ಪುಟ:ಚಂದ್ರಶೇಖರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದನೆಯ ತಾಗ. ಸಾ ಪಿ ಯ ಸಿ. ಮೊದಲನೆಯ ಪರಿಚ್ಛೇದ. ಸುಭಾ ಬಂಗಾಳಾ, ಬೇಹಾರ, ಒರಿಸ್ಸಾ ಇವುಗಳಿಗೆ ಅಧಿಪತಿಯಾದ ನಬಾಬು ಅಲಿಜಾಮಿಾರ ಖಾಸಿಮಖಾನನು ವಂಗೀರ ಕೋಟೆಯಲ್ಲಿ ವಾಸ ಮಾಡುತಲಿದ್ದನು, ಆ ಕೋಟೆಯಲ್ಲಿ ಅಂತಃಪುರ, ರಂಗಮಹಲು ಗಳು ಬಹಳ ಅಲಂಕೃತವಾಗಿ ಪಕಾತಿಸುತಲಿದ್ದುವು. ಇನ್ನೂ ೩ ರಾತ್ರಿಯ ಪ್ರಥಮಯಾಮವು ಮಾರಿರಲಿಲ್ಲ. ಕೊಠಡಿಯಲ್ಲಿ ಸುರಂ ಜಿತವಾದ ರತ್ನಗಂಬಳಿದು ಹಾಸಿತ್ತು. ಬೆಳ್ಳಿಯ ದೀಪಸ್ತಂಬಗಳಲ್ಲಿ ಸುವಾಸಿತವಾದ ತೈಲವು ತುಂಬಿ ದೀಪವು ಉರಿಯುತಲಿತ್ತು, ಸುಗಂಧಗಳಿಂದಲೂ ಪುಪ್ಪರಾಮಗಳ ಸುವಾಸನೆಯಿಂದಲೂ ಕೊರಡಿದು ತುಂಬಿಹೋಗಿತ್ತು. ಹಂಸತೂಲಿಕಾತಲ್ಪದಲ್ಲಿ ಮೊಕ ಮಲಿನ ದಿಂಬಿನ ಮೇಲೆ ತಲೆಯನ್ನಿಟ್ಟುಕೊಂಡು ಸ್ಕೂಲಿಕಾಯೆಯುಲ್ಲದ ಬಾಲಿಕೆಯ ಹಾಗಿದ್ದ ಯುವತಿಯೊಬ್ಬಳು ಮಲಗಿಕೊಂಡು ಗುಲಿರ್ಸ್ತಾ ಪುಸ್ತಕವನ್ನು ಓದಲೆತ್ನಿಸು ತಿದ್ದಳು. ಯುವತಿಗೆ ಹದಿನೇಳು ವರುಷ ವಯಸ್ಸು, ಆದರೆ ಗಿಡ್ಡು, ಬಾಲಿಕೆಯ ಹಾಗೆ ಸುಕುಮಾರಿ, ಗುಲಿರ್ಸ್ತಾ ಓದುತ್ತ ಒಂದೊಂದು ತಡವೆ ಎನ್ನು ದೃಷ್ಟಿಸಿ ನೋಡು ವಳು, ನೋಡಿ ಮನಸ್ಸಿನಲ್ಲಿ ಏನೇನೋ ಭಾವಿಸಿಕೊಳ್ಳುತ್ತ, ಇದುವರೆಗೂ ಬರಲಿಲ್ಲವೇ ತಕ್ಕೆ 2 ಎಂದು ಹೇಳಿಕೊಂಡು, ಆತನು ಏತಕ್ಕೆ ಬರುವನು ? ಸಾವಿರಾರು ದಾಸಿಗಳಲ್ಲಿ ನಾನೂ ಒಬ್ಬ ದಾಸಿ ; ನನಗೋಸ್ಕರ ಇಷ್ಟುದೂರ ಏತಕ್ಕೆ ಬರುವನು ? ಎಂದಂದು ಕೊಂಡು, ಪುನಃ ಪುಸ್ತಕವನ್ನು ಓದಲು ಪ್ರವೃತ್ತಿಯಾಗುವಳ ೨. ಸ್ವಲ್ಪದೂರ ಓದಿ, ಏತಕ್ಕೋ ಚೆನ್ನಾಗಿಲ್ಲ. ಒಳ್ಳೆಯದು, ಬಾರದೆ ಇರಲಿ, ನನ್ನನ್ನು ಸ್ಮರಿಸಿಕೊಂಡರೆ ನಾನೇ ಹೋಗುವೆನು, ಆದರೆ ನನ್ನ ಜ್ಞಾಪಕವು ಬರುವ ಬಗೆ ಹೇಗೆ ? ಸಾವಿರಾರು ಜನರಲ್ಲಿ ನಾನೊಬ್ಬ ದಾನಿಯಾಗಿರುತ್ತ ನನ್ನ ನ್ನು ಜ್ಞಾಪಿಸಿಕೊಳ್ಳಬೇಕೆಂಬುದು ದುರಾಶೆ ಎಂದು ಹೇಳಿಕೊಂಡು, ಪುನಃ ಪುಸ್ತಕವನ್ನು ನೋಡಲು ತೊಡಗಿದಳು. ಅದು ಮನಸ್ಸಿಗೆ ಸರಿಬೀಳದೆ ಪುಸ್ತಕವನ್ನು ಬಿಸಾಟು, ಒಳ್ಳೆಯದು, ಈಶ್ವರನು ಹೀಗೇತಕ್ಕೆ ಮಾಡಿದ ?