ಮೊದಲನೆಯ ಭಾಗ. ಹಾಗಾಯಿತು. ಭೀರು ಸ್ವಭಾವವುಳ್ಳ ಕವಿಯ ಕವಿತಾ ಕುಸುಮುದಹಾಗೆ ತೆರೆದೂ ತೆರೆ ಯದಹಾಗೆ ಬಾಯಿ ತೆರೆಯದೆ ಹೋಯಿತು. ಮಾನಿನಿಯಾದ ಹೆಂಗಸು ಮಾನದಿಂದ ಇರುವ ಸಮಯದಲ್ಲಿ ಕರಗತವಾಗಿ ಬಂದ ಪುಣದ ಸಂಬೋಧನೆಯಹಾಗೆ ಬಿಟ್ಟು ಬಿಟ್ಟು, ಎಂದೂ ಬಾರದಹಾಗೆ ಇದ್ದು, ಹೇಗೆ ಕಡೆಗೆ ಬಾಯಿಯಿಂದ ಮಾತು ಹೊರಡದಿರು ವುದೊ, ಹಾಗಾಯಿತು. ಕಡೆಗೆ ದನಿಯು ವೀಣೆಯನ್ನು ಒತ್ತಟ್ಟಿಗೆ ಇಟ್ಟುಬಿಟ್ಟು, ನಾನು ಹಾಡುವುದಿಲ್ಲ ವೆಂದು ಹೇಳಿದಳು. ನಬಾಬನು ಆಶ್ಚರ್ಯಪಟ್ಟವನಾಗಿ, ಏತಕ್ಕೆ ? ಕೋಪವೇನು ! ಎಂದು ಕೇಳಿದನು. ದಲನೀ-ಕಲಿಕತ್ತಾದಲ್ಲಿ ಇಂಗ್ಲೀಷ ಜನ ನುಡಿಸಿಕೊಂಡು ಹಾಡುವ ಮಂತ್ರ ವನ್ನು ತಂದುಕೊಟ್ಟರೆ ಆಗ ತಮ್ಮ ಸಮುಖದಲ್ಲಿ ಹಾಡುವೆನು, ಇಲ್ಲವಾದರೆ ಹಾಡು ವುದಿಲ್ಲ. ಮಾರಕಾಸಿವನು, ಅತ್ತ ಕಡೆ ದಾರಿಯು ಸರಿಯಾಗಿದ್ದರೆ ಅವಶ್ಯಕವಾಗಿ ತಂದುಕ ಡುವೆನೆಂದನು. ದಲಿನೀ-ದಾರಿಯು ಸರಿಯಿಲ್ಲದೆ ಏನು ? ನವಾಬನು ದುಃಖಿತನಾಗಿ, ನಮಗೂ ಅವರಿಗೂ ವಿರೋಧ ಉಂಟಾಗಿದೆ. ನೀನು ಅದನ್ನೆಲ್ಲಾ ಕೇಳಿಲ್ಲವೇನು ? ಎಂದನು. ಕೇಳಿದ್ದೇನೆಂದು ಹೇ , ದಲಿನಿಯು ಸುಮ್ಮನಾದಳು. ವಿಾರಕಾಸಿವನು, ದನಿ ! ಅನ್ನವನವುಳ್ಳವಳಾಗಿ ಏನು ಯೋಚಿಸುತ್ತಿ? ಎಂದನು. ದಲನೀ-ತಾವು ಬಂದು ತಡವೆ ಯಾರು ಇಂಗ್ಲಿಷರ ಸಂಗಡ ವಿರೋಧವನ್ನು ಕಟ್ಟಿ ಕೊಳ್ಳುವರೋ, ಅವರು ಸೋತುಹೋಗುವರೆಂದು ಹೇಳಿದ್ದಿರಿ. ಹಾಗಿದ್ದರೆ ತಾವು ಅವರ ಸಂಗಡ ವಿವಾದವನ್ನು ಮಾಡಬೇಕಾದುದೇತಕ್ಕೆ ? ನಾನು ಬಾಳೆ, ದಾಸಿಯಾಗಿದ್ದೇನೆ. ನಾನು ಇದನ್ನೆಲ್ಲ ಹೇಳವುದು ಅನ್ಯಾಯ, ಆದರೆ ಹೇಳುವುದಕ್ಕೆ ಒಂದು ಅಧಿಕಾರವೂ ಉಂಟು, ಏತಕ್ಕೆಂದರೆ, ತಾವು ದಯವಿಟ್ಟು ನನ್ನನ್ನು ಪ್ರೀತಿಸುತ್ತೀರಿ, - ನಬಾಬ-ಆ ಮಾತು ನಿಜ, ದಲಿನಿ ! ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನನ್ನು ಪ್ರೀತಿಸುವಹಾಗೆ ಯಾವಾಗಲೂ ಹೆಂಗಸನ್ನು ಪ್ರೀತಿಸುತ್ತಿರಲಿಲ್ಲ. ಈ ರೀತಿ ಯಾಗಿ ಯಾರನ್ನೂ ಪ್ರೀತಿಸುವೆನೆಂದು ಹೇಳಲಾರೆ. - ದಲನಿಯ ಶರೀರನು ಕಂಟಕಿತವಾಯಿತು, ಅವಳು ಬಹಳ ಹೊತ್ತು ಸುಮ್ಮನಿ ದೃಳು, ಕಣ್ಣಿನಿಂದ ನೀರು ಬಿತ್ತು, ಕಣ್ಣೀರೊರಸಿಕೊಂಡು, ಇಂಗ್ಲೀಷರ ಸಂಗಡ ವಿರೋಧವನ್ನು ಬೆಳೆಸಿದವರು ಸೋಲುವರೆಂದು ತಿಳಿದಿದ್ದರೆ, ಅವರೊಂದಿಗೆ ವಿವಾದ ಮಾಡುವುದಕ್ಕೆ ಸಿದ್ಧರಾಗಿರುವದೇತಕ್ಕೆಂದಳು. ನವಾಬನು ಮೃದುತರವಾದ ಸ್ವರದಿಂದ, ನನಗೆ ಇನ್ನು ಉಪಾಯವಿಲ್ಲ. ನೀನು ಕೇವಲ ನನ್ನವಳು. ಆದುದರಿಂದ ನಿನ್ನ ಸಂಗಡ ಹೇಳುವೆನು, ಕೇಳು, ಈ ವಿವಾದ
ಪುಟ:ಚಂದ್ರಶೇಖರ.djvu/೧೭
ಗೋಚರ