ಚಂದ್ರಶೇಖರ. ಒಬ್ಬರು ಮತ್ತೊಬ್ಬರ ಮಾರ್ಗವನ್ನು ನೋಡಿಕೊಂಡು ಬಿದ್ದಿರಬೇಕಾದುದೇತಕ್ಕೆ ? ಅದೇ ಈಶ್ವರನ ಇಚ್ಛೆಯಾಗಿದ್ದರೆ ಯಾರು ಯಾರನ್ನು ಹೊಂದುವನೋ ಅವನು ಅವಳ ಮೇಲೆ ಆಕೆಯುಳ್ಳವನಾಗಿರುವುದಿಲ್ಲವೇತಕ್ಕೆ ? ಯಾರನ್ನು ಹೊಂದುವುದಿಲ್ಲವೋ ಅಂತಹವೆ ರನ್ನು ಅಪೇಕ್ಷಿಸುವುದೇತಕ್ಕೆ ? ನಾನು ಅಲ್ಪವಾದ ಲತೆಯಾಗಿದ್ದುಕೊಂಡು ಸಾಲವೃಕ್ಷ ವನ್ನು ಏರಬೇಕೆಂದಳಿಸುವುದೇತಕ್ಕೆ ? ಹೀಗೆಂದು ಹೇಳುತ್ತ ಪುಸ್ತಕವನ್ನು ಬಿಸಾಟು ಎದ್ದು ನಿಂತುಕೊಂಡಳು. ನಿರ್ದೋಷವಾದ ದೇಹಘಟನೆ. ಚಿಕ್ಕದಾದ ತಲೆಯಿಂದ ಅಂಬಿತವಾದ ಭುಜಂಗರಾಶಿಯಹಾಗೆ ನಿಬಿಡವಾದ ಕುಂಚಿತವಾದ ಈಶಭಾರವು ಹರಿದು ನೆಲ ಸೋಕಿತು, ಸ್ವರ್ಣ ರಚಿತವಾದ ಸುಗಂಧವನ್ನು ಹರಡುವ ಉಜ್ವಲವಾದ ಮೇಲುದು ಎಂಬ ಉತ್ತರೀಯವು ಹರಿದುಬಿತ್ತು, ಅವಳ ಅಂಗ ಸಂಚಾಲನ ಮಾತ್ರದಿಂದ ರೂಪದ ತರಂಗವು ಎದ್ದ ಹಾಗಾಯಿತು. ಅಗಾಧವಾದ ನೀರಿನಲ್ಲಿ ಚಾಂಚಲ್ಯ ಮಾತ್ರದಿಂದ ತರಂ ಗವು ಎದ್ದ ಹಾಗೆ ಎದ್ದವು. ಆಗ ಆ ಸುಂದರಿದು ಬಂದು ಸಣ್ಣದಾದ ವೀಣೆಯನ್ನು ತೆಗೆದುಕೊಂಡು ಝುಂಕಾ ರಮಾಡಿ ಕೇಳುವವನಿಗೆ, ಭಯಪಟ್ಟವಳ ಹಾಗೆ, ಮೆಲ್ಲಮೆಲ್ಲಗೆ ಅತಿಮೃದುವಾದ ಸ್ಮರದಲ್ಲಿ ಸಂಗೀತವನ್ನು ಆರಂಭಿಸಿದಳು. ಈ ಸಮಯದಲ್ಲಿ ಪಾಲ್ಲಿ ಬೋಯಿಗಳ ಶಬ್ದವೂ ಸಹ ರಿಗಳ ಕೂಗೂ ಕಿವಿಗೆ ಬಿದ್ದವು. ಬಾಲೆಳು ಚಮುಕಿತೆಯಾಗಿ ಎದ್ದು ವೈಸ್ತಚಿತ್ತದಿಂದ ಕೊರಡಿಯ ಬಾಗಿಲಿಗೆ ಬಂದು ನಿಂತು ನೋಡಲಾಗಿ ನವಾಬನ ಸಾಲ್ಟಿಯಾಗಿತ್ತು, ನಬಾಬು ವಿಾರಕಾಸೀಮಲಿಖಾನನು ಸಾಲ್ಕಿಯಿಂದಿಳಿದು ಕೊಠಡಿಯೊಳಗೆ ಪ್ರವೇಶಮಾಡಿದನು. ನಬಾಬನು ಆಸನಗ ಹಣಮಾಡಿ, ದಲಿನೀಬೀಬಿ ! ಯಾವದನ್ನು ಹಾಡುತಲಿದ್ದೆ ? ಎಂದನು. ಯುವತಿಯ ಹೆಸರು ದೌಲತಉನ್ನಿಸಾ ಎಂದು ತೋರುತ್ತದೆ. ನಬಾಬನು ಅದನ್ನು ಸಂಕ್ಷೇಪಮಾಡಿ ದನಿಯೆಂದು ಹೇಳುತ್ತಿದ್ದನಾಗಿ, ನ ಇರ ಜನರೆಲ್ಲರೂ ಅವ ಳನ್ನು ದಲಿನೀಬೇಗಂ, ದಲನಿಬೀಬಿ, ಎಂದು ಕರೆಯುವರು. .ದಲನಿದು ಲಜ್ಞಯಿಂದ ಮುಖತಗ್ಗಿದವಳಾದಳು. ಅವಳ ದುರದೃಕ್ಕೆ ಸರಿ ಯಾಗಿ ನವಾಬನು, ನೀನು ಹಾಡುತಲಿದ್ದುದನ್ನು ಹಾಡು, ಹೇಳುವೆನೆಂದನು. ಆಗ ಬಹಳ ಗಲಭೆಗಿಟ್ಟಿತು. ವೀಣೆಯ ಶುತಿಯು ಸರಿಬೀಳದುಏನುಮಾಡಿ ದರೂ ಸರಿಯಾಗದು, ವೀಣೆಯನ್ನು ಬಿಟ್ಟು ದಳ ನಿದು ಚಿಹಲಾ (ಅಂದರೆ ಸಣ್ಣದಾದ ತಮಟೆಯನ್ನು) ತೆಗೆದುಕೊಂಡಳು. ಅದೂ ತಾಳಕ್ಕೆ ಸರಿಬೀಳಲಿಲ್ಲ. ನವಾಬನು, ಚಿಂತೆಯಿಲ್ಲ...-ಇದ್ದ ಹಾಗೆಯೇ ಹಾಡೆಂದನು. ಇದರಿಂದ ದಲಿನಿಯು ಮನಸ್ಸಿನಲ್ಲಿ, ತನಗೆ ತಾಳಜಾನವಿಲ್ಲವೆಂದು ನಬಾಬನು ತಿ 'ದಿರುವನೆಂದು ತಿಳಿದುಕೊಂಡಳು. ಅನಂತರ ದಲ ನಿಯ ಬಾಯಿಯಲ್ಲಿ ಏನೂ ಹೊರಡದು, ಬಾಯಿಬಿಟ್ಟು ಹಾಡುವುದಕ್ಕೆ ಎಷ್ಟೊ ಪ್ರಯತ್ನ ಪಟ್ಟಳು. ಏನುಮಾಡಿದರೂ ಬಾಯಿಯಲ್ಲಿ ಸ್ವರವೇ ಹೊರಡದು ! ಮೇಘಚ್ಛ ನವಾದ ದಿನ ಸ್ಥಳಪದ್ಮವು ಬಾಯಿಬಿಡುವ ಹಾಗಿದ್ದರೂ ಹೇಗೆ ಬಾಯಿ ತೆರೆಯುವದಿಲ್ಲವೋ
ಪುಟ:ಚಂದ್ರಶೇಖರ.djvu/೧೬
ಗೋಚರ