ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನವು ಭಾಗ. ೧ತಿ ಪ್ರದ ಯುವತಿಯ ಪ್ರಫುಲ್ಲವಾದ ಮುಖಮಂಡಲವನ್ನು ನೋಡಿ ಚಂದ್ರಶೇಖರನ ಕಣ್ಣು ಗಳಲ್ಲಿ ನೀರು ತುಂಬಿತು. - ಚಂದ್ರಶೇಖರನು ಕೈವಲಿನಿದು ಸುಷುಪ್ತಿಯಿಂದ ಸುಸ್ಥಿರವಾದ ಮುಖಮಂಡಲದ ಸುಂದರವಾದ ಕಾಂತಿಯನ್ನು ನೋಡಿ ಕಣ್ಣೀರು ಬಿಟ್ಟನು. ಅನಂತರ ಮನಸ್ಸಿನಲ್ಲಿ, ಹಾ ! ನಾನು ಇವಳನ್ನು ಏತಕ್ಕೆ ವಿವಾಹಮಾಡಿಕೊಂಡೆನು ? ಈ ಕುಸುಮವು ರಾಜಮುಕ ಟದಲ್ಲಿ ಶೋಭಿಸತಕ್ಕದ್ದು, ಶಾಸ್ತು ಧ್ಯಯನದಲ್ಲಿ ಚಿತ್ರವುಳ್ಳ ವೈದಿಕ ಬ್ರಾಹ್ಮಣಪಂಡಿ ತನ ಕುಟೀರಕ್ಕೆ ಇವಳನ್ನು ಏತಕ್ಕೆ ಕರೆತಂದೆನು ? ತಂದುದರಿಂದ ನಾನೇನೊ ಸುಖಿ ಯಾದೆನು. ಅದಕ್ಕೆ ಸಂದೇಹವಿಲ್ಲ. ಆದರೆ ಕೈವಲಿನಿಗೆ ಅದರಿಂದೇನು ಸುಖ ? ಅವಳಿಗೆ ನನ್ನಂತಹವನಲ್ಲಿ ಅನುರಾಗ ಹುಟ್ಟುವುದು ಅಸಂಭವ-ಅಧವಾ ನನ್ನ ಪ್ರಣಯದಿಂದ ಅವಳ ಪ್ರಣಯಾಕಾಂಕ್ಷೆಯು ನಿವಾರಣೆಯಾಗುವ ಸಂಭವವಿಲ್ಲ. ನಾನಾದರೂ, ಸರದಾ ನನ್ನ ಗ್ರಂಥಗಳನ್ನು ಇಟ್ಟುಕೊಂಡು ಅದರಲ್ಲಿ ನಿಯತವ್ರತವುಳ್ಳವನಾಗಿದ್ದೇನೆ. ಹೀಗಿ ರತ್ತ, ಅವಳ ಸುಖವನ್ನು ಕುರಿತು ಯಾವಾಗತಾನೇ ಮನಸ್ಸಿಗೆ ಹಚ್ಚಿಕೊಳ್ಳಲಿ ? ನನ್ನ ಗ್ರಂಧಗಳನ್ನು ತೆಗೆದುಕೊಂಡು ಓದಿ ಅವಳಿಗೆ ಏನುತಾನೇ ಸುಖ ? ನಾನು ಕೇವಲ ಆತ್ಮ ಸುಖ ಪರಾಯಣನಾಗಿದ್ದೇನೆ : ಆದುದರಿಂದಲೆ ಇವಳನ್ನು ನಾನು ವಿವಾಹಮಾಡಿಕೊಳ್ಳಲು ಪ್ರವೃತ್ತನಾದೆನು. ಈಗ ನಾನೇನು ಮಾಡಲಿ ? ಕಷ್ಟದಿಂದ ಸಂಪಾದಿಸಿದ ಈ ಪುಸ್ತಕ ರಾತಿಯನ್ನು ನದಿಯಲ್ಲಿ ತೇಲಿಬಿಟ್ಟು ಬಂದು ರಮಣಿಯುವುಖ ಸದ್ಯವನ್ನು ಈ ಜನ್ಮದಲ್ಲಿ ಸಾರಭೂತವಾಗಿ ಮಾಡಿಕೊಳ್ಳಲೆ ? ಈ ಸಕುಮಾರವಾದ ಕುಸುಮವನ್ನು ಅತೃಪ್ತಿ ವಾದ ದ ಇವನ ತಾವದಲ್ಲಿ ದಗ್ಧ ಮಾಡುವುದಕ್ಕೋಸ್ಕರವೆ ಅದನ್ನು ಅದರ ತೊಟ್ಟಿನಿಂದ ಕಿತ್ತು ತಂದೆನೆ, ಏನು ? ಎಂದು ಯೋಚಿಸಿದನು. ಈ ಪ್ರಕಾರ ಯೋಚನೆಯನ್ನು ಮಾಡುತ್ತ ಚಂದ್ರಶೇಖರನು ಊಟಮಾಡುವುದನ್ನು ವರೆತುಹೋದನು. ಮರುದಿನ ಅವನು ಮುರಪ್ರೀದಾಬಾದಿಗೆ ಹೋಗಬೇಕೆಂದು ವಿಾರವ. ನಪಿಯಿಂದ ಸರವಾನೆಯು ಬಂದಿತು. ನವಾಬನ ಕೆಲಸಕೊಸ ರ ಹೋಗಬೇಕಾಗಿತ್ತು, 8