೧೬ ಚಂದ್ರಶೇಖರ. ಮೇಲೆ ನಿಂತಿದ್ದವಳು ನನೆ ಬ್ರಳನ್ನೆ ಬಿಟ್ಟು ಓಡಿ ಬಂದು ಬಿಟ್ಟಳು. ನಾನು ನೀರಿನ ಇದೆನು; ಭಯದಿಂದ ಎದ್ದು ಬರಲಾರದೆ ನೀರಿನಲ್ಲಿ ಕುತ್ತಿಗೆಯವರೆಗೂ ಮುಣುಗಿ ನಿಂತು ಕೊಂಡಿದ್ದೆನು. ಅವನು ಹೊರಟುಹೋದಮೇಲೆ ಎದ್ದು ಬಂದೆನು. ಚಂದ್ರಶೇಖರನು ಅನ್ಯಮನನಾಗಿ, ತಿರುಗಿ ಬರಬೇಡ, ನಾನು ಓದುತ್ತೇನೆಂದು ಹೇಳಿ ಬಿಟ್ಟು ಪುನಃ ಶಂಕರಭಾವವನ್ನು ತೆಗೆದುಕೊಂಡು ಅದರಲ್ಲಿ ನಿವಿಸ್ಮಚಿತ್ತನಾದನು. ರಾತ್ರಿ ಬಹಳ ಹೊತ್ತಾದರೂ ಚಂದ್ರಶೇಖರನು, ಪ್ರೇಮ, ಮಾಯಾ, ಸ್ಫೋಟ, ಅಪರುಪೇದುತ್ಪ, ಇತ್ಯಾದಿ ತರ್ಕದಲ್ಲಿ ಯೋಚನೆಯುಳ್ಳವನಾಗಿದ್ದನು, ಶೈವಲಿನಿಯು ಪದ್ಧತಿದುಪಕಾರ ಸ್ವಾಮಿಗೆ ಅಡಿಗೆಮಾಡಿ ಸಿದ್ದಪಡಿಸಿಟ್ಟು ಬಂದು ಹಾಸಿಗೆಯ ಮೇಲೆ ಮಲಗಿ ನಿದ್ರೆ ಹೋಗುತಲಿದ್ದಳು, ಅವಳು ಮೊದಲೆ ಊಟವನ್ನು ಮಾಡುವುದಕ್ಕೆ ಚಂದ್ರ ಶೇಖರನ ) ಅನುವುದನ್ನು ಕೊಟ್ಟಿದ್ದನು.. ಅವಳು ಹಾಗೆಯೇ ಮಾಡಿದಳು. ಚಂದ್ರಶೇಖರನು ರಾತ್ರಿ ಬಹಳ ಹೊತ್ತು ಓದುತಲಿದ್ದನಾದುದರಿಂದ ಕಡೆಗೆ ಊಟಮಾಡಿ ಮಲಗುತಲಿದ್ದನು. ಬಹಳ ಹೊತ್ತಿನಮೇಲೆ ಚಂದ್ರಶೇಖರನು ಪುಸ್ತಕವನ್ನು ಕಟ್ಟ ಯಥಾಸ್ಥಾನದಲ್ಲಿ ಅದನ್ನು ಇಟ್ಟು, ಹಾಗೆಯೇ ನಿಂತಿದ್ದನು. ಕಿಟಕಿಯಬಾಗಿಲು ತೆರೆದಿತ್ತು. ಬೆಳದಿಂಗ ಇಲ್ಲಿ ಪ್ರಫುಲ್ಲವಾದ ಪ್ರಕೃತಿಯ ಶೋಭರಾತಿಯು ದೃಷ್ಟಿಗೆಬಿತ್ತು, ಕಿಟಕಿಯಿಂದ ಬೆಳ ದಿಂಗಳು ಬಂದು ಮಲಗಿದ್ದ ಸುಂದರಿಯಾದ ಕೈವಲಿನಿಯು ಮುಖದಮೇಲೆ ಬಿದ್ದಿತ್ತು. ಚಂದ್ರಶೇಖರನು ಪ್ರಫುಲ್ಲಚಿತ್ರವುಳ್ಳವನಾಗಿ ನೋಡುತ ತನ್ನ ಗೃಹಸರೋವರದಲ್ಲಿ ಚಂದುಬಳಕಿನಲ್ಲಿ ಪದ್ಮವು ವಿಕಸಿತವಾಗಿದೆ ! ಎಂದು ಭಾವಿಸಿಕೊಂಡು, ಹಾಗೆಯೆ ನಿಂತು ನಿಂತ: ಬಹಳ ಹೊತ್ತು ಪ್ರೀತಿಯಿಂದರಳಿದ ನೇತ್ರವುಳ್ಳವನಾಗಿ ಕೈವಲಿನಿಯು ಅನಿಂದ್ಯವಾದ ಸಾಂದರ್ಯಕ್ಕೆ ಆಕರವಾದ ಮುಖಮಂಡಲವನ್ನು ನೋಡಲಾರಂಭಿಸಿದನು. ನೋಡಲಾಗಿ ಚಿತ್ರಿತವಾದ ಧನುಸ್ಸಿನ ಖಂಡದಹಾಗೆ ನಿಬಿಡ ಕೃಷ್ಣವರ್ಣವುಳ್ಳ ಭೂದುಗ್ಯದಕೆಳಗೆ ಮುದಿತವಾಗಿ ಪದ್ಮರಕಸದೃಶವಾದ ಲೋಚನಪದ್ಮಗಳು ಮುಚ್ಚಲ್ಪಟ್ಟಿದ್ದವು. ಆ ಪ್ರಶಸ್ತವಾದ ನಯನ ಪಲ್ಲವದಲ್ಲಿ ಕೋಮಲವಾದ ಸಮಗಾಮಿಯಾದ ರೇಖೆಯು ಕಂಡಿತು. ಚಿಕ್ಕದಾದ ಕೊವಲತರವಾದ ಕರಪಲ್ಲವವು ನಿದಾ ವೇಶದಿಂದ ಕಪೋಲದಲ್ಲಿ ಡಲ್ಪಟ್ಟಿತ್ತು, ನೋಡಿದರೆ ಕುಸುಮರಾಶಿಯ ಮೇಲೆ ಕುಸುಮರಾಶಿಯು ಹರಡಿದ ಹಾ ಗಿತ್ತು, ಮುಖಮಂಡಲದಮೇಲೆ ಕೈಯಿಡಲ್ಪಟ್ಟಿದ್ದ ಕಾರಣ ಸುಕುಮಾರವಾದ ರಸಪ ರಿಪೂರ್ಣವಾದ ತಾಂಬೂಲರಾಗದಿಂದ ಆರಕ್ತವಾಗಿದ್ದ ಹಿಸ್ಪ್ಯಾಧರಗಳು ಸ್ವಲ್ಪ ತೆರೆದು ಲ್ಪಟ್ಟು ಮುಕ್ತಾಕಾರವಾದ ದಂತಪಬ್ಲಿದು ಸ್ವಲ್ಪಮಟ್ಟಿಗೆ ಕಳಿಸುತಲಿತ್ತು. ಶೈವಲಿನಿಯು ಏನೋ ಒಂದು ಸುಖಕರವಾದ ಸ್ಪಷ್ಟ ಕಂಡು ಸ್ವಲ್ಪ ನಕ್ಕಳು. ಅದು ಬೆಳದಿಂಗಳಲ್ಲಿ ವಿಂಚುಬಿದ್ದ ಹಾಗಾಯಿತು. ಕೂಡಲೆ ಆ ಮುಖಮಂಡಲವು ಪುನಃ ಸುಷುಪ್ತಿಯಲ್ಲಿ ಸುಸ್ಥಿರವಾಯಿತು. ಆ ವಿಲಾಸ ಚಾಂಚಲ್ಯಶೂನ್ಯವಾದ ಇಪ್ಪತ್ತು ವರು
ಪುಟ:ಚಂದ್ರಶೇಖರ.djvu/೨೪
ಗೋಚರ