ಪುಟ:ಚಂದ್ರಶೇಖರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಚಂದ್ರಶೇಖರ. ಕುಲಸಂ ಬೆರಗಾಗಿ ಸೊಲ್ಲಿಲ್ಲದೆ ಸುಮ್ಮನಿದ್ದಳು. ದಳನಿಯು ಮಾಡಬಲ್ಲೆ ಯಾ ? ಹೇಳು ಎಂದಳು. ಕುಲಸಂ-ಕಾಗದವನ್ನು ಕೊಡುವವರು ಯಾರು ? ದಳನೀ--ನಾನು. ಕುಲಸಂ-ಅದೇನು ? ನಿನಗೆ ಹುಚ್ಚು ಹಿಡಿಯಿತೆ ? ದಳನೀ-ಮುಕ್ಕಾಲು ಪಾಲು. ಇಬ್ಬರೂ ಸುಮ್ಮನೆ ಕುಳಿತುಕೊಂಡರು. ಅವರಿಬ್ಬರೂ ನೀರವವಾಗಿರುವುದನ್ನು ಕಂಡು ನವಿಲುಗಳೆರಡೂ ತಮ್ಮತಮ್ಮ ಗೂಡುಗಳಲ್ಲಿದ್ದ ಅಡ್ಡಕಡ್ಡಿಗಳ ಮೇಲೆ ಹತ್ತಿ ಕೂತವು, ಗಿಣಿರು ಅನರ್ಥವಾಗಿ ಕೂಗಿತು, ಬೇರೆ ಪಕ್ಷಿಗಳು ತಮ್ಮತಮ್ಮ ಆಹಾ ರಕ್ಕೆ ಗಮನ ಕೊಟ್ಟವು. - ಸ್ವಲ್ಪ ಹೊತ್ತಿನಮೇಲೆ, ಕುಲಸ, ಕೆಲಸವು ಸಾಮಾನ್ಯವಾದುದು, ಅಷ್ಟು ದೊಡ್ಡ ದಲ್ಲ, ಒಬ್ಬ ಖೋಜನಿಗೆ ಏನಾದರೂ ಸ್ಪಲ್ಪ ಕೊಟ್ಟರೆ ಈ ಕಾಗದವನ್ನು ಈಗಲೆ ತಲ ವಿಸಿ ಬರುವೆನು ; ಆದರೆ ಕೆಲಸವನ್ನು ಮಾಡಬೇಕಾದರೆ ಧೈರಬೇಕು, ನಬಾಬನಿಗೆ ಗೊತ್ತಾದರೆ ಇಬ್ಬರೂ ಸಾಯಬೇಕಾಗುವುದು, ನಿನ್ನ ಕೆಲಸವನ್ನು ನೀನೇ ಬಲ್ಲೆ. ನಾನು ದಾಸಿ, ಕಾಗದವನ್ನು ಕೊಡು, ಸ್ವಲ್ಪ ಹಣವನ್ನೂ ಕೊಡು, ಎಂದಳು. ಅನಂತರ ಕುಲಸಂ ಕಾಗದವನ್ನು ತೆಗೆದುಕೊಂಡು ಹೋದಳು. ಈ ಕಾಗದ ವನ್ನು ಸೂತ್ರವಾಗಿ ಮಾಡಿಕೊಡು ವಿಧಾತನು ದಳನೀ ಮತ್ತು ಶೈವಲಿನೀ ಇವರಿಬ್ಬರ 'ಅದೃಷ್ಟವನ್ನು ಒಂದಾಗಿ ಪೋಣಿಸಿದನು.