ಪುಟ:ಚಂದ್ರಶೇಖರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ck ಸುವನು. ಚಂದ್ರಶೇಖರ. ನಿನ್ನ ಹಡಗಿನ ಹಿಂದೆಹಿಂದೆ ಎಂದೆನು, ನಿನ್ನ ಹಡಗು ದೊಡ್ಡದು, ಬೇಗನೆ ಹೋಗು ವುದಿಲ್ಲ, ನನ್ನದು ಚಿಕ್ಕದೋಣಿ. ಆದುದರಿಂದ ಬೇಗನೆ ಬಂದು ಕೂಡಿಕೊಂಡೆನು. ಕೈವಲಿನಿ-ನೀನು ಒಬ್ಬಳೇ ಬಂದುದು ಹೇಗೆ ? “ ನೀನು ಕೆಟ್ಟ ಮೋರೆಯುವಳು ಸಾಹೆಬನ ಪಲ್ಲಕ್ಕಿಯನ್ನು ಹತ್ತಿ ಬಂದುದು ಹೇಗೆ ? ಎಂದು ಕೇಳ ಬೇಕೆಂದು ಸುಂದರಿಯು ಬಾಯಿಗೆ ಬಂದಿತು. ಅಪ್ಪರೊಳಗೆ ಸುಂದರಿದು, ಹಾಗೆ ಹೇಳುವುದಕ್ಕೆ ಇದು ಸಮುದವಲ್ಲವೆಂದು ಯೋಚಿಸಿ, ಆ ಮಾತನ್ನು ಹೇಳದೆ, ಒಬ್ಬಳೇ ಬರಲಿಲ್ಲ. ನನ್ನ ಸ್ವಾಮಿಯ ನನ್ನೊಂದಿಗೆ ಬಂದಿದ್ದಾನೆ. ನಮ್ಮ ದೋಣಿ ಯನ್ನು ದೂರದಲ್ಲಿಟ್ಟು ನಾನು ನಾಮಿತೆಯ ವೇಷವನ್ನು ತಾಳಿ ಇಲ್ಲಿಗೆ ಬಂದೆನೆಂದಳು. ಕೈವಲಿನಿ - ಅದರಮೇಲೆ ? ಸುಂದರಿ-ಅದರಮೇಲೆ, ನೀನು ನನ್ನ ಈ ಸೀರೆಯನ್ನು ಉಟ್ಟ ಈ ಕುಕ್ಕೆ ಯನ್ನು ತೆಗೆದುಕೊಂಡು, ಗೋಪೆದು ಬಟ್ಟೆಯನ್ನು ಹಾಕಿಕೊಂಡು, ಹಡಗಿನಿಂದಿಳಿದು ಹೊರಟುಹೋಗು. ನದಿಯ ತೀರದಲ್ಲಿಯೇ ಹೋಗು. ಅಲ್ಲಿ ದೋಣಿ ಯಲ್ಲಿ ನನ್ನ ಸ ಮಿಯು ಇರುವನು, ನಾದಿನಿಯ ಗಂಡನೆಂದು ಲಜ್ಜಿತೆಯಾಗಬೇಡ, ದೋಣಿಯಲ್ಲಿ ಹತ್ತಿ ಕುಳಿತುಕೊ -ಕೂಡಲೆ ನಿನ್ನನ್ನು ಕರೆದುಕೊಂಡು ಹೋಗಿ ನಿಮ್ಮ ಮನೆಗೆ ತಲಪಿ ಸುವನು. - ಶೈವಲಿನಿಯು ಬಹಳ ಹೊತ್ತು ಯೋಚಿಸಿ, ಅನಂತರ, ನಿನ್ನ ಗತಿಯೋ ? ಎಂದು ಕೇಳ ದಳು. ಸುಂದರಿ-ನನ್ನ ವಿಚಾರವನ್ನು ಕುರಿತು, ಯೋಚಿಸಬೇಡ, ಈ ಸುಂದರಿಯನ್ನು ಈ ಹಡಗಿನಲ್ಲಿಟ್ಟು ತೆಗೆದುಕೊಂಡು ಹೋಗುವುದಕ್ಕೆ ಸಾಮರ್ಥ್ಯವುಳ್ಳ ಇಂಗ್ಲೀಷರವನು ಬಂಗಾಳಾದೇಶಕ್ಕೆ ಇನ್ನೂ ಬಂದಿಲ್ಲ. ನಾನು ಬ್ರಾಹ್ಮಣರ ಹುಡುಗಿ-ಬ್ರಾಹ್ಮಣನ ಹೆಂಡತಿ, ನಮ್ಮ ಮನಸ್ಸು ದೃಢವಾಗಿದ್ದರೆ ಪ್ರಪಂಚದೊಳ ಗಾಗಿ ನಮಗೆ ಯಾವ ವಿಪತೂ ಬಾರದು. ವಿಪತ್ತನ್ನು ಹರಿಸುವ ಮಧುಸೂದನನೇ ನಮಗೆ ಗತಿ. ನೀನು ಇನ್ನು ವಿಳಂಬಮಾಡಬೇಡ-ನಿನ್ನ ನಾದಿನಿಯ ಗಂಡನಿಗೆ ಇನ್ನೂ ಊಟವಿಲ್ಲ. ಇಂದು ಊಟವಾದೀತೊ ಇಲ್ಲವೊ ಅದನ್ನು ಹೇಳುವುದಕ್ಕೂ ಆಗುವುದಿಲ್ಲ. ಶೈವಲಿನಿ-ಒಳ್ಳೆಯದು, ನಾನು ಹೋದೆನೆಂತಲೇ ಹೇಳು-ಹೋದರೆ ಮನೆಗೆ ನನ್ನನ್ನು ಸೇರಿಸುವರೆ ? - ಸುಂದರಿ-ಇದೀಗ ಸರಿಯಾಯಿತು ? ಸೇರಿಸುವುದಿಲ್ಲವೇತಕ್ಕೆ? ಸೇರಿಸಿಕೊಳ್ಳದಿದ್ದರೆ ಮತ್ತೆಲ್ಲಿ ಬಿದ್ದಿರುವೆ ? - ಶೈವಲಿನಿ-ಈಗ ನೋಡು-ಇಂಗ್ಲೀಷರವನು ನನ್ನನ್ನು ಹೊತ್ತುಕೊಂಡು ಬಂದು ಬಟ್ಟನು. ಇನ್ನು ನನಗೆ ಜಾತಿಯುಳಿಯಿತೆ ? ಸುಂದರಿಯು ಶೈವಲಿನಿಯನ್ನು ದೃಷ್ಟಿಸಿನೋಡಿ ಅವಳ ಮೇಲೆ ವರ್ವಭೇದಿಯಾದ ತೀವ್ರದೃಷ್ಟಿಯನ್ನು ಬೀರಿದಳು. ಗರ್ವಿತೆಯಾದ ಕೈವಲಿನಿಯು ಹಸಿರು ಸೋಂಕಿದ