ್ವಲ್ಪವೂ ಸಮ್ಮತಿಸಲಿಲ್ಲ.