ಮೊದಲನೆಯು ಭಾಗ. ܮܩ ಶೈವಲಿನಿಯು ಯಾವುದೋ ಕಾರಣದಿಂದ, ಅನ್ಯ ಮನಸ್ಸಿನವಳಾಗಿರುವುದಕ್ಕೋಸ್ಕರ ಉಸಾಯುವನ್ನು ಚಿಂತಿಸುತಲಿದ್ದವಳು, ಗೋರಂಟಿ ಹಾಕಿಸಿಕೊಳ್ಳುವೆನೆಂದು ಹೇಳಿದಳು. ಆಗ ದಾನಿಯು ಪಹರೆಯವರ ಅನುಮತಿಯನ್ನು ಪಡೆದು ನಾಪಿತೆಯನ್ನು ಹಡಗಿ ನೊಳಗೆ ಕಳುಹಿಸಿಕೊಟ್ಟು ತಾನು ಮೊದಲಿನ ಹಾಗೆ ಅಡಿಗೆಯಾಗುವ ಸ್ಥಳಕ್ಕೆ ಹೊರಟು ಹೋದಳು. ನಾಮಿತೆಯು ಶೈವಲಿನಿಯನ್ನು ನೋಡಿ ಅವಕುಂಠನವನ್ನು ಮತ್ತಷ್ಟು ಚೆನ್ನಾಗಿ ಮರೆಮಾಡಿಕೊಂಡು, ಶೈವಲಿನಿಯ ಬಂದು ಕಾಲಿಗೆ ಗೋರಂಟಿಯನ್ನು ಹೆಚ್ಚಿಸುವುದಕ್ಕಾ ರಂಭಿಸಿದಳು, ಶೈವಲಿನಿಯು ನಾಪಿತೆಯನ್ನು ಹಾಗೆಯೇ ನೋಡುತಲಿದ್ದವಳು, ನಾಪಿತೆ ! ನಿಮ್ಮ ಊರು ಯಾವುದೆ ? ಎಂದಳು. ನಾಪಿತೆಯು ಮಾತನಾಡಲಿಲ್ಲ. ಶೈವಲಿನಿದು ಪುನಃ, ನಾಪಿತೆ ! ನಿನ್ನ ಹೆಸರೇನೆ ? ಎಂದಳು. ಆದರೂ ಉತ್ತರವು ಹೊರಡಲಿಲ್ಲ. « ನಾಪಿತೆ ! ನೀನು ಅಳುವುದೇತಕ್ಕೆ ? 1 1 ನಾವಿತೆಯು ಮೃದುವಾದ ಸ್ವರದಿಂದ, ಇಲ್ಲವೆಂದಳು. “ ಹ ದು, ಅಳುತಿ ಎಂದು ಹೇಳಿ ಶೈವಲಿನಿಯು ನಾವಿನೆದು ಗೋಷೆಯ ಬಟ್ಟೆಯನ್ನು ತೆಗೆದು ಹಾಕಿದಳು, ನಾಪಿತೆಯು ವಾಸ್ತವವಾಗಿ ಅಳುತ್ತಿದ್ದಳು. ಗೋವೆಯ ಬಟ್ಟೆಯು ತೆಗೆದುಹಾಕಿದಮೇಲೆ ನಾಪಿತರು ನಕ್ಕಳು. ಕೈವಲಿನಿ--ನೀನು ಎಂದಾಗಲೆ ತಿಳಿದುಕೊಂಡೆನು, ನನ್ನ ಮುಂದೆ ಮುಖ ಮುಚ್ಚಿಕೊಂಡರೆ ಸಾಗೀತೆ ? "ಇದೇನು ಕೇಡು ಬಂದುದು, ನಿನಗೆ ? ಇಲ್ಲಿಗೆ ಹೇಗೆ ಎಲ್ಲಿಂದ ಬಂದೆ ? ನಾಸಿತೆಯು ಮತ್ತಾರೂ ಅಲ್ಲ-ಸುಂದರಿ. ಸುಂದರಿಯು ಕಣ್ಮರಿಸಿಕೊಂಡು, ಬೇಗನೆ ಹೊರಟುಹೋಗು, ನನ್ನ ಸೀರೆಯನ್ನು ಟ್ಟುಕೊ, ಬಿಚ್ಚಿ ಕೊಡುವೆನು. ಈ ಸೊಪ್ಪಿನ ಎಟ್ಟಿಯನ್ನು ಕಂಕುಳಲ್ಲಿನಿಕಿ ಕೊಂಡು, ಮುಖದ ಪರದೆಯನ್ನು ಹಾಕಿಕೊಂಡು ಹೊರಟುಹೋಗೆಂದಳು. ಕೈವಲಿನಿಯು ವಿವನೆಯಾಗಿ, ನೀನು ಬರುವುದು ಹೇಗೆ ? ಎಂದಳು. ಸುಂದರಿ - ಎಲ್ಲಿಂದ ಹೇಗೆ ಬಂದೆನೊ, ಅದನ್ನೆಲ್ಲಾ ಅವಕಾಶ ಸಿಕ್ಕಿದಾಗ ಹೇಳು ವೆನು, ಈಗ ನಿನ್ನನ್ನು ಹುಡುಕಿಕೊಂಡು ಬಂದೆನು, ಪಲ್ಲಕ್ಕಿಯು ಗಂಗಾನದಿದು ಮಾರ್ಗವಾಗಿ ಹೋಯಿತೆಂದು ಜನರು ಹೇಳಿದರು, ನಾನು ಬೆಳಿಗ್ಗೆ ಎದ್ದು ಯಾರಿಗೂ ಏನೂ ಹೇಳದೆ ನಡೆದುಕೊಂಡು ಗಂಗಾತೀರಕ್ಕೆ ಬಂದೆನು. ಅಲ್ಲಿ ಹಡಗು, ಉತ್ತರಾಭಿ ಮುಖವಾಗಿ ಹೋಯಿತೆಂದು ಗೊತ್ತಾಯಿತು. ಬಹಳ ದೂರ ನಡೆದುಬಂದೆನು, ಕಾಲು ನೋವಾಯಿತು, ಅಲ್ಲಿ ಮಧ್ಯೆ ಒಂದು ಸಣ್ಣ ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡು
ಪುಟ:ಚಂದ್ರಶೇಖರ.djvu/೩೩
ಗೋಚರ